More

    ಬೆಂಗಳೂರಲ್ಲಿ ಆಟೋ ಪ್ರಯಾಣ ದರ ಏರಿಕೆ: ಮಿನಿಮಮ್​ ಚಾರ್ಜ್​ 25ರಿಂದ 30 ರೂಪಾಯಿ! ನಂತರದ ದರ ಎಷ್ಟು ಗೊತ್ತಾ?

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ 8 ವರ್ಷದ ಬಳಿಕ ಆಟೋ ಪ್ರಯಾಣ ದರದಲ್ಲಿ ಹೆಚ್ಚಳ ಆಗಿದೆ. ಕನಿಷ್ಠ ದರ(ಮಿನಿಮಮ್​ ಚಾರ್ಜ್​)ವನ್ನು 25 ರಿಂದ 30 ರೂಪಾಯಿಗೆ ಏರಿಕೆ ಮಾಡಲಾಗಿದೆ. ಮಿನಿಮಮ್ ನಂತರ ಪ್ರತಿ ಕಿ.ಮೀ.ಗೆ 12 ರೂಪಾಯಿ ಇದ್ದ ದರ 15 ರೂ.ಗೆ ಏರಿಕೆ ಆಗಿದೆ.

    ಆಟೋ ಪ್ರಯಾಣ ದರ ಪರಿಷ್ಕರಿಸಿ ಹೊರಡಿಸಿರುವ ಹೊಸ ಆದೇಶ, 2021ರ ಡಿಸೆಂಬರ್ 1ರಿಂದ ಅನ್ವಯವಾಗಲಿದೆ. ಕನಿಷ್ಠ ದರ ಹಾಗೂ ನಂತರದ ಪ್ರತಿ ಕಿಮೀ ದರದಲ್ಲೂ ಹೆಚ್ಚಳ ಮಾಡಲಾಗಿದೆ. ಈ‌ ಮೊದಲು 1.8 ಕಿ.ಮೀ.ಗೆ ಮಿನಿಮಮ್​ ಚಾರ್ಜ್​ 25 ರೂಪಾಯಿ ಇತ್ತು. 1.8 ಕಿ.ಮೀ. ನಂತರ ಪ್ರಯಾಣಿಸಿದರೆ ಪ್ರತಿ ಕಿ.ಮೀ. 12 ರೂ. ದರ ಇತ್ತು. ಇದೀಗ ಈ ದರ 15 ರೂಪಾಯಿ ಆಗಿದೆ.

    ಗ್ಯಾಸ್​, ಡಿಸೇಲ್​, ಪೆಟ್ರೋಲ್​ ದರ 8 ವರ್ಷದಲ್ಲಿ ಗಗನಕ್ಕೇರಿವೆ. ಆಟೋ ಗ್ಯಾಸ್​ ದರವೂ ಏರಿಕೆ ಕಂಡಿದ್ದು, ಆಟೋ ಚಾಲಕರು ಸಂಕಷ್ಟಕ್ಕೀಡಾಗಿದ್ದಾರೆ. ಹಾಗಾಗಿ ಮೀಟರ್ ಹಾಕಿ ಬಾಡಿಗೆ ಓಡಿಸೋದು ಕಷ್ಟ ಆಗ್ತಿದೆ. ಆಟೋ ಮೀಟರ್ ದರ ಹೆಚ್ಚಳ ಮಾಡಬೇಕು ಎಂದು ಆಟೋ ಚಾಲಕರ ಸಂಘಟನೆಗಳು ಒತ್ತಾಯ ಮಾಡಿದ್ದವು. ಆಟೋ ಚಾಲಕರ ಮನವಿಗೆ ಮಣಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ರಾಜ್ಯ ಸಾರಿಗೆ ಇಲಾಖೆ, ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದ್ದಾರೆ.

    ರಾತ್ರಿ ವೇಳೆ ಒಂದೂವರೆ ಪಟ್ಟು ದರ ಇರಲಿದೆ. ಅಂದರೆ ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5ರ ವರೆಗೂ ಆಟೋ ಪ್ರಯಾಣ ದರ ಸಾಮನ್ಯ ದರ+ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು ಇರಲಿದೆ. ಕಾಯುವಿಕೆ ದರ 5 ನಿಮಿಷದ ನಂತರ ಮೊದಲ 15 ನಿಮಿಷಕ್ಕೆ ಅಥವಾ ಅದರ ಭಾಗಕ್ಕೆ 5 ರೂಪಾಯಿ ಇರಲಿದೆ.

    ಇಂದು 11ನೇ ದಿನದ ಪುಣ್ಯತಿಥಿ: ನೋವು ತುಂಬಿದ ಮನದಲ್ಲೇ ಪರೀಕ್ಷೆ ಬರೆಯಲು ಹೊರಟ ಪುನೀತ್​ರ ಕಿರಿ ಮಗಳು

    ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಿದ್ದರೆ ಪುನೀತ್​ ಸಾಯುತ್ತಿರಲಿಲ್ಲ… ಸ್ಲೋ ಪಾಯಿಸನ್​ ಕುರಿತು ಜನರಿಗೆ ಸತ್ಯ ತಿಳಿಸಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts