More

    ಹಿರಿಯ ವಕೀಲ, ಸುಪ್ರೀಂಕೋರ್ಟ್​ ಎಎಸ್​ಜಿ ರೂಪಿಂದರ್​ ಸಿಂಗ್​ ಸೂರಿ ನಿಧನ

    ನವದೆಹಲಿ: ಹಿರಿಯ ವಕೀಲ, ಸುಪ್ರೀಂಕೋರ್ಟ್​ನ ಹೆಚ್ಚುವರಿ ಸಾಲಿಸಿಟರ್​ ಜನರಲ್​(ಎಎಸ್​ಜಿ) ರೂಪಿಂದರ್​ ಸಿಂಗ್​ ಸೂರಿ ಅವರು ಇಂದು(ಸೋಮವಾರ) ಬೆಳಗ್ಗೆ ನಿಧನರಾದರು.

    ಮೃತರು ಪತ್ನಿ ಗುರ್ವಿಂದ್​ ಸೂರಿ ಮತ್ತು ಪುತ್ರಿಯರಾದ ಸುರುಚಿ ಹಾಗೂ ಸಿಮರ್​ ಅವರನ್ನು ಅಗಲಿದ್ದಾರೆ. ಇವರೂ ಕೂಡ ವಕೀಲರಾಗಿದ್ದಾರೆ.

    2009ರಲ್ಲಿ ಸುಪ್ರೀಂ ಕೋರ್ಟ್​ನ ಹಿರಿಯ ವಕೀಲರಾಗಿ ನೇಮಕಗೊಂಡಿದ್ದ ರೂಪಿಂದರ್​ ಸಿಂಗ್​ ಸೂರಿ ಅವರನ್ನ 2020ರ ಜೂನ್​ನಲ್ಲಿ ಹೆಚ್ಚುವರಿ ಸಾಲಿಸಿಟರ್​ ಜನರಲ್​ ಅನ್ನಾಗಿ ನೇಮಿಸಲಾಗಿತ್ತು. ಸುಪ್ರೀಂಕೋರ್ಟ್​ ಬಾರ್​ ಅಸೋಸಿಯೇಷನ್​ ಮತ್ತು ಸುಪ್ರೀಂ ಕೋರ್ಟ್​ ಅಡ್ವೀಕೇಟ್ಸ್​ ಆನ್​ ರೆಕಾರ್ಡ್​ ಅಸೋಸಿಯೇಷನ್​ ಅಧ್ಯರಾಗಿಯೂ ಸೇವೆ ಸಲ್ಲಿಸಿದ್ದರು.

    ರೂಪಿಂದರ್​ ಸಿಂಗ್​ ಸೂರಿ ಅವರು ಸುಮಾರು 15 ವರ್ಷ ಪಂಜಾಬ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಸ್ಥಾಯಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.

    ಭ್ರಷ್ಟಾಚಾರ ಆರೋಪ: ಕೊನೆಗೂ ಮೌನ ಮುರಿದ ರವಿ ಚನ್ನಣ್ಣನವರ್! ​ಎಳೆಎಳೆಯಾಗಿ ಬಿಚ್ಚಿಟ್ಟ ಅವರ ಸತ್ಯ ಇಲ್ಲಿದೆ

    ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ತಲೆ ಎತ್ತಿದ ಮಸೀದಿ? ಕೂಲಿ ಕಾರ್ಮಿಕರ ರೆಸ್ಟ್​ ರೂಂ ಆಯ್ತು ಪ್ರಾರ್ಥನಾ ಮಂದಿರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts