More

    ವಯನಾಡಿನಲ್ಲಿ ಕರ್ನಾಟಕ ಮೂಲದ ಇಬ್ಬರು ನಕ್ಸಲರ ಬಂಧನ

    ಗುಂಡ್ಲುಪೇಟೆ: ನೆರೆಯ ವಯನಾಡಿನಲ್ಲಿ ಕರ್ನಾಟಕ ಮೂಲದ ಇಬ್ಬರು ನಕ್ಸಲರನ್ನು ಬಂಧನ ಕೇರಳದ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.

    ಕರ್ನಾಟಕ ಮತ್ತು ವಯನಾಡು ಗಡಿ ಪ್ರದೇಶದಲ್ಲಿ ಎಟಿಎಸ್‌ ಕಾರ್ಯಾಚರಣೆ ನಡೆಸಿದ ವೇಳೆ ಪಶ್ಚಿಮ ಘಟ್ಟವಲಯ ಸಮಿತಿ ಬಿ.ಜಿ.ಕೃಷ್ಣಮೂರ್ತಿ ಮತ್ತು ಕಬನಿದಳಂ ಕೇಡರ್‌ನ ಸಾವಿತ್ರಿ ಸಿಕ್ಕಿಬಿದ್ದಿದ್ದಾರೆ. ಬಂಡೀಪುರ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಸುಲ್ತಾನ್ ಬತ್ತೇರಿಯಲ್ಲಿ ಬಂಧನ ಕಾರ್ಯಾಚರಣೆ ನಡೆದಿದೆ.

    ಸಾವಿತ್ರಿಗೆ ಅನಾರೋಗ್ಯ ಸಮಸ್ಯೆಯಿಂದ ಸುಲ್ತಾನ್ ಬತ್ತೆರಿಯ ಆಸ್ಪತ್ರೆಗೆ ಬಂದಿರುವ ಖಚಿತ ಮಾಹಿತಿ ಮೇರೆಗೆ ತುರ್ತು ಕಾರ್ಯಾಚರಣೆ ನಡೆಸಿದ ಕೇರಳದ ಭಯೋತ್ಪಾದನಾ ನಿಗ್ರಹ ದಳವು ಇಬ್ಬರನ್ನು ಬಂಧಿಸಿದೆ ಎಂದು ಕೇರಳ ಪೋಲಿಸರು ತಿಳಿಸಿದ್ದಾರೆ.

    ಪಶ್ಚಿಮ ಘಟ್ಟ ಉಳಿಸಿ ಹೋರಾಟ, ಕುದುರೆಮುಖ ಉಳಿಸಿ ಮುಂತಾದ ಚಳವಳಿ ಮೂಲಕ ಪ್ರವರ್ಧಮಾನಕ್ಕೆ ಬಂದು ಬಳಿಕ ಇದ್ದಕ್ಕಿದ್ದಂತೆ ನಕ್ಸಲ್‌ ವಲಯದಲ್ಲಿ ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ಕಾಣಿಸಿಕೊಂಡಿದ್ದರು.

    ಕೇರಳದ ವಯನಾಡಿನಲ್ಲಿ ಇಬ್ಬರು ನಕ್ಸಲರ ಬಂಧನ ಪ್ರಕರಣ ಹಿನ್ನೆಲೆ ರಾಜ್ಯದಲ್ಲೂ ಎನ್‌ಐಎ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಚಿಕ್ಕಮಗಳೂರಿನ ಕಳಸ, ಶೃಂಗೇರಿ, ಶಿವಮೊಗ್ಗದ ತೀರ್ಥಹಳ್ಳಿಯಲ್ಲೂ ಪರಿಶೀಲನೆ ನಡೆಸಿರುವ ಎನ್‌ಐಎ, ಹಲವಾರು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಕೃಷಿಯಲ್ಲಿ ಸಾಧನೆ ಮಾಡಲು ಬಯಸಿದ್ದೀರಾ? ಇಲ್ಲಿದೆ ಸುವರ್ಣಾವಕಾಶ, ಈ 4 ದಿನದಲ್ಲಿ ಒಮ್ಮೆಯಾದ್ರೂ ಬನ್ನಿ

    ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಿದ್ದರೆ ಪುನೀತ್​ ಸಾಯುತ್ತಿರಲಿಲ್ಲ… ಸ್ಲೋ ಪಾಯಿಸನ್​ ಕುರಿತು ಜನರಿಗೆ ಸತ್ಯ ತಿಳಿಸಿ…

    ಅಪ್ಪು ಸಾವು ನ್ಯಾಯವೇ? ದೇವಿಗೆ ಅಭಿಮಾನಿ ಬರೆದ ಈ ಪತ್ರ ಓದುತ್ತಿದ್ದರೆ ಕಣ್ಣೀರಿನ ಜತೆಗೆ ಸಿಟ್ಟು ಬರುತ್ತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts