More

    ಕನ್ನಡ ಕಿರುತೆರೆಯಿಂದ 2 ವರ್ಷ ಅನಿರುದ್ಧ್​ ಬ್ಯಾನ್​? ಯಾವುದೇ ಧಾರಾವಾಹಿ, ಶೋಗೆ ಆಯ್ಕೆ ಮಾಡದಂತೆ ವಾಹಿನಿಗಳಿಗೆ ಪತ್ರ ಬರೆದ ಸಂಘ

    ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆಜೊತೆಯಲಿ’ ಧಾರಾವಾಹಿಯಿಂದ, ನಾಯಕ ಅನಿರುದ್ಧ ಹೊರಬಂದಿದ್ದಾರೆ ಎಂಬ ಸುದ್ದಿಯೊಂದು ಶುಕ್ರವಾರ ವಿಪರೀತ ಚರ್ಚೆಯಾಗಿತ್ತು. ಇದೀಗ ಕನ್ನಡ ಕಿರುತೆರೆಯಿಂದಲೇ ಅನಿರುದ್ಧ್​ ಅವರನ್ನು 2 ವರ್ಷ ಬ್ಯಾನ್​ ಮಾಡಲಾಗಿದೆ ಎಂಬ ಸುದ್ದಿ ಬಂದಿದೆ. ಇದಕ್ಕೆ ಪೂರ ಎಂಬಂತೆ ‘ಯಾವುದೇ ಧಾರವಾಹಿ, ರಿಯಾಲಿಟಿ ಶೋಗಳಿಗೆ ಅನಿರುದ್ಧ್​ ಅವರನ್ನು ಆಯ್ಕೆ ಮಾಡಿಕೊಳ್ಳದೆ ನಿರ್ಮಾಪಕರ ಭಾವನೆಗೆ ಸ್ಪಂದಿಸಬೇಕೆಂದು’ ಎಂದು ಎಲ್ಲ ಕನ್ನಡ ಮನರಂಜನಾ ವಾಹಿನಿಗಳ ಮುಖ್ಯಸ್ಥರಿಗೆ ಕರ್ನಾಟಕ ಟೆಲಿವಿಷನ್ ಪ್ರೊಡ್ಯೂಸರ್ ಅಸೋಸಿಯೇಷನ್ ಬರೆದಿರುವ ಪತ್ರ ವೈರಲ್​ ಆಗಿದ್ದು, ತರೇಹವಾರಿ ಚರ್ಚೆಯಾಗುತ್ತಿದೆ.

    ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್​ರ ಪಾತ್ರ ನಿರ್ವಹಿಸುತ್ತಿರುವ ಅನಿರುದ್ಧ್ ಅವರು ಚಿತ್ರೀಕರಣ ನಡೆಯುವ ಸಮಯದಲ್ಲಿ ಸಹಕರಿಸಿದೆ, ನಿರ್ದೇಶಕನ್ನು ನಿಂದಿಸಿ ಚಿತ್ರೀಕರಣದ ವೇಳೆ ಹೊರ ನಡೆದಿದ್ದಾರೆ. ನಿರ್ಮಾಪಕರು ಕರೆ ಮಾಡಿ ವಿನಂತಿಸಿಕೊಂಡಡೂ ಕಿವಿಗೊಡದೆ ಅಸಹಕಾರ ತೋರಿದ್ದಾರೆ. ಬಹಳಷ್ಟು ಬಾರಿ ಚಿತ್ರೀಕರಣಕ್ಕೆ ಅಡಚಣೆ ಮಾಡಿರುತ್ತಾರೆ. ನಿರ್ಮಾಪಕರಿಗೆ ಬಹಳಷ್ಟು ನಷ್ಟ ಹಾಗೂ ಮಾನಸಿಕ ಒತ್ತಡ ಆಗಿದೆ. ಆದ್ದರಿಂದ ಕಿರುತೆರೆಯ ಎಲ್ಲಾ ನಿರ್ಮಾಪಕರು ಸಭೆ ಸೇರಿ, ನಟ ಅನಿರುದ್ಧ್​ ಅವರನ್ನು ಎರಡು ವರ್ಷ ಕಾಲ ಕನ್ನಡ ಧಾರವಾಹಿ, ರಿಯಾಲಿಟಿ ಶೋಗಳಿಗೆ ಆಯ್ಕೆ ಮಾಡಿಕೊಳ್ಳಬಾರದು ಎಂದು ಒಕ್ಕೊರಲ ತೀರ್ಮಾನ ಕೈಗೊಳ್ಳಲಾಗಿದೆ. ಆದ್ದರಿಂದ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ತಾವು ಸಹ ಯಾವುದೇ ಧಾರಾವಾಹಿ, ರಿಯಾಲಿಟಿ ಶೋಗಳಿಗೆ ಅನಿರುದ್ಧ್​ ಅವರನ್ನು ಆಯ್ಕೆ ಮಾಡಿಕೊಳ್ಳದೆ ನಿರ್ಮಾಪಕರ ಭಾವನೆಗೆ ಸ್ಪಂದಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ’ ಎಂದು ಕರ್ನಾಟಕ ಟೆಲಿವಿಷನ್ ಪ್ರೊಡ್ಯೂಸರ್ ಅಸೋಸಿಯೇಷನ್ ಪತ್ರ ಬರೆದಿದ್ದಾರೆ. ನಿರ್ಮಾಪಕ ಆರೂರು ಜಗದೀಶ್ ಅವರು ನಟ ಅನಿರುದ್ಧ್​ ಮೇಲೆ ಕೊಟ್ಟ ದೂರಿನನ್ವಯ ಈ ಪತ್ರ ಬರೆಯಲಾಗಿದೆ.

    ‘ಜೊತೆಜೊತೆಯಲಿ’ ಧಾರಾವಾಹಿಯಲ್ಲಿ ಅನಿರುದ್ಧ ಅವರು ಆರ್ಯವರ್ಧನ ಎಂಬ ಪಾತ್ರ ಮಾಡುತ್ತಿದ್ದು, ಈ ಧಾರಾವಾಹಿ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಜನಪ್ರಿಯವಾಗಿದೆ. ಅಷ್ಟೇ ಅಲ್ಲ, ಕಿರುತೆರೆ ಇತಿಹಾಸದಲ್ಲೇ ಅತೀ ಹೆಚ್ಚು ಟಿಆರ್​ಪಿ ಗಳಿಸಿದ ಧಾರಾವಾಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗಿರುವಾಗ, ಧಾರಾವಾಹಿ ತಂಡದಲ್ಲಿ ಕಾರಣಾಂತರಗಳಿಂದ ಬಿರುಕು ಮೂಡಿದ್ದು, ಈ ಸಮಸ್ಯೆ ಹೇಗೆ ಅಂತ್ಯವಾಗುತ್ತದೆ ಎಂಬ ಕುತೂಹಲವಿದೆ. ಅನಿರುದ್ಧ್​ ಮತ್ತು ತಂಡದವರ ನಡುವೆ ಮನಸ್ಥಾಪವಾಗಿದೆ, ಅವರನ್ನು ಧಾರಾವಾಹಿ ತಂಡದಿಂದ ಕೈಬಿಡಲಾಗಿದೆ, ಸದ್ಯದಲ್ಲೇ ಅವರ ಜಾಗಕ್ಕೆ ಮತ್ತೊಬ್ಬ ನಟ ಬರುವ ಸಾಧ್ಯತೆ ಇದೆ ಎಂಬಂತಹ ಮಾತುಗಳು ಕೇಳಿ ಬಂದಿವೆ.

    ಈ ಕುರಿತು ಅನಿರುದ್ಧ್​ ಅವರನ್ನು ವಿಜಯವಾಣಿ ಮಾತನಾಡಿಸಿದಾಗ, “ನಾನು ಸಹ ಈ ವಿಷಯಗಳನ್ನು ಮಾಧ್ಯಮಗಳಿಂದ ಕೇಳುತ್ತಿದ್ದೇನೆಯೇ ಹೊರತು, ನಿರ್ದೇಶಕ ಆರೂರ್​ ಜಗದೀಶ್​ ಅಥವಾ ಚಾನಲ್​ ಕಡೆಯಿಂದ ಇದುವರೆಗೂ ಯಾವುದೇ ಮಾಹಿತಿ ಬಂದಿಲ್ಲ. ಅಧಿಕೃತವಾಗಿ ಮಾಹಿತಿ ಇಲ್ಲವಾದ್ದರಿಂದ, ಮಾತನಾಡುವುದಕ್ಕೆ ಸಾಧ್ಯವಿಲ್ಲ. ಪ್ರತಿ ಮನೆಯಲ್ಲೂ ಮನಸ್ತಾಪ ಸಾಮಾನ್ಯ. ಮನಸ್ತಾಪ ಹೇಗೆ ಸಹಜವೋ, ಪ್ರೀತಿ ಸಹ ಅಷ್ಟೇ ಸಹಜ. ಅದನ್ನು ನಾವು ಬೀದಿಗೆ ತರುವುದಿಲ್ಲ. ಏನಾಗಿದೆ ಎಂದು ನನಗೆ ಗೊತ್ತಿಲ್ಲ. ನಕಾರಾತ್ಮಕವಾದ ಮಾತುಗಳು ನಮ್ಮ ನಿರ್ದೇಶಕ ಜಗದೀಶ್​ ಅಥವಾ ಚಾನಲ್​ ಕಡೆಯಿಂದ ಬಂದರೆ ಅಥವಾ ನನ್ನ ಮೇಲೆ ನೇರವಾಗಿ ಆರೋಪಗಳನ್ನು ಮಾಡಿದರೆ, ಆಗ ನಾನು ಸ್ಪಷ್ಟೀಕರಣ ಕೊಡುತ್ತೇನೆ. ಪತ್ರಿಕಾಗೋಷ್ಠಿ ಕರೆದು ವಿವರವಾಗಿ ಮಾತನಾಡುತ್ತೇನೆ’ ಎಂದಿದ್ದಾರೆ.

    ಇದು ಮೊದಲೇನಲ್ಲ: “ಜೊತೆಜೊತೆಯಲಿ” ಧಾರಾವಾಹಿಯಲ್ಲಿ ಹೀಗಾಗುತ್ತಿರುವುದು ಇದು ಮೊದಲೇನಲ್ಲ. ಇದಕ್ಕೂ ಮುನ್ನ ನಾಯಕಿ ಮೇಘಾ ಶೆಟ್ಟಿ ಹಾಗೂ ತಂಡದವರ ನಡುವೆ ಇದೇ ರೀತಿ ಮನಸ್ತಾಪ ಭುಗಿಲೆದ್ದಿದ್ದು, ಧಾರಾವಾಹಿಯಿಂದ ಮೇಘಾ ಹೊರನಡೆದರು ಎಂದು ಸುದ್ದಿಯಾಗಿತ್ತು. ಆ ನಂತರ ಮೇಘಾ ತಡಕ್ಕೆ ವಾಪಸ್ಸಾಗುವ ಮೂಲಕ ಈ ಪ್ರಕರಣ ಸುಖಾಂತ್ಯವಾಗಿತ್ತು.

    ‘ಜೊತೆ ಜೊತೆಯಲಿ’ ಸ್ಟಾರ್​ಗೆ ಗೇಟ್​ಪಾಸ್​: ಸುದ್ದಿಗೋಷ್ಠಿಯಲ್ಲಿ ಮನದ ನೋವನ್ನು ಬಿಚ್ಚಿಟ್ಟ ಅನಿರುದ್ಧ್​

    ಶಾಲಾ ಬಸ್​- ಕ್ಯಾಂಟರ್​ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು

    ಇದು ಮಾತ್ರೆಯಲ್ಲ, ಮದುವೆ ಆಮಂತ್ರಣ ಪತ್ರಿಕೆ! ಸಖತ್​ ವೈರಲ್​ ಆಗ್ತಿದೆ ಫಾರ್ಮಾಸಿಸ್ಟ್- ನರ್ಸ್​ ಜೋಡಿಯ ವೆಡ್ಡಿಂಗ್​ ಕಾರ್ಡ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts