More

    ನಿವೃತ್ತ ಯೋಧನ ಹೋರಾಟದಿಂದ ತುಂಬಿದ ಕೆರೆಗಳು! ಇವರ ಸಾಹಸಕ್ಕೊಂದು ಸಲಾಂ

    ಆನೇಕಲ್: ನಿವೃತ್ತ ಯೋಧರೊಬ್ಬರ ಹೋರಾಟದ ಫಲ ಆನೇಕಲ್​ ತಾಲೂಕು ವ್ಯಾಪ್ತಿಯ 14 ಕೆರೆಗಳಿಗೆ ಗಂಗೆ ಹರಿಯುತ್ತಿದ್ದಾಳೆ. ಊರಿನಲ್ಲಿ ನೀರು ನೋಡಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

    ದೇಶ ಕಾಯುವ ಸೈನಿಕ ಅಂದ್ರೆ ನಮ್ಮೆಲ್ಲರ ಹೆಮ್ಮೆ. ಸೇವೆಯಿಂದ ನಿವೃತ್ತಿ ಆದರೂ ಹುಟ್ಟೂರಿನಲ್ಲಿ ಜೀವಜಲ-ಕೆರೆಗಳ ಸಂರಕ್ಷಣೆಗೆ ಸತತ ಮೂರ್ನಾಲ್ಕು ವರ್ಷದಿಂದ ಏಕಾಂಗಿಯಾಗಿ ಹೋರಾಡುತ್ತಿದ್ದಾರೆ. ಅದರ ಫಲ ಕೆಲವು ಕೆರೆಗಳಲ್ಲಿ ನೀರು ತುಂಬಿದೆ. ಅಂದಹಾಗೆ ಅ ಮಹಾನ್​ ಸಾಧಕರ ಹೆಸರು ನಿ. ಕ್ಯಾಪ್ಟನ್​ ಸಂತೋಷ್ ಕುಮಾರ್​.

    ಆನೇಕಲ್ ತಾಲೂಕಿನ ಮುತ್ತಾನಲ್ಲೂರು ಗ್ರಾಮದ ಸಂತೋಷ್ ಕುಮಾರ್, 2008ರಲ್ಲಿ ಸೇನೆಯಿಂದ ನಿವೃತ್ತಿಯಾದರು. ಅಂದಿನಿಂದ ಹುಟ್ಟೂರಿನ ಕೆರೆಗಳ ಉಳಿವಿಗಾಗಿ ಹೋರಾಟ ಮಾಡುತ್ತಿರುವ ಸಂತೋಷ್​, ರಾಜಕಾಲುವೆ ಒತ್ತುವರಿ ತೆರವಿಗಾಗಿ ಹಗಲಿರುಳು ಶ್ರಮಿಸಿದರು. ದಿನಬೆಳಗಾದರೆ ಕೆರೆಗಳ ಬಗ್ಗೆ ಮಾಹಿತಿ ಕಲೆಹಾಕಿ ಕಚೇರಿಗಳಿಗೆ ಅಲೆದಾಡಿದರು. 2019ರಲ್ಲಿ ಕ್ಯಾಂಟರ್ ನೀರು ಮಾಫಿಯ ಬಗ್ಗೆ ದನಿಯೆತ್ತಿದ್ದ ಸಂತೋಷ್ ಕುಮಾರ್ ಅದರ ವಿರುದ್ಧವೂ ಹೋರಾಡಿದ್ದರು. ‘ದಿಗ್ವಿಜಯ’ ಸುದ್ದಿ ವಾಹಿನಿಯಲ್ಲಿ ಮೊದಲ ಬಾರಿಗೆ ವಾಟರ್ ಮಾಫಿಯಾ ಬಗ್ಗೆ ವರದಿ ಪ್ರಸಾರವಾಗಿತ್ತು. ಮುತ್ತಾನಲ್ಲೂರು ವಾಟರ್ ಮಾಫಿಯಾ ನಿಲ್ಲಿಸಲು ಸಂತೋಷ್ ಪ್ರಮುಖ ಪಾತ್ರವಹಿಸಿದ್ದರು.

    ನಿವೃತ್ತ ಯೋಧನ ಹೋರಾಟದಿಂದ ತುಂಬಿದ ಕೆರೆಗಳು! ಇವರ ಸಾಹಸಕ್ಕೊಂದು ಸಲಾಂ

    ಇದಾದ ಬಳಿಕ ನಿರಂತರವಾಗಿ ಕೆರೆ ಉಳಿವಿಗಾಗಿ ಹೋರಾಟ ಮಾಡಿದರು. ಮುತ್ತಾನಲ್ಲೂರು ಅಮಾನಿ‌ಕೆರೆ, ಮುತ್ತಾನಲ್ಲೂರು ದೇವರಕೆರೆ, ಸಿಂಗೇನ ಅಗ್ರಹಾರ ಕೆರೆ, ನಾರಾಯಣಘಟ್ಟ ಕೆರೆ, ಬತ್ತಲ ಕೆರೆ, ಕಾಚನಾಯಕನಹಳ್ಳಿ ಕೆರೆ, ಇಗ್ಲೂರು ಕೆರೆ, ಚಂದಾಪುರ ಕೆರೆ, ಇಚ್ಚಂಗೂರು ಕೆರೆ, ಬೆಂಡಿಗಾನಹಳ್ಳಿ ಕೆರೆ, ಬಿದರಗುಪ್ಪೆ ಕೆರೆ, ಚಂಬೇನಹಳ್ಳಿ ಕೆರೆ, ಹೊಲಗಾರ ಕಳ್ಳಳ್ಳಿ ಹಾಗೂ ಸರ್ಜಾಪುರ ಕೆರೆಗಳ ಉಳಿವಿಗಾಗಿ ಹೋರಾಡುತ್ತಿದ್ದಾರೆ. ರಾಜಕಾಲುವೆ ಹಾದುಹೋಗಿರುವ ಮಾರ್ಗಗಳ ಮಾಹಿತಿ ಕಲೆ ಹಾಕಿ ಒತ್ತುವರಿ ತೆರವು ಮಾಡಿಸುತ್ತಿದ್ದಾರೆ.

    ನಿವೃತ್ತ ಯೋಧನ ಹೋರಾಟದಿಂದ ತುಂಬಿದ ಕೆರೆಗಳು! ಇವರ ಸಾಹಸಕ್ಕೊಂದು ಸಲಾಂ
    ಮುತ್ತಾನಲ್ಲೂರು ಕೆರೆಯಿಂದ ಬತ್ತಲ ಕೆರೆಯವರೆಗೆ ನಾಲ್ಕೂವರೆ ಕಿಲೋಮೀಟರ್ ರಾಜಕಾಲುವೆ ಒತ್ತುವರಿಯಾಗಿತ್ತು. ಇದನ್ನು ತೆರವು ಮಾಡಿಸಿದ್ದಾರೆ. ಗಟ್ಟಹಳ್ಳಿಯಿಂದ ಮುತ್ತಾನಲ್ಲೂರು ಕೆರೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯ 5 ಕಿಲೋಮೀಟರ್ ಒತ್ತುವರಿ ತೆರವು ಕಾರ್ಯ ಪ್ರಗತಿಯಲ್ಲಿದೆ. ಬತ್ತಲ ಕೆರೆಯಿಂದ ಬಿದರಗುಪ್ಪೆ ರಾಜಕಾಲುವೆಯ ಒಂದೂವರೆ ಕಿಲೋಮೀಟರ್ ಒತ್ತುವರಿಯಾಗಿದ್ದು, ಇದರ ತೆರವಿಗೂ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಯಾವುದೇ ಲಾಭ ಬಯಸದೆ ಮೂರು ವರ್ಷಗಳಿಂದ ಕೆರೆಗಳ ಬಗ್ಗೆ ಅಧ್ಯಯನ ಮಾಡಿ, ಅವುಗಳ ಉಳಿವಿಗಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮನೆ ಬಾಗಿಲಿಗೆ ಅಲೆಯುತ್ತಿದ್ದಾರೆ. ಯಾವುದೇ ಬಲಾಢ್ಯರಿದ್ದರೂ ತಲೆಕೆಡಿಸಿಕೊಳ್ಳದೆ ಹೋರಾಡುತ್ತಿದ್ದಾರೆ. ಈ ಕಾರ್ಯಕ್ಕೆ ಎನ್​ಜಿಒಗಳ ಸಹಕಾರವನ್ನೂ ಪಡೆಯುತ್ತಿದ್ದಾರೆ.

    ಇದೆಲ್ಲದರ ಪರಿಣಾಮ ಮಳೆ ನೀರು ಕೆರೆ ಸೇರುತ್ತಿದೆ. ಬರಿದಾಗಿದ್ದ ಕೆರೆಗಳ ಒಡಲಿಗೆ ಜೀವಜಲ ಸೇರುತ್ತಿದೆ. ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದಾಗಿ ಮುತ್ತಾನಲ್ಲೂರು ಕೆರೆ ಕೋಡಿ ಹರಿದಿದೆ. ಬತ್ತಲ ಕೆರೆ ತುಂಬಿ ಹರಿಯುತ್ತಿದೆ. (ದಿಗ್ವಿಜಯ ನ್ಯೂಸ್)

    ಭಿಕ್ಷೆ ಬೇಡುತ್ತಿದ್ದ ವೃದ್ಧೆಗೆ ಅಚ್ಛೇ ದಿನ್​! ನೆಲಮಂಗಲ ತಹಸೀಲ್ದಾರ್ ಮಂಜುನಾಥ್​ರ ಕಾರ್ಯಕ್ಕೊಂದು ಸಲಾಂ

    ನಿನ್ನೆ ಮಂಡ್ಯದಲ್ಲಿ ಡಿಕೆಶಿ ಹೊಡೆದದ್ದು ಕೈ ಮುಖಂಡನಿಗಲ್ಲ, ಜೆಡಿಎಸ್​ ಕಾರ್ಯಕರ್ತನಿಗೆ!

    ಸಲಿಂಗಕಾಮಕ್ಕೆ ಒಪ್ಪದ ಸರ್ಕಾರಿ ಶಾಲೆ ಶಿಕ್ಷಕನ ಬರ್ಬರ ಹತ್ಯೆ! ಬೆಚ್ಚಿಬೀಳಿಸುತ್ತೆ ಆ ರಾತ್ರಿಯ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts