More

    ಬಹುಭಾಷಾ ನಟ ಕ್ಯಾಪ್ಟನ್ ಚಲಪತಿ ಚೌದ್ರಿ ಇನ್ನಿಲ್ಲ

    ರಾಯಚೂರು: ಬಹುಭಾಷಾ ಸಿನಿಮಾ ನಟ ಕ್ಯಾಪ್ಟನ್ ಚಲಪತಿ ಚೌದ್ರಿ (67) ಬುಧವಾರ ತಡರಾತ್ರಿ ನಿಧನರಾದರು. ರಾಯಚೂರು ನಗರದ ಕೆ.ಎಂ.ಕಾಲನಿಯಲ್ಲಿ ವಾಸವಿದ್ದ ಚಲಪತಿ ಚೌದ್ರಿ ಅವರನ್ನು ಅನಾರೋಗ್ಯ ಹಿನ್ನೆಲೆ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.

    ಆಂಧ್ರದ ವಿಜಯವಾಡ ಮೂಲದ ಚೌದ್ರಿ ಅವರು ರಾಯಚೂರಿನಲ್ಲಿ ಮೊದಲ ಬಾರಿ ಕೇಬಲ್ ಆರಂಭಿಸಿದ್ದರು. ಕನ್ನಡ, ತೆಲುಗು, ಹಿಂದಿ ಸೇರಿದಂತೆ 100ಕ್ಕೂ ಹೆಚ್ಚು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಚಲಪತಿ ಬಣ್ಣ ಹಚ್ಚಿದ್ದರು. ಶಿವರಾಜ್ ಕುಮಾರ್, ಚಿರಂಜೀವಿ, ನಾಗಾರ್ಜುನ್ ಸೇರಿದಂತೆ ಅನೇಕ ಸ್ಟಾರ್ ನಟರ ಜೊತೆ ಅಭಿನಯಿಸಿದ್ದರು.

    ಚೌದ್ರಿ ಅಗಲಿಕೆಗೆ ಸಿನಿಮಾ ರಂಗ ಸಂತಾಪ ಸೂಚಿಸಿದೆ. ಮೃತರಿಗೆ ಪತ್ನಿ, ಇಬ್ಬರು ಮಕ್ಕಳು, ಮೊಮ್ಮಕ್ಕಳು ಇದ್ದಾರೆ. ಸ್ವಗೃಹದಲ್ಲಿ ಅಂತಿಮದರ್ಶಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಗರದ ಬಿಆರ್​ಬಿ ಕಾಲೇಜು ಸಮೀಪದ ಮುಕ್ತಿಧಾಮದಲ್ಲಿ ಇಂದು(ಗುರುವಾರ) ಸಂಜೆ 4:30ಕ್ಕೆ ಅಂತ್ಯಕ್ರಿಯೆ ನಡೆಯಲಿದೆ.

    PSI ಹುದ್ದೆ ಅಕ್ರಮ: ಮೊದಲ ರಾತ್ರಿಯ ಖುಷಿಯಲ್ಲಿದ್ದವನಿಗೆ ಶಾಕ್ ಕೊಟ್ಟ ಸಿಐಡಿ​! ದೇವಸ್ಥಾನದಲ್ಲೇ ನವವಿವಾಹಿತ ವಶಕ್ಕೆ

    ಫ್ಯಾಟ್​ ಬರ್ನ್​ ಸರ್ಜರಿ ಪ್ರಾಣಕ್ಕೆ ಕುತ್ತು ತರುತ್ತಾ? ನಟಿ ಚೇತನಾ ಸಾವಿನ ಬೆನ್ನಲ್ಲೇ ಮಹತ್ವದ ವಿಚಾರ ತಿಳಿಸಿದ ವೈದ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts