More

    ತಿ.ನರಸೀಪುರದಲ್ಲೊಬ್ಬ ಪೋಲಿ ಪ್ರೊಫೆಸರ್​! ತರಗತಿಯಲ್ಲೂ ಹಗ್​, ಕಿಸ್​ ಅನ್ನುತ್ತಾನೆ…

    ಮೈಸೂರು: ತಿ.ನರಸೀಪುರದಲ್ಲೊಬ್ಬ ಪೋಲಿ ಪ್ರೊಫೆಸರ್​ ಇದ್ದಾನೆ. ಈತ ವಿದ್ಯಾರ್ಥಿಗಳನ್ನೇ ಪ್ರೀತಿಸ್ತಾನಂತೆ.. ಅಂಕ ಕಡಿತದ ಭಯ ಹುಟ್ಟಿಸಿ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದಾನಂತೆ… ಅಷ್ಟೇ ಅಲ್ಲ, ತರಗತಿಯಲ್ಲಿ ಪಾಠ ಮಾಡುವಾಗ ವಿದ್ಯಾರ್ಥಿನಿಯರ ಜತೆ ಅಸಭ್ಯ ಮಾತುಗಳನ್ನೂ ಹಾಡ್ತಾನಂತೆ, ಮುತ್ತು, ತಬ್ಬಿಕೊಳ್ಳುವ… ಎಂದೆಲ್ಲ ಹೇಳ್ತಾನಂತೆ!

    ಇಂತಹ ಗಂಭೀರ ತಿ.ನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸುನೀಲ್ ಕುಮಾರ್ ವಿರುದ್ಧ ಕೇಳಿಬಂದಿದೆ. ಈ ಬಗ್ಗೆ ಸ್ವತಃ ವಿದ್ಯಾರ್ಥಿನಿಯರೇ ಕಷ್ಟ ಹೇಳಿಕೊಂಡಿರುವ ಆಡಿಯೋ ವೈರಲ್​ ಆಗಿದೆ.

    ತಿ.ನರಸೀಪುರದಲ್ಲೊಬ್ಬ ಪೋಲಿ ಪ್ರೊಫೆಸರ್​! ತರಗತಿಯಲ್ಲೂ ಹಗ್​, ಕಿಸ್​ ಅನ್ನುತ್ತಾನೆ...

    ಇನ್ನು ಪ್ರಾಧ್ಯಾಪಕನ ವಿರುದ್ಧ ಸುದ್ದಿಗೋಷ್ಠಿ ನಡೆಸಿದ ದಲಿತ ಮುಖಂಡ ಸೋಸಲೆ ಶಶಿಕಾಂತ್, ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಮೇಲೆ ಸಹಾಯಕ ಪ್ರಾಧ್ಯಾಪಕನಿಂದ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ವಿದ್ಯಾರ್ಥಿಯರಿಗೆ ಪ್ರೀತಿ ಮಾಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದಾನೆ. ಈತನ ವಿರುದ್ಧ ಮೂರ್ನಾಲ್ಕು ತಿಂಗಳ ಹಿಂದೆ ವಿದ್ಯಾರ್ಥಿಗಳೇ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಮೂಗರ್ಜಿ ಬರೆದಿದ್ದರು. ನೊಂದ ವಿದ್ಯಾರ್ಥಿಗಳು ನಮ್ಮ ಬಳಿ ಕಷ್ಟ ಹೇಳಿಕೊಂಡಿದ್ದಾರೆ. ವಿದ್ಯಾರ್ಥಿನಿಯರ ಭವಿಷ್ಯದ ದೃಷ್ಟಿಯಿಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಿಲ್ಲ. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಿಗೆ ನಾವೇ ದೂರು ಕೊಟ್ಟಿದ್ದೇವೆ. ತಾಲೂಕು ಪಂಚಾಯಿತಿ ಎಸ್ಸಿ-ಎಸ್ಟಿ ಸಭೆಗಳಲ್ಲೂ ಈತನ ವರ್ತನೆ ಬಗ್ಗೆ ಪ್ರಸ್ತಾಪ ಆಗಿದೆ. ಇಷ್ಟಾಗಿಯೂ ಆರೋಪಿ ಸುನೀಲ್ ಕುಮಾರ್ ವಿರುದ್ಧ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

    ಮನೆಯೊಳಗೆ ಅಕ್ಕ-ತಂಗಿ ನಿಗೂಢ ಸಾವು! 5 ದಿನದ ಹಿಂದೆ ಆ ಮನೆಗೆ ಬಂದು ಹೋಗಿದ್ದ ಅಕ್ಕನ ಗಂಡ

    ಬೆಳ್ಳಂಬೆಳಗ್ಗೆ 62 ಮನೆಗಳ ಮೇಲೆ ದಾಳಿ: ಸುಖ ನಿದ್ದೆಯಲ್ಲಿದ್ದ ರೌಡಿಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು

    ಕಿಡ್ನ್ಯಾಪ್‌ ಆಗಿದ್ದ ಕೇರಳ ಯುವಕನನ್ನು ಪ್ರಾಣದ ಹಂಗು ತೊರೆದು ಕಾಪಾಡಿದ ಹಾಸನ ಪೊಲೀಸರು! ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts