More

    ಹೆರಿಗೆ ವೇಳೆ ಮಗು ಮೃತಪಟ್ಟರೆ 60 ದಿನ ವಿಶೇಷ ರಜೆ: ತಾಯಿಗೆ ಆಗುವ ಭಾವನಾತ್ಮಕ ಆಘಾತ ಪರಿಗಣಿಸಿ ಆದೇಶ

    ನವದೆಹಲಿ: ಜನನ ಸಮಯದಲ್ಲಿ ಅಥವಾ ಜನಿಸಿದ ಸ್ವಲ್ಪ ಹೊತ್ತಿನಲ್ಲಿ ಮಗು ಮೃತಪಟ್ಟ ಸಂದರ್ಭದಲ್ಲಿ ಆ ಮಗುವಿನ ತಾಯಿಗೆ 60 ದಿನ ವಿಶೇಷ ರಜೆ ಪಡೆಯಲು ಅವಕಾಶವಿದೆ. ಕೇಂದ್ರ ಸರ್ಕಾರದ ಮಹಿಳಾ ಉದ್ಯೋಗಿಗಳು 60 ದಿನಗಳ ವಿಶೇಷ ಹೆರಿಗೆ ರಜೆಗೆ ಅರ್ಹರಾಗಿರುತ್ತಾರೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಆದೇಶ ಹೊರಡಿಸಿದೆ.

    ತಾಯಿಯ ಜೀವನದ ಮೇಲೆ ಪರಿಣಾಮ ಬೀರುವ ಮಗುವಿನ ಜನನ ಹಾಗೂ ಮರಣದ ಕಾರಣದಿಂದ ಉಂಟಾಗುವ ಭಾವನಾತ್ಮಕ ಆಘಾತವನ್ನು ಗಮನದಲ್ಲಿಟ್ಟುಕೊಂಡು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜತೆ ಸಮಾಲೋಚನೆ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಡಿಒಪಿಟಿ ತಿಳಿಸಿದೆ.

    ಜನನ/ಹೆರಿಗೆಯ ನಂತರ ಮಗುವಿನ ಮರಣದ ಸಂದರ್ಭದಲ್ಲಿ ಮಾತೃತ್ವ ರಜೆ ಮಂಜೂರು ಮಾಡಲು ಸೃಷ್ಟೀಕರಣಕ್ಕಾಗಿ ವಿನಂತಿಸುವ ಹಲವಾರು ಉಲ್ಲೇಖಗಳು/ಮನವಿಗಳನ್ನು ಸ್ವೀಕರಿಸುತ್ತಿರುವುದಾಗಿ ಇಲಾಖೆ ಹೇಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts