More

    ಗಂಡನ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ 3 ಕೋಟಿ ರೂ. ವಿಮೆ ಪಡೆದಳು! ಕ್ಯಾನ್ಸರ್​ನಿಂದ ಸತ್ತರೂ ಹೃದಯಾಘಾತವೆಂದ ಪತ್ನಿ

    ಬೆಂಗಳೂರು: ಇಲ್ಲೊಬ್ಬ ಭೂಪ ತನಗಿದ್ದ ಕಾಯಿಲೆ ವಿಷಯ ಮುಚ್ಚಿಟ್ಟು ನಕಲಿ ದಾಖಲೆ ಸಲ್ಲಿಸಿ ವಿಮಾ ಪಾಲಿಸಿ ಪಡೆದಿದ್ದು ಮಾತ್ರವಲ್ಲ, ಆತ ಬತ್ತ ಬಳಿಕ ಸುಳ್ಳು ದಾಖಲೆ ಕೊಟ್ಟ ಪತ್ನಿ ಬರೋಬ್ಬರಿ 3 ಕೋಟಿ ರೂಪಾಯಿ ವಿಮಾ ಹಣ ಪಡೆದಿರುವ ಪ್ರಕರಣದ ತಡವಾಗಿ ಬೆಳಕಿಗೆ ಬಂದಿದೆ.

    ಖಾಸಗಿ ವಿಮಾ ಕಂಪನಿ ಕಾನೂನು ವಿಭಾಗ ವ್ಯವಸ್ಥಾಪಕ ಪಿ.ಎಸ್​. ಗಣಪತಿ ಎಂಬುವರು ಕೋರಮಂಗಲ ಠಾಣೆಗೆ ದೂರು ನೀಡಿದ್ದು, ಆರೋಪಿ ಸುಪ್ರಿಯಾ ಲಕಕುಲಾ ಎಂಬಾಕೆ ವಿರುದ್ಧ ಎಫ್​​ಐಆರ್​ ದಾಖಲಾಗಿದೆ. ವಿಟ್ಟಸಂದ್ರದ ಅಪಾರ್ಟ್​ಮೆಂಟ್​ನಲ್ಲಿ ನೆಲೆಸಿದ್ದ ಕೃಷ್ಣಪ್ರಸಾದ್​ ಗಾರಲಟ್ಟಿ(31) ಎಂಬಾತ ಆಂಧ್ರ ಪ್ರದೇಶದ ಪ್ರತಿಷ್ಠಿತ ಸಾಪ್ಟ್​​ವೇರ್​ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ವಿಮೆ ಕಂಪನಿಗೆ ತಿಳಿಸಿದ್ದ. ಕಳೆದ ವರ್ಷ ಮಾ.3ರಂದು ಆನ್​ಲೈನ್​ನಲ್ಲಿ ‘ಮಹಾ ರಕ್ಷ ಸುಪ್ರೀಂ’ ಪಾಲಿಸಿಗೆ ಅರ್ಜಿ ಸಲ್ಲಿಸಿ ಫೋಟೋ, ಪಾನ್​, ಆಧಾರ್​, 3 ತಿಂಗಳ ವೇತನ ಪ್ರಮಾಣ ಪತ್ರವನ್ನೂ ಸಲ್ಲಿಸಿದ್ದ. 3ನೇ ದಿನ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿದ್ದ. ದಾಖಲೆ ಪರಿಶೀಲನೆ ನಡೆಸಿದ ವಿಮಾ ಕಂಪನಿ, 2021ರ ಮಾ. 5ರಂದು ಕೃಷ್ಣಪ್ರಸಾದ್​ಗೆ ಪಾಲಿಸಿ ನೀಡಿತ್ತು. ಅದರಂತೆ ವಾರ್ಷಿಕ ಪ್ರೀಮಿಯಂ 51,777 ರೂ., ಪಾಲಿಸಿ ಮೊತ್ತ 3 ಕೋಟಿ ರೂ., ಅವಧಿ 28 ವರ್ಷ ಇತ್ತು. 12 ವರ್ಷ ಪ್ರೀಮಿಯಂ ಪಾವತಿ ಮಾಡಬೇಕಿತ್ತು. ನಾಮಿನಿಯಾಗಿ ತನ್ನ ಪತ್ನಿ ಸುಪ್ರಿಯಾಳ ಹೆಸರು ನಮೂದಿಸಿದ್ದ. ಪಾಲಿಸಿ ಪಡೆದು 2 ತಿಂಗಳು 9 ದಿನಕ್ಕೆ ಅಂದರೆ 2021ರ ಮೇ 14ಕ್ಕೆ ಕೃಷ್ಣಪ್ರಸಾದ್​ ಪತ್ನಿ ಸುಪ್ರಿಯಾ ವಿಮಾ ಕಂಪನಿ ಕಚೇರಿಗೆ ಬಂದು ತನ್ನ ಪತಿ ಹೃದಯಘಾತದಿಂದ ಮೃತಪಟ್ಟಿರುವುದಾಗಿ ದಾಖಲೆ ಸಲ್ಲಿಸಿದ್ದಳು. ಸುಪ್ರಿಯಾ ಅವರಿಂದ ಎಲ್ಲ ದಾಖಲೆ ಪಡೆದು ಅವರ ಬ್ಯಾಂಕ್​ ಖಾತೆಗೆ 3 ಕೋಟಿ ರೂ. ವರ್ಗಾವಣೆ ಮಾಡಿತ್ತು.

    ಆದರೆ, ಕೃಷ್ಣಪ್ರಸಾದ್​ ಸತ್ತದ್ದು ಕ್ಯಾನ್ಸರ್​ನಿಂದ. 2020ರ ಡಿಸೆಂಬರ್​ನಲ್ಲಿ ಕೃಷ್ಣಪ್ರಸಾದ್​ ಅವರು ಬೆಂಗಳೂರಿನ ರಿಂಗ್​ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಕ್ಯಾನ್ಸರ್​ ಇರುವ ವಿಚಾರ ಮುಚ್ಚಿಟ್ಟು ಪಾಲಿಸಿ ಪಡೆದಿದ್ದು, ಮಾತ್ರವಲ್ಲ, ಕ್ಯಾನ್ಸರ್​ನಿಂದ ಮೃತಪಟ್ಟರೂ ಹೃದಯಾಘಾತ ಎಂದು ಸುಳ್ಳು ಹೇಳಿ ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ವಿಮಾ ಕಂಪನಿ ಅಧಿಕಾರಿ ಆರೋಪಿಸಿದ್ದಾರೆ.
    ವೈದ್ಯಕೀಯ ಮಾಹಿತಿಗಳು ಬೋಗಸ್​

    ಪತಿಯ ವಿಮಾ ಹಣ ಪಡೆಯಲು ಪತ್ನಿ ಸುಪ್ರಿಯಾ ಸಲ್ಲಿಸಿದ್ದ ಕೃಷ್ಣಪ್ರಸಾದ್​ ಅವರ ಕಂಪನಿ ರಜೆ ಚೀಟಿ, ವೇತನ ಪ್ರಮಾಣ ಪತ್ರ, ವೈದ್ಯಕೀಯ ಸೇವೆಗಳ ಮಾಹಿತಿಗಳೂ ಬೋಗಸ್​ ಆಗಿವೆ. ಈ ಕುರಿತು ಸಾಫ್ಟ್​ವೇರ್​​ ಕಂಪನಿಯಲ್ಲಿ ವಿಚಾರಿಸಿದಾಗ ನಕಲಿ ದಾಖಲೆ ಎಂಬುದು ಗೊತ್ತಾಗಿದೆ. ಇದಲ್ಲದೆ, ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದಾಗ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆದಿರುವ ದಾಖಲೆ ಲಭ್ಯವಾಗಿವೆ ಎಂದು ದೂರಿನಲ್ಲಿ ವಿಮಾ ಕಂಪನಿ ಅಧಿಕಾರಿಗಳು ಆರೋಪಿಸಿದ್ದಾರೆ.

    ಮದ್ವೆ ಆಸೆ ಹುಟ್ಟಿಸಿ ದೈಹಿಕ ಸಂಪರ್ಕ ಬೆಳೆಸಿದ, ಕೊನೆಗೆ ಹೇಳಬಾರದ್ದು ಹೇಳಿದ, ಪ್ಲೀಸ್​ ನ್ಯಾಯ ಕೊಡಿಸಿ… ಕಣ್ಣೀರಿಟ್ಟ ಸಂತ್ರಸ್ತೆ

    ಅಪ್ರಾಪ್ತ ನಾದಿನಿಯನ್ನ ಲೈಂಗಿಕವಾಗಿ ಬಳಸಿ ವಿಕೃತಿ ಮೆರೆದ ಬಾವ! ಪ್ರಸವಪೂರ್ವ ಹೆರಿಗೆಯಾದ ಮಗು ಸಾವು

    ಡೇಟಿಂಗ್​ ನೆಪದಲ್ಲಿ ಅವಿವಾಹಿತೆಯರ ಮನೆಗೆ ತೆರಳುತ್ತಿದ್ದ ಎರಡು ಮಕ್ಕಳ ತಂದೆ, ಬಟ್ಟೆ ಬಿಚ್ಚುತ್ತಿದ್ದಂತೆ ವರಸೆ ಬದಲಿಸುತ್ತಿದ್ದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts