More

    ಮದುವೆಯಾಗುತ್ತಿದ್ದಾಳೆಂಬ ದ್ವೇಷಕ್ಕೆ ಮಾಜಿ ಪ್ರೇಯಸಿಯೊಂದಿಗಿನ ಫೋಟೊವನ್ನು ಪೋಸ್ಟರ್​ ಮಾಡಿಸಿ ಅಂಟಿಸಿದ ಭೂಪ

    ರಾಯ್​ಬರೇಲಿ: ತನ್ನ ಮಾಜಿ ಪ್ರೇಯಸಿಗೆ ಮದುವೆ ನಿಶ್ಚಯವಾಗಿದೆ ಎಂಬ ಸಿಟ್ಟಿನಿಂದಾಗಿ ಯುವಕನೊಬ್ಬ ಪ್ರೇಯಸಿಯ ಜತೆಗಿದ್ದ ಹಳೆಯ ಫೋಟೊವನ್ನು ಪೋಸ್ಟರ್ ಮಾಡಿಸಿ ಅಂಟಿಸಿರುವ ಘಟನೆ ಉತ್ತರ ಪ್ರದೇಶದ ರಾಯ್​ಬರೇಲಿಯಲ್ಲಿ ನಡೆದಿದೆ.

    28 ವರ್ಷದ ಯುವಕ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಯಾವುದೋ ಕಾರಣಕ್ಕೆ ಅವರಿಬ್ಬರ ಪ್ರೀತಿ ಮುರಿದುಬಿದ್ದಿದೆ. ಅದಾದ ನಂತರ ಯುವತಿ ತನ್ನ ಮನೆಯವರು ನಿಶ್ಚಯಿಸಿದ ಲಾಯರ್​ ವರನನ್ನು ಮದುವೆಯಾಗಲು ನಿರ್ಧರಿಸಿದ್ದಾಳೆ. ಮುಂದಿನ ವಾರದಲ್ಲಿ ಅವರ ಮದುವೆ ದಿನಾಂಕವನ್ನು ನಿಶ್ಚಯಿಸಲಾಗಿದೆ. ತನ್ನ ಹುಡುಗಿ ತನ್ನ ಬಿಟ್ಟು ಬೇರೆಯವನನ್ನು ಮದುವೆಯಾಗುತ್ತಿದ್ದಾಳೆ ಎಂಬ ಸಿಟ್ಟಿಗೆ ಬಿದ್ದ ಯುವಕ ಆಕೆಯೊಂದಿಗೆ ಹೋಳಿ ಆಚರಿಸಿದ್ದ ಫೋಟೋವನ್ನು ಬಳಸಿಕೊಂಡು, ಹೋಲಿ ಹಬ್ಬದ ಶುಭಾಶಯ ಕೋರುವ ಪೋಸ್ಟರ್​ ರಚಿಸಿ ಅಂಟಿಸಿದ್ದಾನೆ. ಇದರಿಂದಾಗಿ ಸಿಟ್ಟಿಗೆದ್ದ ಯುವತಿಯ ಮನೆಯವರು ಆತನ ವಿರುದ್ಧ ದೂರು ದಾಖಲಿಸಿದ್ದಾರೆ.

    ಮಂಗಳವಾರದಂದು ಆ್ಯಂಟಿ ರೋಮಿಯೋ ಸ್ಕ್ವಾಡ್​ನವರು ಆರೋಪಿಯನ್ನು ಬಂಧಿಸಿದ್ದು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಪೊಲೀಸ್​ ಅಧಿಕಾರಿ ಸರೋಜ್​ ಕುಮಾರ್​,”ಯುವತಿಯ ಮೇಲಿನ ದ್ವೇಷದಿಂದಾಗಿ ಆರೋಪಿ ಈ ಕೆಲಸ ಮಾಡಿದ್ದಾನೆ. ಅವನ ವಿರುದ್ಧ ಐಪಿಸಿಯ ಹಲವು ಸೆಕ್ಷನ್​ಗಳ ಮತ್ತು ಐಟಿ ಆ್ಯಕ್ಟ್​ನ ಅಡಿಯಲ್ಲಿಯೂ ದೂರು ದಾಖಲಿಸಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts