More

    ಮನೆಯಲ್ಲಿ ಆಟವಾಡುತ್ತಾ ಸೊಳ್ಳೆನಾಶಕ ಲಿಕ್ವಿಡ್​ ಕುಡಿದು 2 ವರ್ಷದ ಮಗು ಸಾವು! ಹೊನ್ನಾವರದಲ್ಲಿ ಘಟನೆ

    ಉತ್ತರ ಕನ್ನಡ: ಮಕ್ಕಳಿರುವ ಮನೆಯಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು, ಅಪಾಯಕಾರಿ ವಸ್ತುಗಳಿದ್ದರೆ ಮಕ್ಕಳ ಕೈಗೆಟಕದಂತೆ ಇಡಬೇಕು. ಈ ವಿಚಾರದಲ್ಲಿ ಮುಂಜಾಗ್ರತೆ ವಹಿಸದಿದ್ದಲ್ಲಿ ದೊಡ್ಡ ಅನಾಹುತವೇ ಸಂಭವಿಸುತ್ತದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.

    ಮನೆಯಲ್ಲಿಟ್ಟಿದ್ದ ಸೊಳ್ಳೆನಾಶಕ ಲಿಕ್ವಿಡ್​(ಗುಡ್ ನೈಟ್-ಆಲ್​ಔಟ್​ ಲಿಕ್ವಿಡ್​) ಕುಡಿದು 2 ವರ್ಷದ ಮಗು ಮೃತಪಟ್ಟಿದೆ. ಇಂತಹ ಧಾರುಣ ಘಟನೆ ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕಾವೂರು ಗ್ರಾಮದಲ್ಲಿ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಆರವ್ ಮಹೇಶ ನಾಯ್ಕ(2) ಮೃತ ಮಗು. ಮನೆಯಲ್ಲಿ ಸೊಳ್ಳೆಕಾಟ ಜಾಸ್ತಿ ಇದೆ ಎಂದು ಗುಡ್ ನೈಟ್ ಲಿಕ್ವಿಡ್ ತರಲಾಗಿತ್ತು. ಯಾವುದೋ ಕೆಲಸದ ಒತ್ತಡದಲ್ಲಿದ್ದ ಕುಟುಂಬಸ್ಥರಿಗೆ ‘ಮಗು ಕೈಗೆ ಗುಡ್ ನೈಟ್ ಲಿಕ್ವಿಡ್​ ಸಿಕ್ಕರೆ?’ ಇದು ಅಪಾಯ ಎಂಬುದು ತೋಚಿಲ್ಲ. ಆಟವಾಡುತ್ತಾ ಮನೆಯಲ್ಲೇ ಕುಳಿತ್ತಿದ್ದ ಮಗು, ನೆಲದ ಮೇಲಿದ್ದ ಸೊಳ್ಳೆನಾಶಕ ಔಷಧದ ಬಾಟಲಿಯನ್ನ ಬಾಯಿಗೆ ಇಟ್ಟುಕೊಂಡು ಚೀಪಿದೆ. ಲಿಕ್ವಿಡ್​ ಮಗುವಿನ ದೇಹದೊಳಗೆ ಹೋದಂತೆ, ಮಗು ಅಸ್ವಸ್ಥಗೊಂಡಿದೆ. ಕೂಡಲೇ ಕುಟುಂಬಸ್ಥರು ಮಗುವನ್ನು ಮಣಿಪಾಲ ಆಸ್ಪತ್ರೆಗೆ ಕರೆತಂದರಾದರೂ ಚಿಕಿತ್ಸೆ ಫಲಿಸಲಿಲ್ಲ.

    ಮಿನಿಷ್ಟ್ರು ಬಂದ್ರೂ ಮೇಷ್ಟ್ರು ಬರಲಿಲ್ಲ! ಬಿ.ಸಿ.ನಾಗೇಶ್ ಎದುರೇ ಅವ್ಯವಸ್ಥೆ ಬಯಲು, ಶಿಕ್ಷಕರಿಗೆ ನೋಟಿಸ್ ಜಾರಿ

    PSI ಆಗುವ ಕನಸು ಕಂಡಿದ್ದ ಬೆಂಗ್ಳೂರಿನ ಯುವಕ ಕಳ್ಳನಾದ! ಇಂಜಿನಿಯರಿಂಗ್​ನಲ್ಲಿ ಟಾಪರ್ ಆಗಿದ್ದವ ದಾರಿ ತಪ್ಪಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts