More

    ಎರಡು ಜರ್ಮನ್​ ಶಫರ್ಡ್​ ನಾಯಿಗಳಿಗೆ ಮರಣದಂಡನೆ! ಈ ತಪ್ಪಿಗೆ ಇಂಥಾ ಘೋರ ಶಿಕ್ಷೆನಾ?

    ಕರಾಚಿ: ವಕೀಲರೊಬ್ಬರ ಮೇಲೆ ದಾಳಿ ಮಾಡಿದ ಜರ್ಮನ್​ ಶಫರ್ಡ್​ ತಳಿಯ ಎರಡು ನಾಯಿಗಳಿಗೆ ಸಾವಿನ ಶಿಕ್ಷೆ ವಿಧಿಸಲಾಗಿದೆ! ಅರೇ, ಇದ್ಹೇನಿದು ನಾಯಿಗಳಿಗೂ ಮರಣದಂಡಣೆ ವಿಧಿಸ್ತಾರಾ? ಮೂಕ ಪ್ರಾಣಿ ಅಲ್ಲವೇ? ಅದಕ್ಕೇನು ಗೊತ್ತಾಗುತ್ತೆ ಕಾನೂನಿನ ಬಗ್ಗೆ, ಯಾರು ಇಂತಹ ಶಿಕ್ಷೆ ಕೊಟ್ಟದ್ದು? ಎಂಬ ಕುತೂಹಲ ಮೂಡುವುದು ಸಹಜ. ಇದಕ್ಕೆಲ್ಲ ಇಲ್ಲಿದೆ ಉತ್ತರ.

    ಹೌದು, ಇಂತಹ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ. ಇಲ್ಲಿನ ಪ್ರತಿಷ್ಠಿತ ಡಿಫೆನ್ಸ್​ ಹೌಸಿಂಗ್​ ಸೊಸೈಟಿ ಆವರಣದಲ್ಲಿ ಮುಂಜಾನೆ ವೇಳೆ ವಾಕಿಂಗ್​ ಮಾಡುತ್ತಿದ್ದ ಹಿರಿಯ ವಕೀಲ ಮಿರ್ಜಾ ಅಖ್ತರ್​ ಅಲಿ ಮೇಲೆ ದಾಳಿ ಮಾಡಿದ ಎರಡು ನಾಯಿಗಳು ಕಚ್ಚಿ ಗಾಯಗೊಳಿಸಿದ್ದವು. ದಾಳಿಯಿಂದಾಗಿ ವಕೀಲ ಗಂಭೀರ ಗಾಯಗೊಂಡಿದ್ದರು. ನಾಯಿ ದಾಳಿ ಮಾಡುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಜಾಲತಾಣದಲ್ಲಿ ವೈರಲ್​ ​ಆಗಿತ್ತು.

    ಇದಾದ ಬಳಿಕ ನಾಯಿ ದಾಳಿಗೆ ಒಳಗಾಗಿದ್ದ ವಕೀಲ, ಕೇಸ್​ ದಾಖಲಿಸುವುದಾಗಿ ನಾಯಿ ಮಾಲೀಕನಿಗೆ ಹೇಳಿದ್ದು, ಮಾತುಕತೆ ಮೂಲಕವೇ ಇವರಿಬ್ಬರೂ ನಾಯಿಗಳಿಗೆ ಮರಣದಂಡಣೆ ಕೊಟ್ಟಿದ್ದಾರೆ. ಅಲ್ಲದೆ, ಮೂರ್ನಾಲ್ಕು ಕಂಡಿಷನ್​ಗಳನ್ನು ನಾಯಿ ಮಾಲೀಕನಿಗೆ ವಕೀಲ ಹಾಕಿದ್ದು, ಅದಕ್ಕೆ ಆತ ಒಪ್ಪಿಗೆ ಸೂಚಿಸಿ ಅಗ್ರಿಮೆಂಟ್​ ಪತ್ರಕ್ಕೆ ಕೋರ್ಟ್​ ಮುಂದೆಯೇ ಸಹಿಯನ್ನೂ ಹಾಕಿಕೊಂಡಿದ್ದಾರೆ. ವಕೀಲನ ಬಳಿ ಮಾಲೀಕ ಕ್ಷಮೆಯನ್ನೂ ಕೇಳಿದ್ದಾನೆ. ಒಪ್ಪಂದದ ಪ್ರಕಾರ ದಾಳಿ ಮಾಡಿದ ಎರಡೂ ನಾಯಿಗಳನ್ನು ಈಗಾಗಲೇ ಕೊಲ್ಲಲಾಗಿದೆ. ಇನ್ಮುಂದೆ ಮಾಲೀಕ ನಾಯಿಗಳನ್ನು ಸಾಕುವಂತಿಲ್ಲ. ಇದೆಲ್ಲವೂ ನ್ಯಾಯಾಲಯದ ಹೊರಗೆ ನಡೆದಿರುವ ಕೃತ್ಯ.

    ಅರುಣಾಕುಮಾರಿಯ ಪ್ರೇಮ್​ಕಹಾನಿ ಬಿಚ್ಚಿಟ್ಟ ನಟ ದರ್ಶನ್​! 9 ವರ್ಷ ಚಿಕ್ಕವನೊಂದಿಗೆ ಲವ್ವಿಡವ್ವಿ ಶುರು ಮಾಡಿದ್ದಳಂತೆ…

    ಪಿಎಸ್​ಐ ಆಗಿರುವ ತಾಯಿ ವಿರುದ್ಧವೇ ಗದಗ ಎಸ್​ಪಿಗೆ ದೂರು ಕೊಟ್ಟ ಯುವತಿ!

    ಭಿಕ್ಷೆ ಬೇಡುತ್ತಿದ್ದ ವೃದ್ಧೆಗೆ ಅಚ್ಛೇ ದಿನ್​! ನೆಲಮಂಗಲ ತಹಸೀಲ್ದಾರ್ ಮಂಜುನಾಥ್​ರ ಕಾರ್ಯಕ್ಕೊಂದು ಸಲಾಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts