More

    ವಿದ್ಯಾರ್ಥಿನಿ ಮೇಲೆ ಪದೇಪದೆ ರೇಪ್​ ಮಾಡಿದ ಬಾಕ್ಸಿಂಗ್​ ಕೋಚ್​: ರೈಲಿನಲ್ಲೇ ನಡೆಯಿತು ಮೊದಲ ಅತ್ಯಾಚಾರ

    ಚಂಡೀಗಢ: ಬಾಕ್ಸಿಂಗ್​ ಹೇಳಿಕೊಡಬೇಕಾದ ಬಾಕ್ಸಿಂಗ್​ ಕೋಚ್​ ಒಬ್ಬ ತನ್ನ ವಿದ್ಯಾರ್ಥಿನಿ ಮೇಲೆ ಪದೇ ಪದೆ ಅತ್ಯಾಚಾರವೆಸಗಿರುವ ಕೃತ್ಯ ಚಂಡೀಗಢದ ಸೋನಿಪತ್​​ನಲ್ಲಿ ನಡೆದಿದೆ.

    ಸಂದೀಪ್​ ಮಲ್ಲಿಕ್​(28) ಹೆಸರಿನ ವ್ಯಕ್ತಿಯೊಬ್ಬ ಸೋನಿಪತ್​ನಲ್ಲಿ ಬಾಕ್ಸಿಂಗ್​ ತರಬೇತಿಯನ್ನು ನೀಡುತ್ತಿದ್ದ. ಖಾಸಗಿ ಅಂತಾರಾಷ್ಟ್ರೀಯ ಟೂರ್ನಮೆಂಟ್​ಗಳಲ್ಲಿ ಗೆದ್ದಿರುವ ಆತ ತನ್ನದೆ ಹೆಸರಿನ ಬಾಕ್ಸಿಂಗ್​ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದು ಅಲ್ಲಿ ಅನೇಕರಿಗೆ ತರಬೇತಿಯನ್ನು ನೀಡುತ್ತಿದ್ದಾನೆ. ಫೆಬ್ರವರಿ ತಿಂಗಳ 29ರಿಂದ ಮಾರ್ಚ್​ 3ರವರೆಗೆ ಕೊಲ್ಕತ್ತಾದಲ್ಲಿ ನಡೆದ ‘3ಬೇ ಬಂಗಾಳ ಬಾಕ್ಸಿಂಗ್​ ಕ್ಲಾಸಿಕ್​ 2020’ರಲ್ಲಿ ಹರಿಯಾಣವನ್ನು ಪ್ರತಿನಿಧಿಸಿದ ಆತನ ಬಾಕ್ಸಿಂಗ್​ ವಿದ್ಯಾರ್ಥಿಗಳನ್ನು ಆತ ರೈಲಿನಲ್ಲಿ ಕರೆದೊಯ್ದಿದ್ದ. ಫೆ.27ರಂದು ರೈಲಿನಲ್ಲಿ ದೆಹಲಿಯಿಂದ ಕೋಲ್ಕತಕ್ಕೆ ಕರೆದೊಯ್ಯುವಾಗ 19 ವರ್ಷದ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದಾನೆ.

    ಅಷ್ಟಕ್ಕೇ ಮುಗಿಸದ ಆತ ಕೊಲ್ಕತ್ತಾದಲ್ಲಿ ನಾಲ್ಕು ದಿನಗಳ ಕಾಲ ತನ್ನ ಕೋಣೆಯಲ್ಲಿ ಮತ್ತು ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಆ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವನ್ನೆಸಗಿದ್ದಾನೆ. ಅತ್ಯಾಚಾರಕ್ಕೊಳಗಾದ ಯುವತಿಯು ದೆಹಲಿಯ ಆಸುಪಾಸಿನವಳಾಗಿದ್ದು, ಆಕೆ ದೆಹಲಿ ಪೊಲೀಸರ ಬಳಿ ತನ್ನ ಕೋಚ್​ನ ಬಗ್ಗೆ ದೂರು ನೀಡಿದ್ದಾಳೆ.

    ರೈಲಿನಲ್ಲಿ ಅತ್ಯಾಚಾರ ನಡೆದ ಕಾರಣ, ದೆಹಲಿ ಪೊಲೀಸರು ಪ್ರಕರಣವನ್ನು ರೈಲ್ವೇ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ವಿದ್ಯಾರ್ಥಿನಿ ತನ್ನ ವಿರುದ್ಧ ದೂರು ನೀಡಿದ್ದಾಳೆ ಎನ್ನುವುದರ ಅರಿವಿರದೆ ಆರಾಮವಾಗಿದ್ದ ಸಂದೀಪ್​ನನ್ನು ಸೋಮವಾರದಂದು ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ಮದುವೆಯಾಗಿರುವುದಾಗಿ ಹೇಳಲಾಗಿದೆ.

    ಸಂದೀಪ್ ​ಮಲ್ಲಿಕ್​ ಬೇರೆ ವಿದ್ಯಾರ್ಥಿನಿಯರ ಜತೆಯೂ ಇಂಥ ಕೃತ್ಯವೆಸಗಿದ್ದಾನೆಯೇ ಎನ್ನುವುದರ ಕುರಿತಾಗಿ ಆತನ ವಿದ್ಯಾರ್ಥಿನಿಯರೊಂದಿಗೆ ವಿಚಾರಣೆ ನಡೆಸಬೇಕಿದೆ. ಸದ್ಯ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದಾನೆ. ಆರೋಪಿಯ ವಿರುದ್ಧ ಅತ್ಯಾಚಾರ ಮತ್ತು ಕಿರುಕುಳ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ದೆಹಲಿಯ ಡಿಸಿಪಿ ಹರೇಂದ್ರ ಸಿಂಗ್​ ತಿಳಿಸಿದ್ದಾರೆ. (ಏಜೆನ್ಸೀಸ್​)

    ಕರೋನಾ ಎಫೆಕ್ಟ್​: ಭಾರತೀಯನನ್ನು ನೋಡಿ ಚೀನೀಯ, ಕರೋನಾ, ಕರೋನಾ ಎಂದರಚುತ್ತ ಹಲ್ಲೆ ನಡೆಸಿದ ಇಸ್ರೇಲಿಯನ್ನರು!

    ಕರೊನಾ ತಡೆಗೆ ಮೆಟ್ರೋ, ಲೋಕಲ್​ ರೈಲು ಸಂಚಾರ ಸ್ಥಗಿತ?! ಮಹಾರಾಷ್ಟ್ರಕ್ಕೆ ಹೆಚ್ಚಿದ ಕರೊನಾ ಚಿಂತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts