More

    ವೀರ ಯೋಧನಿಗೆ ಅಂತಿಮ ನಮನ

    ಆಳಂದ: ಕಡಗಂಚಿಯ ಯುವ ಯೋಧ ಶಾಂತಪ್ಪ ರೇವೂರ (೩೯) ಅನಾರೋಗ್ಯದಿಂದಾಗಿ ಶುಕ್ರವಾರ ಸಂಜೆ ಭೋಪಾಲ್‌ನಲ್ಲಿ ಮೃತಪಟ್ಟಿದ್ದಾರೆ.

    ೧೩ ವರ್ಷಗಳಿಂದ ಸೇನೆಯ ಎಸ್‌ಎಸ್‌ಬಿ ತುಕಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಾಂತಪ್ಪ ಕಳೆದೊಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಭೋಪಾಲ್‌ನ ಸೇನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಂಜೆ ಕೊನೆಯುಸಿರೆಳೆದಿದ್ದಾರೆ.

    ತಂದೆ ನಾಗಪ್ಪ, ತಾಯಿ ಈರಮ್ಮ ಅವರನ್ನು ಅಗಲಿದ್ದಾರೆ. ಪುತ್ರ ಶಾಂತಪ್ಪನೇ ಮನೆಗೆ ಆಧಾರಸ್ತಂಭವಾಗಿದ್ದ. ಎಸ್‌ಎಸ್‌ಬಿ ತುಕಡಿ ಸಿಬ್ಬಂದಿ ಶನಿವಾರ ಸಂಜೆ ಕಡಗಂಚಿಗೆ ಪಾರ್ಥಿವ ಶರೀರವನ್ನು ತಂದರು. ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು.

    ದಾರಿಯುದ್ದಕ್ಕೂ ಜನರು ನಮನ ಸಲ್ಲಿಸಿದರು. ಸರ್ಕಾರದ ಪರವಾಗಿ ಸಹಾಯಕ ಆಯುಕ್ತೆ ರೂಪಿಂದರ್ ಕೌರ್, ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್ ಗೌರವ ಸಲ್ಲಿಸಿದರು. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

    ಕಲಬುರಗಿ-ಬೀದರ್ ಮತ್ತು ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಆರ್.ಕೆ. ಪಾಟೀಲ್, ಗ್ರಾಪಂ ಅಧ್ಯಕ್ಷೆ ಇಂದುಬಾಯಿ ಮಾದಗೊಂಡ, ಜಿಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಗಜಾನಂದ, ತಾಪಂ ಇಒ ಮಾನಪ್ಪ ಕಟ್ಟಿಮನಿ, ಸಿಪಿಐ ಪ್ರಕಾಶ ಯಾತನೂರ, ಪಿಎಸ್‌ಐ ಗಂಗಮ್ಮ, ಪಿಡಿಒ ಉಷಾ, ಪ್ರಮುಖರಾದ ಸಾಯಿನಾಥ ನರೋಣಾ, ಶರಣಬಸಪ್ಪ ಭೂಸನೂರ, ಶಿವಪುತ್ರಪ್ಪ ಕೋಟರ್ಕಿ, ಚಂದ್ರಕಾಂತ ಭೂಸನೂರ, ಶರಣು ನರೋಣಾ, ಜಗನ್ನಾಥ ಸೂರನ್, ಲಿಂಗಪ್ಪ ಧನ್ನಿ, ಭೀಮಶಾ, ಶಂಕರ ಹರಕಂಚಿ, ಲಿಂಗರಾಜ ಧನ್ನಿ, ಸಂಜಯಕುಮಾರ ಘತ್ತರಗಿ, ಲಿಂಗರಾಜ ಗಡಬಳಿ, ಕನಿಷ್ಕಾ ಧನ್ನಿ, ವಿಕಾಸ ಸೂರನ್ ಇತರರಿದ್ದರು.

    ವೈಶಾಖ ಮಾಸದಲ್ಲಿ ಮದುವೆ ಆಗ್ತಿನಿ ಅಂದಿದ್ದ: ನಮ್ಮದು ಪುಟ್ಟ ಕುಟುಂಬ. ಶಾಂತಪ್ಪ ಹಾಗೂ ಜಯಶ್ರೀ ಎಂಬ ಮಕ್ಕಳಿದ್ದಾರೆ. ಜಯಶ್ರೀ ಮದುವೆಯಾಗಿದ್ದು, ಮುಂಬರುವ ವೈಶಾಖ ಮಾಸದಲ್ಲಿ ಮದುವೆ ಆಗುವುದಾಗಿ ಶಾಂತಪ್ಪ ಹೇಳಿದ್ದ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತ ಭೋಪಾಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಸೇನೆ ಅಧಿಕಾರಿಗಳು ಹುಷಾರಾಗುತ್ತಾನೆ ಎಂದು ಧೈರ್ಯ ತುಂಬಿದ್ದರು. ಆದರೆ ಶುಕ್ರವಾರ ಸಂಜೆ ಕರೆ ಮಾಡಿ ಮಗನ ಸಾವಿನ ಸುದ್ದಿ ತಿಳಿಸಿದರು. ಮನೆಗೆ ಆಸರೆ ಆಗಿದ್ದವನನ್ನೇ ಕಳೆದುಕೊಂಡು ತಬ್ಬಲಿಯಾಗಿದ್ದೇವೆ ಎಂದು ಪಾಲಕರು ಕಣ್ಣೀರಿಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts