More

    ಗ್ಯಾರಂಟಿಗಾಗಿ ತಿಂಗಳಿಗೆ ರು. ೩೨ ಕೋಟಿ

    ಆಳಂದ: ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ರಾಜ್ಯ ಸರ್ಕಾರ ಐದು ಗ್ಯಾರಂಟಿ ಅನುಷ್ಠಾನಗೊಳಿಸಿ, ಕೊಟ್ಟ ಮಾತಿನಂತೆ ಪ್ರತಿ ತಿಂಗಳು ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ೩೨ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಲಹೆಗಾರರ ಬಿ.ಆರ್.ಪಾಟೀಲ್ ತಿಳಿಸಿದರು.

    ಪಟ್ಟಣದ ಶ್ರೀ ರಾಮ ಮಾರ್ಕೇಟ್ ಆವರಣದಲ್ಲಿ ಏರ್ಪಡಿಸಿದ್ದ ಸರ್ಕಾರದ ಐದು ಗ್ಯಾರಂಟಿ ಫಲಾನುಭವಿಗಳ ಸಮಾವೇಶ, ಸಂವಿಧಾಜ ಜಾಗೃತಿ ಜಾಥಾದ ಜಂಟಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಂವಿಧಾನ ಎಲ್ಲ ರಾಷ್ಟ್ರಕ್ಕಿಂತ ನಮ್ಮ ಸಂವಿಧಾನ ಬಲಿಷ್ಠವಾಗಿದೆ. ಅಂಬೇಡ್ಕರ್ ಬರೆದ ಸಂವಿಧಾನ ಅಂಗೀಕರಿಸಿ ೭೫ ವರ್ಷಗಳಾಗಿವೆ. ಬಿಜೆಪಿಯವರು ಸಂವಿಧಾನ ಬದಲಾವಣೆಗೆ ಮುಂದಾಗಿದ್ದು, ಪರ್ಯಾಯ ಸಂವಿಧಾನ ಬರೆಸಿ, ಜಾತಿ ಧರ್ಮಗಳಲ್ಲಿ ವಿಷ ಬಿತ್ತುತ್ತಿದ್ದಾರೆ. ಸಂವಿಧಾನ ಉಳಿಸಿಕೊಳ್ಳಲು ಗಟ್ಟಿಯಾಗಿ ನಿಲ್ಲಬೇಕು ಎಂದರು.

    ತಹಸೀಲ್ದಾರ್ ಯಲ್ಲಪ್ಪ ಸುಬೇದಾರ ಸ್ವಾಗತಿಸಿದರು. ತಾಪಂ ಇಒ ಮಾನಪ್ಪ ಕಟ್ಟಿಮನಿ ಪ್ರಾಸ್ತಾವಿಕ ಮಾತನಾಡಿದರು. ಜೀತೇಂದ್ರ ತಳವಾರ ಉಪನ್ಯಾಸ ನೀಡಿದರು.

    ಸಮಾಜ ಕಲ್ಯಾಣ ಅಧಿಕಾರಿ ರಾಮಚಂದ್ರ ಗೋಳಾ, ವ್ಯವಸ್ಥಾಪಕ ಸತೀಶ ದಳಪತಿ, ಸಿಡಿಪಿಓ ಶ್ರೀಕಾಂತ ಮೇಗಂಜಿ, ಜೆಸ್ಕಾಂ ಎಇ ಸಂತೋಷ ಚವ್ಹಾಣ್, ಎಇಇ ಮಾಣಿಕರಾವ ಕುಲಕರ್ಣಿ, ನಾಗರಾಜ ಪೂಜಾರಿ, ಪಶು ಸಂಗೋಪನಾ ಇಲಾಖೆ ಡಾ.ಸಂಜಯರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ಕಣ್ಣಿ, ಅಧಿಕಾರಿಗಳಾದ ಶಾಂತಪ್ಪ ಜಾಧವ್, ಆನಂದಕುಮಾರ, ಹಣಮಂತರಾಯ ರಾಠೋಡ, ಮಹಾದೇವ ಪಂಚಮುಖಿ ಇತರರಿದ್ದರು.

    ಸಂವಾದ, ಭವ್ಯ ಮೆರವಣಿಗೆ: ಸರ್ಕಾರದ ಐದು ಗ್ಯಾರಂಟಿ ಕುರಿತು ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ್ ಸಂವಾದ ನಡೆಸಿದರು. ಮಧ್ಯಾಹ್ನ ೧೨ಕ್ಕೆ ಪಟ್ಟಣಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾಕ್ಕೆ ಬಸ್ ನಿಲ್ದಾಣದಿಂದ ಶ್ರೀರಾಮ ಮಾರ್ಕೆಟ್‌ವರೆಗೆ ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts