More

    ಆಸ್ತಿಗಿಂತ ಜ್ಞಾನಾರ್ಜನೆಗೆ ಆದ್ಯತೆ ಕೊಡಿ

    ಆಳಂದ: ಜೀವನದಲ್ಲಿ ಎಷ್ಟೇ ಸಂಪತ್ತು ಗಳಿಸಿದರೂ ಒಂದು ದಿನ ನಶಿಸಿ ಹೋಗುವುದು. ಆದರೆ ಕಷ್ಟಪಟ್ಟು ಪಡೆದ ಶಿಕ್ಷಣ ಎಂದಿಗೂ ಕೊನೆಯಾಗುವುದಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಜಗನ್ನಾಥ ಶೇಗಜಿ ಹೇಳಿದರು.

    ಧಂಗಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಭಾರತೀಯ ನೌಕಾ ಅಕಾಡೆಮಿಗೆ ಆಯ್ಕೆಯಾದ ಶ್ರೀಕಾಂತ ಕುಂಬಾರ ಅವರನ್ನು ಸತ್ಕರಿಸಿ ಮಾತನಾಡಿದ ಅವರು, ಹೆಚ್ಚು ಶಿಕ್ಷಣ ಪಡೆದಾಗ ಉನ್ನತ ಹುದ್ದೆ ಸಿಗಲು ಸಾಧ್ಯ. ಗ್ರಾಮದ ಯುವಕ ಐಎನ್‌ಎಗೆ ಆಯ್ಕೆಯಾಗಿ ದೇಶ ಸೇವೆ ಮಾಡುತ್ತಿರುವುದು ಸಂತಸದ ವಿಷಯ ಎಂದರು.

    ಪ್ರಾಥಮಿಕ ಆರೋಗ್ಯ ಕೇಂದ್ರದ ಸುಶ್ಮಿತಾ ಪಾಟೀಲ್ ಮಾತನಾಡಿ, ದೇಶದ ವಿಜ್ಞಾನಿಗಳು ಅದರಲ್ಲಿ ಡಾ.ಅಬ್ದುಲ್ ಕಲಾಂ ಅವರಂತಹ ಮಹಾ ವ್ಯಕ್ತಿಗಳು ಸರ್ಕಾರಿ ಶಾಲೆಯಲ್ಲಿ ಓದಿ ಹೆಸರುವಾಸಿಗಳಾಗಿದ್ದಾರೆ. ಶ್ರೀಕಾಂತ ಕುಂಬಾರ ದೇಶ ಸೇವೆಗೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.

    ಇಂದಿರಾ ಸ್ಮಾರಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಲಿಂಗ ತೇಲ್ಕರ್ ಹಾಗೂ ಅನಿಲಕುಮಾರ ನಾಟೀಕರ ಮಾತನಾಡಿದರು.

    ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗುರುಲಿಂಗ ಜಂಗಮ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಸಿದ್ದಣ್ಣ ಮಾಸ್ತರ್ ಶೇಗಜಿ, ಮುಖ್ಯಗುರು ಕೆ.ಆನಂದಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಪೂಜಾರಿ, ಗುರುಭೀಮರಾವ ಆಳಂದ, ಬಸವರಾಜ ಶೇಗಜಿ, ಆಲೂಗೌಡ ಪಾಟೀಲ್, ಶಿವಶಂಕರಪ್ಪ ಶೇಗಜಿ, ಗುಂಡಪ್ಪ ಪೂಜಾರಿ, ಲಕ್ಷ್ಮಣ ನಾಟೀಕರ, ರೇವಣಸಿದಪ್ಪ ಮುಜ್ಜಿ, ಶ್ರೀಮಂತ ಕುಂಬಾರ, ವಿದ್ಯಾದರ ಕುಂಬಾರ, ರಾಜಶ್ರೀ ಕುಂಬಾರ, ಲಕ್ಷ್ಮೀಬಾಯಿ ಕುಂಬಾರ ಇತರರಿದ್ದರು.

    ಶಿಕ್ಷಕಿ ಸಿದ್ದಮ್ಮ ಗಣಾಚಾರಿ ಸ್ವಾಗರಿಸಿದರು. ಸುನೀತಾ ವಂದಿಸಿದರು.

    ನಮ್ಮ ತಾತಾ ದಿ.ಧೂಳಪ್ಪ ಕುಂಬಾರ ಅರಣ್ಯಾಧಿಕಾರಿ ಆಗಿದ್ದರು, ಅವರ ಭುಜದ ಮೇಲಿನ ಸ್ಟಾರ್ ನೋಡಿ ನಾನು ದೇಶ ಸೇವೆ ಮಾಡೆಬೇಕು ಎಂದು ಗುರಿ ಇಟ್ಟುಕೊಂಡಿದ್ದೆ. ಕಷ್ಟಪಟ್ಟು ಓದಿದ್ದು, ಐದನೇ ತರಗತಿವರೆಗೆ ಸರ್ಕಾರಿ ಶಾಲೆಯಲ್ಲಿ ಓದಿದ ನಂತರ ಮಡಿಕೇರಿ ಜಿಲ್ಲೆಯ ಕುಶಾಲನಗರ ಸೈನಿಕ ಶಾಲೆಯಲ್ಲಿ ಅಭ್ಯಾಸ ಮಾಡಿದ್ದೇನೆ. ೩ ಸಲ ಪರೀಕ್ಷೆ ಬರೆದಿದ್ದೆ. ೪ನೇ ಬಾರಿಗೆ ಭಾರತೀಯ ನೌಕಾ ಅಕಾಡೆಮಿ (ಐಎನ್‌ಐ)ಯ ಪರೀಕ್ಷೆಯಲ್ಲಿ ಪಾಸ್ ಆಗಿ, ನೌಕಾಪಡೆಗೆ ಸೇರಿದ್ದೇನೆ.
    | ಶ್ರೀಕಾಂತ ಎಸ್. ಕುಂಬಾರ, ಧಂಗಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts