ಮುಂಬೈ: ಹಿಂದಿ ವಾಹಿನಿಗಳಲ್ಲಿ ತನ್ನ ಧಾರಾವಾಹಿಗಳ ಮೂಲಕ ಮಿಂಚಿ ಬಾಲಿವುಡ್ನ ಅಂಗಳದಲ್ಲೂ ಸೈ ಎನಿಸಿಕೊಂಡ ನಟ ಶಹಬಾಜ್ ಖಾನ್ ವಿರುದ್ಧ ದೂರು ದಾಖಲಾಗಿದೆ. ಲೈಂಗಿಕ ಕಿರುಕುಳ ನೀಡಿರುವ ಹಿನ್ನೆಲೆ ದೂರು ದಾಖಲಾಗಿರುವುದಾಗಿ ಮಾಹಿತಿ ಲಭಿಸಿದೆ.
ಶಹಬಾಜ್ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಮತ್ತು ಸೆಕ್ಷನ್ 509 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಮುಂಬೈನ ಓಶಿವಾರದ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿಕೊಳ್ಳಲಾಗಿದೆ.ಈ ಪ್ರಕರಣದಲ್ಲಿ ಸದ್ಯ ತನಿಖೆ ನಡೆಯುತ್ತಿದ್ದು ಶಹಬಾಜ್ರನ್ನು ಇನ್ನೂ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿಲ್ಲ.
ಶಹಬಾಜ್ ಖಾನ್ ಅವರ ಮೂಲ ಹೆಸರು ಹೈದರ್ ಖಾನ್. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಶಾಸ್ತ್ರೀಯ ಸಂಗೀತ ಗಾಯಕ ಉಸ್ತಾದ್ ಅಮೀರ್ ಖಾನ್ ಅವರ ಮಗ. ತೆನಾಲಿ ರಾಮ, ರಾಮ್ ಸಿಯಾ ಕೆ ಲವ್ ಕುಶ್, ದಸ್ತಾನ್ ಇ ಮೊಹಬ್ಬತ್, ಸಲೀಮ್ ಅನಾರ್ಕಲಿ ಮುಂತಾದ ಟಿವಿ ಕಾರ್ಯಕ್ರಮಗಳಿಂದ ಜನರಿಗೆ ಪರಿಚಯವಾದವರು. ಬಾಲಿವುಡ್ನಲ್ಲಿ ಖಳನಟನಾಗಿ ಕಾಣಿಸಿಕೊಂಡಿರುವ ಅವರು ವೀರ್, ಬದ್ಲಾ ಹಿಂದೂಸ್ಥಾನಿ ಕಾ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಯಶ್ ನಟನೆಯ ಗಜಕೇಸರಿ ಸಿನಿಮಾದಲ್ಲಿಯೂ ಸಹ ಬಣ್ಣ ಹಚ್ಚಿದ್ದಾರೆ. (ಏಜೆನ್ಸೀಸ್)