ಬ್ಯಾಂಕಾಕ್: ಪ್ರತಿಷ್ಠಿತ ಥಾಯ್ಲೆಂಡ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ದಿನವೇ ಭಾರತದ ಸಂಪೂರ್ಣ ಸವಾಲು ಅಂತ್ಯಗೊಂಡಿದೆ. ಸೈನಾ ನೆಹ್ವಾಲ್ರೊಂದಿಗೆ, ಕೆ.ಶ್ರಿಕಾಂತ್, ಎಚ್ ಎಸ್ ಪ್ರಣಯ್, ಸವೀಮ್ ವರ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲು ಕಂಡಿದ್ದರಿಂದ ಭಾರತದ ಹೋರಾಟ ಮುಕ್ತಾಯಕಂಡಿದೆ. ಬುಧವಾರ ನಡೆದ ಪಂದ್ಯದಲ್ಲಿ 5ನೇ ಶ್ರೇಯಾಂಕದ ಸೈನಾ ನೆಹ್ವಾಲ್ 13-21, 21-17, 15-21 ರಿಂದ ಡೆನ್ಮಾರ್ಕ್ನ ಶ್ರೇಯಾಂಕರಹಿತ ಆಟಗಾರ್ತಿ ಲೈನ್ ಜರೆಸ್ಫೆಲ್ಡ್ಗೆ 47 ನಿಮಿಷದ ಹೋರಾಟದಲ್ಲಿ ಶರಣಾದರು. ಪುರುಷರ ಸಿಂಗಲ್ಸ್ನಲ್ಲಿ ಎಚ್ಎಸ್ ಪ್ರಣಯ್ 17-21, 22-20, 19-21 ರಿಂದ ಮಲೇಷ್ಯಾದ ಲೀವ್ ಡರೇನ್ಗೆ ಶರಣಾದರು.
ಶ್ರೀಕಾಂತ್ಗೆ ಮತ್ತೊಮ್ಮೆ ನಿರಾಸೆ: ಹಾಲಿ ಋತುವಿನಲ್ಲಿ ಕೆ.ಶ್ರೀಕಾಂತ್ರ ಸತತ ಮೂರನೇ ಟೂರ್ನಿಯಲ್ಲಿ ಮೊದಲ ಸುತ್ತಿನ ಸೋಲು ಎದುರಿಸಿದರು. ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್ 300 ಟೂರ್ನಿಯಲ್ಲಿ ಸಮೀರ್ ವರ್ಮ 16-21, 15-21 ರಿಂದ ಮಲೇಷ್ಯಾದ ಲೀ ಝಿ ಜಿಯಾರನ್ನು 39 ನಿಮಿಷಗಳ ಹೋರಾಟದಲ್ಲಿ ಶರಣಾದರೆ, 5ನೇ ಶ್ರೇಯಾಂಕದ ಶ್ರೀಕಾಂತ್, ಇಂಡೋನೇಷ್ಯಾದ ಶೆಸರ್ ಹಿರೆನ್ ರುಸ್ತಾವಿಟೋ ವಿರುದ್ಧ 21-12, 14-21, 12-21 ರಿಂದ 48 ನಿಮಿಷಗಳ ಹೋರಾಟದಲ್ಲಿ ಶರಣಾದರು.