More

    ರೆಸಲೂಷನ್​ 2019 ಏನಾಯ್ತು?|ಕಾರು ಓಡಿಸಿಯೇಬಿಟ್ಟೆ, ಆದರೆ…

    ಹೊಸ ವರ್ಷ ಆರಂಭ ಆಗುತ್ತಿದ್ದಂತೆಯೇ ಆ ವರ್ಷವಿಡೀ ಏನಾದರೊಂದು ಸಾಧಿಸಬೇಕು, ಕೆಟ್ಟ ಚಟ ಬಿಡಬೇಕು, ಒಳ್ಳೆಯದನ್ನೇ ಮಾಡಬೇಕು ಎಂದೆಲ್ಲಾ ಸಂಕಲ್ಪ ಮಾಡಿಕೊಳ್ಳುವವರೇ ಹೆಚ್ಚು. ಕೆಲವರು ಅದನ್ನು ಸಾಧಿಸಿದರೆ, ಇನ್ನು ಹಲವರ ರೆಸಲೂಷನ್ ಠುಸ್ ಆಗತ್ತೆ. ಅಂಥ ವಿಶಿಷ್ಟ ಅನುಭವಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ ಕರೆಗೆ ನಿರೀಕ್ಷೆಗೂ ಮೀರಿದ ಪತ್ರಗಳು ಬಂದಿವೆ. ಆಯ್ದ ಕೆಲವು ಪತ್ರಗಳ ಮೊದಲ ಕಂತು ಇದು…

     

    ರೆಸಲೂಷನ್​ 2019 ಏನಾಯ್ತು?|ಕಾರು ಓಡಿಸಿಯೇಬಿಟ್ಟೆ, ಆದರೆ...ವರ್ಷಾರಂಭದಲ್ಲಿ ಡ್ರೖೆವಿಂಗ್ ಕಲಿಯುವ ಸಂಕಲ್ಪ ತೊಟ್ಟಿದ್ದೆ. ಆದರೆ ಅರ್ಧ ವರ್ಷ ಕಳೆದರೂ ನನ್ನ ಸಂಕಲ್ಪ ಕೈಗೂಡುವ ಲಕ್ಷಣ ಕಾಣಲಿಲ್ಲ. ಕೊನೆಗೆ ಮನಸ್ಸಿನಲ್ಲಿ ದೃಢ ನಿರ್ಧಾರಕ್ಕೆ ಬಂದು ಈ ವರ್ಷ ಕೊನೆಯಾಗುವುದರೊಳಗೆ ಕಲಿಯಲೇಬೇಕು ಎಂದು ತೀರ್ವನಿಸಿ ಪಣ ತೊಟ್ಟು ನಿಂತೆ. ಡಿಸೆಂಬರ್ ಸಮೀಪಿಸುತ್ತ ಬಂದರೂ ಏನೂ ಪ್ರಗತಿಯಾಗಲಿಲ್ಲ. ಅದೊಂದು ದಿನ ಡ್ರೖೆವಿಂಗ್ ಸ್ಕೂಲ್ ಸೇರಿದೆ. ಕೊನೆಗೆ ಕಾರು ಕಲಿತೇ ಬಿಟ್ಟೆ. ಅದೆಷ್ಟು ಖುಷಿ ಅಂತೀರಾ.‘ಎಲ್’ ಬೋರ್ಡ್ ಹಾಕಿದ ಕಾರಿನೊಂದಿಗೆ ದರ್ಬಾರ್ ಶುರು. ಊರೂರು ಅಲೆದಾಡಿದ್ದೇನು, ಫ್ರೆಂಡ್ಸ್ ಜತೆ ಕಾರಿನಲ್ಲಿ ಕುಳಿತು ಡ್ರೖೆವಿಂಗ್ ಮಾಡುತ್ತಾ ಸುತ್ತಾಡಿದ್ದೇನು…

    ಅದು ಘಾಟ್ ಸೆಕ್ಷನ್. ಫುಲ್ ಜೋಶ್​ನಲ್ಲಿ ಪಯಣ ಸಾಗಿತ್ತು. ಖುಷಿಯಲಿ ಕಾರ್ ಓಡಿಸಿಕೊಂಡು, ಓಹೋ, ಆಹಾ, ಅಂತ ಕಿರುಚಲು ಶುರುಮಾಡಿದ್ದೆ. ಯಾರೋ ಒಂದು ಪೆಟ್ಟು ಕೊಟ್ಟ ಹಾಗೆ ಕಣ್ಣುಬಿಟ್ಟರೆ, ಅಮ್ಮ ಕಾಣಿಸಿದರು. ಆಗಲೇ ಗೊತ್ತಾಯ್ತು ನಾನು ಕಂಡದ್ದು ಕನಸು ಎಂದು. ಕಾರು ಮಾತ್ರ ಇನ್ನೂ ಷೋರೂಂನಲ್ಲಿಯೇ ಇದೆ!

    | ಪದ್ಮಶ್ರೀ ಭಟ್ ಬೆಂಗಳೂರು

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts