More

    ಸ್ಪಷ್ಟ ಗುರಿಯಿದ್ದರೆ ಯಶಸ್ಸು ನಿಶ್ಚಿತ

    ಶಿವಮೊಗ್ಗ: ಕಠಿಣ ಪರಿಶ್ರಮವೊಂದೇ ಸಾಧನೆಗೆ ಮಾರ್ಗ. ಸಾಧನೆಯ ಕುರಿತಾಗಿ ಸ್ಪಷ್ಟ ಗುರಿಯಿದ್ದರೆ ಯಶಸ್ಸು ನಿಶ್ಚಿತ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಅಭಿಪ್ರಾಯಪಟ್ಟರು.

    ನಗರದ ಕಸ್ತೂರಬಾ ಪಪೂ ಕಾಲೇಜಿನ ವಿದ್ಯಾರ್ಥಿ ಸಂಘ, ಕ್ರೀಡೆ, ಎನ್​ಎಸ್​ಎಸ್ ಚಟುವಟಿಕೆಗಳ ಸಮಾರೋಪದಲ್ಲಿ ಬುಧವಾರ ಮಾತನಾಡಿದ ಅವರು, ಯುವಕರು ನಿರ್ದಿಷ್ಟ ಗುರಿಯಿಂದ ಮುನ್ನಡೆದರೆ ಭಾರತ ಇನ್ನಷ್ಟು ಶಕ್ತಿಶಾಲಿಯಾಗಿ ಹೊರಹೊಮ್ಮುತ್ತದೆ. ಆ ಮೂಲಕ ಇತರ ದೇಶಗಳ ಸ್ಪರ್ಧೆಯನ್ನು ಯಶಸ್ವಿಯಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದರು.

    ಮನುಷ್ಯನ ನಾಗರಿಕತೆ ಆರಂಭವಾದ ಬಳಿಕ ನಾನಾ ರೀತಿಯ ಕ್ರೀಡೆಗಳು ಸೃಷ್ಟಿಯಾಗಿವೆ. ಇವು ದೇಹಕ್ಕೆ ಅಗತ್ಯವಿರುವ ಆರೋಗ್ಯವನ್ನೂ ಕಲ್ಪಿಸುತ್ತವೆ. ಭಾರತ ವಿಶ್ವದಲ್ಲೇ ಎರಡನೇ ಅತಿಹೆಚ್ಚು ಜನಸಂಖ್ಯೆಯ ದೇಶವಾಗಿದ್ದರೂ ಕ್ರೀಡೆಯಲ್ಲಿ ಸಾಧನೆ ತೃಪ್ತಿಕರವಾಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತಿರುವುದರಿಂದ ಉತ್ತಮ ಪ್ರಗತಿಯಾಗಿದೆ ಎಂದು ತಿಳಿಸಿದರು.

    ಎನ್​ಇಎಸ್ ನಿರ್ದೇಶಕ ಜಿ.ಎಸ್.ನಾರಾಯಣ ರಾವ್, ಪ್ರಭಾರ ಪ್ರಾಚಾರ್ಯ ಬಸವರಾಜ್, ಉಪಪ್ರಾಚಾರ್ಯ ಉಮೇಶ್, ಉಪನ್ಯಾಸಕರಾದ ರವಿಕುಮಾರ್, ಶುಭಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts