ಬಂಕಾಪುರ: ಟ್ರಾೃಕ್ಟರ್ನ ರೋಟವೆಟರ್ಗೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಬಿಸನಳ್ಳಿ ಗ್ರಾಮದ ಬಳಿ ಜಮೀನುವೊಂದರಲ್ಲಿ ಭಾನುವಾರ ನಡೆದಿದೆ.
ಗ್ರಾಮದ ಗುರುಸಿದ್ದಪ್ಪ ಗದಿಗೆಪ್ಪ ಅಂಗಡಿ (51) ಮೃತ ವ್ಯಕ್ತಿ.
ಇವರು ಜಮೀನಿನಲ್ಲಿ ಟ್ರಾೃಕ್ಟರ್ನ ರೋಟವೆಟರ್ ಚಾಲು ಇದ್ದಾಗ ಅದರ ಪಕ್ಕದಲ್ಲಿ ನಿಂತಿದ್ದಾರೆ. ಈ ಸಮಯದಲ್ಲಿ ಅವರ ಲುಂಗಿ ರೋಟವೆಟರ್ಗೆ ಸಿಲುಕಿ ಅವರನ್ನು ಎಳೆದುಕೊಂಡಿದೆ. ಇದರಿಂದ ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.