ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ 14ನೇ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಆಲ್ರೌಂಡ್ ಪ್ರದರ್ಶನದ ಫಲವಾಗಿ ರಾಜಸ್ಥಾನ ರಾಯಲ್ಸ್ ತಂಡವು ಟೂರ್ನಿಯಲ್ಲಿ ಮೂರನೇ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ರಾಜಸ್ಥಾನ ತಂಡವು ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತ್ತು. ಅದರಂತೆ ನಾಯಕ ಹಾರ್ದಿಕ್ ಪಾಂಡ್ಯ (34 ರನ್, 21 ಎಸೆತ, 6 ಬೌಂಡರಿ), ತಿಲಕ್ ವರ್ಮಾ (32 ರನ್, 29 ಎಸೆತ, 2 ಸಿಕ್ಸರ್) ಪ್ರತಿರೋಧದ ನಡುವೆಯೂ 20 ಓವರ್ಗಳಲ್ಲಿ 125ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
ಇದನ್ನೂ ಓದಿ: ಬಾಯ್ಕಾಟ್ ಇಂಡಿಯಾ ಎನ್ನುವವರು ಮೊದಲು ನಿಮ್ಮ ಪತ್ನಿಯರ ಸೀರೆಗಳನ್ನು ಸುಟ್ಟು ಹಾಕಿ: ಬಾಂಗ್ಲಾ ಪ್ರಧಾನಿ
ರಾಜಸ್ಥಾನ ಪರ ಟ್ರೆಂಟ್ ಬೌಲ್ಟ್ (4-0-22-3) ನಂಡ್ರೆ ಬರ್ಗರ್ (4-0-32-2), ಆವೇಶ್ ಖಾನ್ (4-0-30-1), ಯಜುವೇಂದ್ರ ಚಹಲ್ (4-0-11-3), ಆರ್. ಅರ್ಶವಿನ್ (4-0-27-0) ರನ್ ನೀಡಿ ವಿಕೆಟ್ ಪಡೆದಿದ್ದಾರೆ.
126ರನ್ ಗಳ ಸುಲಭ ಗುರಿ ಬೆನ್ನತ್ತಿದ್ದ ರಾಯಲ್ಸ್ ತಂಡದ ಪರವಾಗಿ ರಿಯಾನ್ ಪರಾಗ್ (54 ರನ್, 39 ಎಸೆತ, 5 ಬೌಂಡರಿ, 3 ಸಿಕ್ಸರ್) ಅರ್ಧಶತಕದ ಫಲವಾಗಿ15.3 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿ ಗೆಲುವಿನ ನಗೆ ಬೀರಿತ್ತು. ಮುಂಬೈ ಪರ ಆಕಾಶ್ ಮಡಿವಾಳ್ (4-0-20-3), ಕ್ವೇನಾ ಮ್ಯಾಪಾಕಾ (2-0-23-1) ಜಸ್ಪ್ರೀತ್ ಬುಮ್ರಾ (4-0-26-0), ಪಿಯೂಷ್ ಚಾವ್ಲಾ (3-0-18-0), ಗೆರಾಲ್ಡ್ ಕೋಟ್ಜೀ (2.3-0-36-0) ರನ್ ನೀಡಿ ವಿಕೆಟ್ ಪಡೆದಿದ್ದಾರೆ.