ಮುಂಬೈ: ವಿವಾದಿತ ನಟಿ ರಾಖಿ ಸಾವಂತ್ ಮಾಜಿ ಪತಿ, ಮೈಸೂರು ಮೂಲದ ಆದಿಲ್ ಖಾನ್ ದುರಾನಿ, ಬಿಗ್ಬಾಸ್ ಸೀಸನ್ 12ರ ಸ್ಪರ್ಧಿ ಸೋಮಿ ಖಾನ್ ಎಂಬುವರನ್ನು ಮದುವೆಯಾಗಿರುವುದಾಗಿ ವರದಿಯಾಗಿದೆ. ಆದರೆ, ಈ ಬಗ್ಗೆ ಆದಿಲ್ ಆಗಲಿ ಅಥವಾ ಸೋಮಿಯಾಗಲಿ ಖಚಿತಪಡಿಸಿಲ್ಲ.
ಸರಳ ಸಮಾರಂಭದಲ್ಲಿ ಆಪ್ತರ ಸಮ್ಮುಖದಲ್ಲಿ ನವಜೋಡಿ ನಿಖಾ ಆಗಿದ್ದು, ಈ ವಿಚಾರವನ್ನು ಗುಟ್ಟಾಗಿ ಇಡಲು ಇಚ್ಛಿಸಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಆದಿಲ್ ಖಾನ್ ಅನೇಕ ವಿಚಾರಗಳಿಗೆ ಸುದ್ದಿಯಾಗಿರುವುದರಿಂದ ಮದುವೆ ಸಂಗತಿಯನ್ನು ಸದ್ಯ ಬಹಿರಂಪಡಿಸುವುದು ಬೇಡ ಎಂದು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಮಾರ್ಚ್ 2ರಂದು ರಾಜಸ್ಥಾನದ ಜೈಪುರದಲ್ಲಿ ಆದಿಲ್ ಮದುವೆ ಆಗಿದ್ದಾರೆ. ಸೋಮಿ ಖಾನ್, ಕಲಾವಿದೆ ಸಬಾ ಖಾನ್ ಅವರ ಸಹೋದರಿ. ಸಲ್ಮಾನ್ ಖಾನ್ ನಡೆಸಿಕೊಡುವ ವಿವಾದಿತ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 12ರಲ್ಲಿ ಇಬ್ಬರು ಒಟ್ಟಿಗೆ ಸ್ಪರ್ಧಿಸಿದ್ದರು. ಇಬ್ಬರು ಜೈಪುರ ಮೂಲದವರಾಗಿದ್ದು, ಮುಂಬೈನಲ್ಲಿ ನೆಲೆಸಿದ್ದಾರೆ. ಇಬ್ಬರು ಕೂಡ ನಟಿಯರು. ಮ್ಯೂಸಿಕ್ ಆಲ್ಬಂ ಸೇರಿದಂತೆ ಕೆಲವು ಪ್ರಾಜೆಕ್ಟ್ಗಳಲ್ಲಿ ಭಾಗವಾಗಿದ್ದಾರೆ.
ಸಿನಿಮಾ ಲೋಕದ ಡ್ರಾಮಾ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ಹಾಗೂ ಸದಾ ವಿವಾದಗಳಿಂದಲೇ ಸುದ್ದಿಯಾಗುವ ಬಾಲಿವುಡ್ ನಟಿ ರಾಖಿ ಸಾವಂತ್, ಕಳೆದ ವರ್ಷ ತಮ್ಮ ಮದುವೆ ವಿಚಾರದಿಂದಲೇ ಬಹಳ ಸುದ್ದಿಯಾದರು. ಆದಿಲ್ ದುರ್ರಾನಿ ಎಂಬುವರನ್ನು ಮದುವೆಯಾಗಿದ್ದ ರಾಖಿ ಸಾವಂತ್ ಕೆಲವೇ ತಿಂಗಳುಗಳಲ್ಲಿ ಆತನಿಂದ ದೂರವಾದರು. ಅಲ್ಲದೆ, ಆದಿಲ್ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದರು.
ಆದಿಲ್ ನನಗೆ ಮೋಸ ಮಾಡಿದ್ದಾನೆ. ನನ್ನನ್ನು ಬಳಸಿಕೊಂಡು ಆತ ಬಾಲಿವುಡ್ ಪ್ರವೇಶಿಸಲು ಬಯಸುತ್ತಿದ್ದಾನೆ. ಆದಿಲ್ ಓರ್ವ ಸುಳ್ಳುಗಾರ. ಒಂದು ಹುಡುಗಿಯನ್ನು ಮೊಬೈಲ್ನಲ್ಲಿ ಬ್ಲಾಕ್ ಮಾಡುತ್ತೇನೆ ಅಂತಾ ಕುರಾನ್ ಮೇಲೆ ಆಣೆ ಮಾಡಿದ್ದ. ಆದರೆ, ಅದರಂತೆ ಆತ ನಡೆದುಕೊಳ್ಳಲಿಲ್ಲ. ಇದೀಗ ಆ ಹುಡುಗಿ ಆತನನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾಳೆ. ಅವಳ ಬಳಿ ಆದಿಲ್ ಕುರಿತ ಕೆಲವು ಕೊಳಕು ವಿಡಿಯೋ ಸಾಕ್ಷಿಗಳು ಇವೆ. ನನ್ನನ್ನು ಸಾಯಿಸಲು ಸುಪಾರಿ ಕೂಡ ನೀಡಿದ್ದಾನೆ ಎಂದೆಲ್ಲ ರಾಖಿ ಆರೋಪ ಮಾಡಿದ್ದಳು. (ಏಜೆನ್ಸೀಸ್)
ಲಿಪ್ಲಾಕ್ ಮಾಡೋದಾದ್ರೆ ಈ ನಟನೊಂದಿಗೆ ಮಾತ್ರ! ನಟಿ ಪ್ರಿಯಾ ಭವಾನಿ ಶಂಕರ್ ಓಪನ್ ಟಾಕ್
ಸುನೀಲ್ ಗವಾಸ್ಕರ್ ಬಳಿಕ RCB ಅಭಿಮಾನಿಗಳಿಗೆ ಶಾಕ್ ಕೊಟ್ಟ ಎ ಬಿ ಡಿವಿಲಿಯರ್ಸ್!