Deprecated: strtolower(): Passing null to parameter #1 ($string) of type string is deprecated in /nfs/main/main_server/wp-content/plugins/advanced-ads-pro/lib/symfony/css-selector/XPath/Extension/NodeExtension.php on line 199

More

    ಈ ರೀತಿಯಾಗಿ ಹಳಿಗಳ ಮೇಲೆ ಓಡುತ್ತೆ ವಂದೇ ಭಾರತ್ ಎಕ್ಸ್‌ಪ್ರೆಸ್: ವಿಡಿಯೋ ಹಂಚಿಕೊಂಡ ರೈಲ್ವೆ, ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆ

    ಬೆಂಗಳೂರು: ವಂದೇ ಭಾರತ್ ರೈಲು ಅದರ ವೇಗ ಮತ್ತು ಸೌಕರ್ಯಗಳಿಗೆ ಹೆಸರುವಾಸಿಯಾಗಿದೆ. ಜನರು ಆಗಾಗ್ಗೆ ಈ ರೈಲಿನ ವಿಡಿಯೋಗಳು ಮತ್ತು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚಿಗೆ ರೈಲ್ವೆ ತನ್ನ X ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. ಇದರಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಹಳಿಗಳ ಮೇಲೆ ಎಷ್ಟು ವೇಗವಾಗಿ ಚಲಿಸುತ್ತದೆ ಎಂಬುದನ್ನು ತೋರಿಸಲಾಗಿದೆ. ಭಾರತೀಯ ರೈಲ್ವೆ ಸ್ವತಃ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕ್ಯಾಬಿನ್‌ನಿಂದ ಟೈಮ್‌ಲ್ಯಾಪ್ಸ್ ವಿಡಿಯೋವನ್ನು ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

    ರೈಲ್ವೆ ಹಂಚಿಕೊಂಡಿರುವ ಈ ವೈರಲ್ ವೀಡಿಯೊದಲ್ಲಿ, ರೈಲು ಪ್ರಾರಂಭದ ಸ್ಥಳದಿಂದ ತನ್ನ ಗಮ್ಯಸ್ಥಾನದ ಕಡೆಗೆ ಚಲಿಸಲು ಪ್ರಾರಂಭಿಸುವುದನ್ನು ನೀವು ನೋಡಬಹುದು. ರೈಲಿನ ಅತಿವೇಗವನ್ನು ನೋಡಿದರೆ ರೈಲು ಗಾಳಿಯಲ್ಲಿ ಚಲಿಸುತ್ತಿದೆಯೇನೋ ಎನಿಸುತ್ತದೆ. ವಂದೇ ಭಾರತ್‌ನ ವೇಗವನ್ನು ಕಂಡು ಜನರು ಆಶ್ಚರ್ಯಚಕಿತರಾಗಿದ್ದಾರೆ. ರೈಲಿನ ವೇಗವು ರಾಕೆಟ್‌ನಂತೆ ಕಾಣುತ್ತದೆ. ವಿಡಿಯೋವನ್ನು ಹಂಚಿಕೊಳ್ಳುವಾಗ, ರೈಲ್ವೆ ‘ಕೆಲವರು ಪರದೆಯ ಮೇಲೆ ನೋಡುತ್ತಿರುವ ವಂದೇಭಾರತ್​​​​ ಅನ್ನು ಲೈವ್ ಆಗಿ ಅನುಭವಿಸಿದ್ದಾರೆ, ಈ ಅದ್ಭುತ ನೋಟವನ್ನು ಲೋಕೋ ಪೈಲಟ್‌ ಬಳಿ ಹತ್ತಿರದಿಂದ ನೋಡಿ, #ವಂದೇಭಾರತೆಕ್ಸ್‌ಪ್ರೆಸ್ ತನ್ನ ಗಮ್ಯಸ್ಥಾನದತ್ತ ಸಾಗುತ್ತಿದೆ’ ಎಂದು ಬರೆದುಕೊಂಡಿದೆ.

    ಈ ವಿಡಿಯೋ ಬರೆಯುವ ತನಕ ರೈಲ್ವೇ ಶೇರ್ ಮಾಡಿರುವ ಈ ವಿಡಿಯೋವನ್ನು 1 ಲಕ್ಷದ 21 ಸಾವಿರ ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋಗೆ ಸಾವಿರಾರು ಜನರು ಕಾಮೆಂಟ್ ಮಾಡುತ್ತಿದ್ದಾರೆ. ಕಾಮೆಂಟ್ ಮಾಡುವಾಗ, ಬಳಕೆದಾರರು “ವಂದೇ ಭಾರತ್‌ನ ಕ್ಯಾಬಿನ್ ನೋಟ ಅದ್ಭುತವಾಗಿದೆ, ಈ ರೈಲಿನ ವೇಗ ಅದ್ಭುತವಾಗಿದೆ ಎಂದರೆ ಮತ್ತೆ ಕೆಲವರು ಇದು ಸುರಕ್ಷತೆಯ ದೃಷ್ಟಿಯಿಂದ ಸರಿಯಲ್ಲ, ಸಾಮಾನ್ಯ ಜನರಿಗೆ ರೈಲು ಹೇಗೆ ಓಡುತ್ತದೆ ಎಂಬುದನ್ನು ತೋರಿಸುತ್ತದೆ” ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ವಂದೇ ಭಾರತ್ ರೈಲಿನ ವೇಗವನ್ನು ನೋಡಿ ಅನೇಕರು ಆಶ್ಚರ್ಯಚಕಿತರಾಗಿದ್ದಾರೆ. 

    ರಾಮಲಲ್ಲಾ ವಿಗ್ರಹವು ಮಗುವಿನಂತೆ ಕಾಣಿಸುತ್ತಿಲ್ಲ: ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆಗೆ ಬಿಜೆಪಿ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts