More

    ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್ !

    ಚಡಚಣ : ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್ ತಟ್ಟಿದ್ದು, ಕೋಳಿ ಮಾಂಸ ಈಗ ಬಲು ದುಬಾರಿಯಾಗಿದೆ. ಬೇಸಿಗೆಯಲ್ಲಿ ಉತ್ಪಾದನೆ ಕಡಿಮೆ ಹಾಗೂ ಕೋಳಿ ಆಹಾರದ ಬೆಲೆ ಹೆಚ್ಚಳದ ಪರಿಣಾಮ ಚಿಕನ್ ಬೆಲೆ ಗಗನಕ್ಕೇರಿದ್ದು, ಮಾಂಸ ಪ್ರಿಯರಿಗೆ ಹೊರೆಯಾಗಿ ಪರಿಣಮಿಸಿದೆ.

    ಕಳೆದ ಕೆಲವು ವಾರಗಳಿಂದ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದ್ದ ಕೋಳಿ ಮಾಂಸದ ಬೆಲೆ ಈ ವಾರ ಅತಿ ದುಬಾರಿಯಾಗಿದ್ದು, ರೆಡಿ ಚಿಕನ್ ಕೆಜಿಗೆ 200-250 ರೂ., ಸ್ಕಿನ್‌ಲೆಸ್ ಚಿಕನ್ 230-280 ರೂ. ಹಾಗೂ ನಾಟಿ ಕೋಳಿ ಚಿಕನ್ ಕೆಜಿಗೆ 500-600 ರೂ.ಗೆ ಏರಿಕೆಯಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ದುಬಾರಿ ಬೆಲೆ ಎಂಬ ಮಾತುಗಳು ಮಾರುಕಟ್ಟೆಯಲ್ಲಿ ಕೇಳಿಬರುತ್ತಿವೆ.

    ಬೇಸಿಗೆಯಲ್ಲಿ ಕೋಳಿ ಉತ್ಪಾದನೆ ಕಡಿಮೆ ಇರುತ್ತದೆ. ಅಲ್ಲದೆ, ಕೋಳಿಗೆ ಆಹಾರವಾಗಿ ಬಳಕೆಯಾಗುವ ಧಾನ್ಯ, ಅಕ್ಕಿಹೊಟ್ಟು, ಮೆಕ್ಕೆಜೋಳ, ಸೋಯಾ ಬೆಲೆಯಲ್ಲೂ ಶೇ. 25ರಿಂದ 30ರಷ್ಟು ಏರಿಕೆಯಾಗಿದೆ. ಜತೆಗೆ ಇಂಧನ ಬೆಲೆ ಹೆಚ್ಚಳದಿಂದಾಗಿ ಸಾಗಣೆ ವೆಚ್ಚವೂ ಅಧಿಕವಾಗಿದೆ. ಅತಿಯಾದ ಬಿಸಿಲಿನಿಂದಾಗಿ ಕೋಳಿಗಳು ಆಹಾರ ತಿನ್ನುವುದು ಕಡಿಮೆ. ಕೇವಲ ನೀರು ಸೇವಿಸುವುದರಿಂದ ಕೋಳಿಗಳ ಕೊಬ್ಬು ಪ್ರಮಾಣ ಹೆಚ್ಚಳವಾಗುವುದಿಲ್ಲ. ಬಿಸಿಲಿನ ತಾಪಮಾನಕ್ಕೆ ಕೋಳಿಗಳು ಸಾವನ್ನಪ್ಪುತ್ತಿವೆ. ಇದರಿಂದ ಮಾಂಸ ಉತ್ಪಾದನೆ ಸಹಜವಾಗಿ ಕುಂಠಿತಗೊಂಡು ಚಿಕನ್ ಬೆಲೆ ದುಬಾರಿಯಾಗಿದೆ.

    ಬೇಸಿಗೆಯಲ್ಲಿ ಊರ ಜಾತ್ರೆ, ಊರ ಹಬ್ಬಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಜನ ಮಾಂಸಾಹಾರ ಅಡುಗೆ ಮಾಡುವುದು ಹೆಚ್ಚು. ಈ ಕಾರಣದಿಂದಾಗಿಯೂ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಬೆಲೆ ಏರಿಕೆಯಿಂದ ಕೋಳಿ ಸಾಕಣೆದಾರರಿಗೆ ಹೆಚ್ಚು ಲಾಭ ಸಿಗುವುದಿಲ್ಲ. ಅದೇನಿದ್ದರೂ ಕಂಪನಿಗಳು, ವರ್ತಕರ ಪಾಲಾಗುತ್ತಿದೆ. ಇದು ಗ್ರಾಹಕರಿಗೆ ಹೆಚ್ಚಿನ ಹೊರೆಯಾಗುತ್ತಿದೆ.
    ಮೋಮಿನ ನದಾಫ, ಕೋಳಿ ಸಾಕಾಣಿಕೆದಾರ ಚಡಚಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts