More

    ಬೆಳಗಾಗುವಷ್ಟರಲ್ಲಿ ಕೋಟ್ಯಧಿಪತಿಯಾದ ಕೂಲಿ ಕಾರ್ಮಿಕ; 17 ರೂ. ಇದ್ದ ಬ್ಯಾಂಕ್ ಖಾತೆಯಲ್ಲೀಗ 100 ಕೋಟಿ ರೂ.!

    ಪಶ್ಚಿಮ ಬಂಗಾಳ: ಆತ ಕೊಲ್ಕತಾದಲ್ಲಿ ಕೂಲಿ ಕಾರ್ಮಿಕ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕನಸಿನಲ್ಲಿಯೂ ಊಹಿಸಿರದ ಘಟನೆಯೊಂದು ಆತನ ಬದುಕಲ್ಲಿ ನಡೆದಿದೆ. ಹೌದು, ಮೊಹಮ್ಮದ್ ನಾಸಿರುಲ್ಲಾ ಮಂಡಲ್ ಎಂಬಾತ ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾನೆ ಎಂದರೆ ನಂಬಲೇ ಬೇಕು!

    ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಬಸುದೇಬ್‌ಪುರ ಗ್ರಾಮದ ದಿನಗೂಲಿ ಕಾರ್ಮಿಕ ಮೊಹಮ್ಮದ್ ನಾಸಿರುಲ್ಲಾ ಮಂಡಲ್ ಎಂಬಾತನ ಬ್ಯಾಂಕ್ ಖಾತೆಗೆ 100 ಕೋಟಿ ಜಮೆ ಆಗಿದ್ದು, ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ಪೊಲೀಸರು ಕರೆ ಮಾಡಿ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಿದಾಗಲೇ ತನ್ನ ಖಾತೆಯಲ್ಲಿ ಇಷ್ಟೊಂದು ಹಣ ಇದೇ ಎಂಬುದು ಮಂಡಲ್​ಗೆ ಗೊತ್ತಾಗಿದೆ.

    ಇದನ್ನೂ ಓದಿ: ಬಹುತೇಕ ಪೊಲೀಸ್ ಅಧಿಕಾರಿಗಳ ಮಕ್ಕಳು ಮಾದಕ ವ್ಯಸನಿಗಳಾಗಿದ್ದಾರೆ!

    ತನ್ನ ಖಾತೆಗೆ ಬರೋಬ್ಬರಿ 100 ಕೋಟಿ ರೂ. ಜಮೆ ಆಗಿರುವ ಬಗ್ಗೆ ಮಂಡಲ್​ಗೆ ಸೈಬರ್ ಕ್ರೈಂ ಪೊಲೀಸ್ ಇಲಾಖೆಯಿಂದ ಸೂಚನೆ ಬಂದ್ದಿದ್ದು, ಠಾಣೆಗೆ ಕರೆಸಿ ಹಣದ ಬಗ್ಗೆ ವಿಚಾರಿಸಿದ್ದಾರೆ. ನನ್ನ ಖಾತೆಯಲ್ಲಿ ಕೇವಲ 17 ರೂಪಾಯಿ ಮಾತ್ರ ಇತ್ತು. ಅದು ಹೇಗೆ, ಯಾರಿಂದು ನೂರು ಕೋಟಿ ರೂಪಾಯಿ ಜಮೆ ಆಯಿತು ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಕೂಲಿ ಕಾರ್ಮಿಕ ಮಂಡಲ್ ಹೇಳಿಕೊಂಡಿದ್ದಾನೆ.

    ಪೊಲೀಸರ ವಿಚಾರಣೆ ನಂತರ ನಿದ್ದೆ ಬರದಂತಾಯಿತು. ಏನಾಗಿದೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಬ್ಯಾಂಕ್ ಖಾತೆಯಲ್ಲಿ 100 ಕೋಟಿ ರೂ. ಇರುವುದನ್ನು ಮೊದಲಿಗೆ ನಾನು ನಂಬಿಲ್ಲ. ಈ ಬಗ್ಗೆ ಪಿಎನ್‌ಬಿ ಶಾಖೆಗೆ ತೆರಳಿ ವಿಚಾರಿಸಿದೆ. ಪಾಸ್‌ಬುಕ್‌ ಪರಿಶೀಲಿಸಿ ಆರಂಭದಲ್ಲಿ 17 ರೂಪಾಯಿ ಮಾತ್ರ ಖಾತೆಯಲ್ಲಿತ್ತು ಎಂದು ಬ್ಯಾಂಕ್ ತಿಳಿಸಿತು.

    ಇದನ್ನೂ ಓದಿ: ಹಿಂದು ಯುವಕ-ಮುಸ್ಲಿಂ ಯುವತಿ ಸುತ್ತಾಟ; ಹಲ್ಲೆಗೆ ಮುಂದಾದ ಮುಸ್ಲಿಂ ಯುವಕರು!

    ನಾನು ದಿನಗೂಲಿ ಕೆಲಸ ಮಾಡುತ್ತಿದ್ದು, ಈ ಹಣದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಾರೆ, ಹೊಡೆಯುತ್ತಾರೆ ಎಂಬ ಭಯದಲ್ಲಿ ಮನೆಯಲ್ಲೇ ದಿನ ಕಳೆಯುವಂತಾಗಿದೆ. ಸದ್ಯ ನನ್ನ ಖಾತೆಯನ್ನು ಬ್ಯಾಂಕ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪೊಲೀಸ್ ಪ್ರಕರಣ ದಾಖಲಾಗಿರುವುದರಿಂದ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ನಾಸಿರುಲ್ಲಾ ಮಂಡಲ್ ಹೇಳಿದ್ದಾನೆ.

    ಬೆಳಗಾಗುವಷ್ಟರಲ್ಲಿ ಕೋಟ್ಯಧಿಪತಿಯಾದ ಕೂಲಿ ಕಾರ್ಮಿಕ; 17 ರೂ. ಇದ್ದ ಬ್ಯಾಂಕ್ ಖಾತೆಯಲ್ಲೀಗ 100 ಕೋಟಿ ರೂ.!

    ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಜಂಗಿಪುರ ಸೈಬರ್ ಸೆಲ್ ಅಧಿಕಾರಿಗಳನ್ನು ಸಂಪರ್ಕಿಸಿದೆ. ಆದರೆ ಅಲ್ಲಿನ ಅಧಿಕಾರಿಗಳು ಪ್ರಕರಣದ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts