More

    ದಕ್ಷಿಣ ಕನ್ನಡ ಜಿಲ್ಲಾ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕ್ಷಣ ಕ್ಷಣದ ಮಾಹಿತಿ

    ಮಂಗಳೂರು: ಸುರತ್ಕಲ್ ಮುಕ್ಕದ ಎನ್‌ಐಟಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದ್ದು, ಕ್ಷಣ ಕ್ಷಣದ ಅಪ್‌ಡೇಟ್ ಇಲ್ಲಿದೆ…

    ದ.ಕ. ಜಿಲ್ಲಾ ಕ್ಷೇತ್ರವಾರು ಮುನ್ನಡೆ ವಿವರ

    ಮಂಗಳೂರು ನಗರ ಉತ್ತರ

    ಡಾ.ವೈ. ಭರತ್ ಶೆಟ್ಟಿ(ಬಿಜೆಪಿ): 103531
    ಇನಾಯತ್ ಅಲಿ(ಕಾಂಗ್ರೆಸ್): 70609
    ಮೊಹಿಯುದ್ದೀನ್ ಬಾವಾ(ಜೆಡಿಎಸ್): 5256

    ಮಂಗಳೂರು ನಗರ ದಕ್ಷಿಣ

    ವೇದವ್ಯಾಸ್ ಕಾಮತ್(ಬಿಜೆಪಿ): 91437
    ಜೆ.ಆರ್.ಲೋಬೊ(ಕಾಂಗ್ರೆಸ್): 67475

    ಮಂಗಳೂರು

    ಯು.ಟಿ.ಖಾದರ್(ಕಾಂಗ್ರೆಸ್): 83219
    ಸತೀಶ್ ಕುಂಪಲ(ಬಿಜೆಪಿ): 60429

    ಪುತ್ತೂರು

    ಆಶಾ ತಿಮ್ಮಪ್ಪ(ಬಿಜೆಪಿ): 37558
    ಅಶೋಕ್ ಕುಮಾರ್ ರೈ(ಕಾಂಗ್ರೆಸ್): 66607
    ಅರುಣ್ ಕುಮಾರ್ ಪುತ್ತಿಲ(ಪಕ್ಷೇತರ): 62458

    ಬೆಳ್ತಂಗಡಿ

    ಹರೀಶ್ ಪೂಂಜ(ಬಿಜೆಪಿ): 101004
    ರಕ್ಷಿತ್ ಶಿವರಾಂ(ಕಾಂಗ್ರೆಸ್): 82788

    ಸುಳ್ಯ

    ಭಾಗೀರಥಿ ಮುರುಳ್ಯ(ಬಿಜೆಪಿ): 93911
    ಜಿ.ಕೃಷ್ಣಪ್ಪ (ಕಾಂಗ್ರೆಸ್): 63037

    ಮೂಡುಬಿದಿರೆ

    ಉಮಾನಾಥ ಕೋಟ್ಯಾನ್(ಬಿಜೆಪಿ): 86925
    ಮಿಥುನ್ ರೈ (ಕಾಂಗ್ರೆಸ್): 64457

    ಬಂಟ್ವಾಳ

    ರಾಜೇಶ್ ನಾೈಕ್(ಬಿಜೆಪಿ): 93324
    ರಮಾನಾಥ ರೈ(ಕಾಂಗ್ರೆಸ್): 85042

    ಪುತ್ತೂರು ಕಾಂಗ್ರೆಸ್ ತೆಕ್ಕೆಗೆ

    ಇಡೀ ರಾಜ್ಯದ ಜನತೆಯ ಗಮನವನ್ನು ತನ್ನತ್ತ ಸೆಳೆದಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಮತ ಎಣಿಕೆಯ ಆರಂಭದಿಂದಲೂ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಹಾಗೂ ಕಾಂಗ್ರೆಸ್‌ನ ಅಶೋಕ್ ಕುಮಾರ್ ರೈ ನಡುವೆ ಜಿದ್ದಿಜಿದ್ದಿನ ಪೈಪೋಟಿ ಏರ್ಪಟ್ಟಿದ್ದು, ಗೆಲುವು ಅಶೋಕ್ ರೈ ಪಾಲಾಗಿದೆ. ಅರುಣ್ ಕುಮಾರ್ ಪುತ್ತಿಲ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು, ಬಿಜೆಪಿ ಮಾತ್ರ ಆಶಾ ತಿಮ್ಮಪ್ಪ ಅವರಿಗೆ ಟಿಕೆಟ್ ನೀಡಿತ್ತು. ಇದರಿಂದ ಮನ ನೊಂದಿದ್ದ ಪುತ್ತಿಲ ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ಬೆಳವಣಿಗೆ ಕಾಂಗ್ರೆಸ್ ಗೆಲುವಿಗೆ ನೆರವಾಗಿದೆ ಎಂದರೆ ತಪ್ಪಾಗಲಾರದು.

    ಪುತ್ತಿಲಗೆ ಹಿನ್ನಡೆ

    ಪುತ್ತೂರು ವಿಧಾನಸಭಾ ಕ್ಷೇತ್ರ ರಾಜ್ಯದ ಜನತೆಯ ಗಮನ ಸೆಳೆದಿದ್ದು, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗ ಪಕ್ಷೇತರ ಅಭ್ಯರ್ಥಿ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ಕೆಲ ಸಮಯದ ಹಿಂದೆ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಸಣ್ಣ ಮಟ್ಟಿನ ಮುನ್ನಡೆಯಲ್ಲಿದ್ದರೆ, ಇದೀಗ ಹನ್ನೆರಡನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಾಗ ಕಾಂಗ್ರೆಸ್ ಅಭ್ಯರ್ಥಿ 237 ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ.

    ಅರುಣ್ ಕುಮಾರ್ ಪುತ್ತಿಲ ಮುನ್ನಡೆ

    ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ 119 ಮತಗಳ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಆಶಾ ತಿಮ್ಮಪ್ಪಗೌಡ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಹಿನ್ನಡೆ ಅನುಭವಿಸಿದ್ದಾರೆ. ಈ ಬಾರಿ ಬಿಜೆಪಿ ವರ್ಸಸ್ ಹಿಂದುತ್ವ ನಡುವೆ ಭಾರೀ ಪೈಪೋಟಿ ನಡೆದಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ರೈ ಟಫ್‌ ಫೈಟ್‌ ಕೊಡ್ತಿದ್ದಾರೆ. ಹಿಂದು ಮುಖಂಡ ಅರುಣ್‌ ಕುಮಾರ್‌ ಪುತ್ತೀಲ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಟಿಕೆಟ್‌ ನೀಡದೇ ಆಶಾ ತಿಮ್ಮಪ್ಪ ಗೌಡಗೆ ಟಿಕೆಟ್‌ ನೀಡಿತ್ತು. ಇದರಿಂದ ಬೇಸತ್ತ ಅರುಣ್‌ ಕುಮಾರ್‌ ಪುತ್ತಿಲ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

    4 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು

    ದಕ್ಷಿಣ ಕನ್ನಡದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ದಾಖಲಿಸಿದೆ. ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಸುಳ್ಯ ಹಾಗೂ ಬೆಳ್ತಂಗಡಿ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮೂಡುಬಿದಿರೆ ಹಾಗೂ ಬಂಟ್ವಾಳದಲ್ಲಿ ಬಿಜೆಪಿ ಮುನ್ನಡು ಸಾಧಿಸಿದೆ.

    ಮಂಗಳೂರು ಕಾಂಗ್ರೆಸ್ ತೆಕ್ಕೆಗೆ

    ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಯು.ಟಿ.ಖಾದರ್ ಜಯ ದಾಖಲಿಸಿದ್ದಾರೆ. ಮತ ಎಣಿಕೆಯ ಆರಂಭದಿಂದಲೂ ಖಾದರ್ ಮುನ್ನಡೆಯಲ್ಲಿದ್ದರು.

    ಗೆಲುವಿನ ಸನಿಹದಲ್ಲಿ ಭರತ್ ಶೆಟ್ಟಿ, ಭಾಗೀರಥಿ, ಹರೀಶ್ ಪೂಂಜ

    ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ವೈ ಭರತ್ ಶೆಟ್ಟಿ ಗೆಲುವಿನ ಸನಿಹದಲ್ಲಿದ್ದಾರೆ. ಸದ್ಯ 27036 ಮತಗಳ ಭರ್ಜರಿ ಮುನ್ನಡೆಯಲ್ಲಿರುವ ಭರತ್ ಶೆಟ್ಟಿ ಗೆಲುವು ಬಹುತೇಕ ಫಿಕ್ಸ್ ಎನ್ನಬಹುದು. ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಗೆಲುವಿನ ಸನಿಹದಲ್ಲಿದ್ದು, ಸದ್ಯ 30,000 ಮತಗಳ ಭರ್ಜರಿ ಮುನ್ನಡೆಯಲ್ಲಿದ್ದಾರೆ. ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಗೆಲುವು ಬಹುತೇಕ ಫಿಕ್ಸ್ ಎನ್ನಬಹುದು.

    ವೇದವ್ಯಾಸ ಕಾಮತ್ ಜಯಭೇರಿ

    ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರು ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ವಿರುದ್ಧ ಜಯ ದಾಖಲಿಸಿದ್ದಾರೆ. ಮತ ಎಣಿಕೆಯ ಮೊದಲ ಸುತ್ತಿನಿಂದಲೂ ವೇದವ್ಯಾಸ ಕಾಮತ್ ಮುನ್ನಡೆಯಲ್ಲಿದ್ದರು.

    Vedavyasa Kamath

    ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ಖಾದರ್

    ರಿಲ್ಯಾಕ್ಸ್ ಮೂಡಿನಲ್ಲಿ ಕಾಣಿಸಿಕೊಂಡಿರುವ ಮಂಗಳೂರು ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಮತ ಎಣಿಕೆ ನಡೆಯುತ್ತಿರುವ ವೇಳೆ ಮಕ್ಕಳೊಂದಿಗೆ ಕ್ರಿಕೆಟ್ ಆಟವಾಡಿದರು. ಮತ ಎಣಿಕೆ ಟೆನ್ಶನ್ ಇಲ್ಲದೆ ಉಳ್ಳಾಲದ ಭಾರತ್ ಗ್ರೌಂಡ್‌ನಲ್ಲಿ ಮಕ್ಕಳ ಜತೆ ಕ್ರಿಕೆಟ್ ಆಡಿಕೊಂಡು ಎಂಜಾಯ್ ಮಾಡಿದರು. ಈ ಬಾರಿಯೂ ಬಾರಿ ಬಹುಮತದ ಗೆಲುವಿನ ನಿರೀಕ್ಷೆಯಲ್ಲಿದ್ದು, ಈಗಾಗಲೇ ಮುನ್ನಡೆ ಕಾಯ್ದುಕೊಂಡಿದ್ದಾರೆ.

    Khadar

    8 ಕ್ಷೇತ್ರಗಳಲ್ಲಿ 60 ಅಭ್ಯರ್ಥಿಗಳು

    ದ.ಕ. ಜಿಲ್ಲೆಯ 8 ಕ್ಷೇತ್ರಗಳಲ್ಲಿ 13,76,500 ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಿದ್ದು, ಶನಿವಾರ ತೀರ್ಪು ಪ್ರಕಟವಾದ ಬಳಿಕ 60ರಲ್ಲಿ ವಿಧಾನಸಭೆ ಪ್ರವೇಶಿಸುವ ಅದೃಷ್ಟ ಪಡೆಯುವ ಎಂಟು ಮಂದಿ ಯಾರು ಎಂಬುದು ಗೊತ್ತಾಗಲಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಜೆಡಿಎಸ್-7, ಎಸ್‌ಡಿಪಿಐ- 5, ಕೆಆರ್‌ಎಸ್-5, ಹಿಂದು ಮಹಾಸಭಾ-2, ಉತ್ತಮ ಪ್ರಜಾಕೀಯ ಪಕ್ಷ- 2, ಹಿಂದುಸ್ತಾನ್ ಜನತಾ ಪಾರ್ಟಿ ಸೆಕ್ಯುಲರ್, ಸರ್ವೋದಯ ಕರ್ನಾಟಕ ಪಕ್ಷ, ತುಳುವೆರೆ ಪಕ್ಷ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಮತ್ತು ಜನಹಿತ ಪಕ್ಷ ತಲಾ 1 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 10 ಪಕ್ಷೇತರರು ಕಣದಲ್ಲಿದ್ದಾರೆ.

    ಮಾಡು-ಮಡಿ ಹೋರಾಟ

    ಜಿಲ್ಲೆಯಲ್ಲಿ ಆಡಳಿತ ಪಕ್ಷದ 7 ಶಾಸಕರಿದ್ದು, ಈ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದು ಬಿಜೆಪಿಗೆ ಪ್ರತಿಷ್ಠೆಯಾಗಿದೆ. ಸಂಘ ಪರಿವಾರದ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಜಿಲ್ಲೆಯಲ್ಲಿ ಮತ್ತೆ ಪ್ರಾಬಲ್ಯ ಮೆರೆಯಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಮೂಲ್ಕಿಗೆ ಆಗಮಿಸಿ ಭರ್ಜರಿ ಪ್ರಚಾರ ಭಾಷಣ ಮಾಡಿದ್ದರೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ , ಪ್ರಿಯಾಂಕಾ ಗಾಂಧಿ ಜಿಲ್ಲೆಗೆ ಆಗಮಿಸಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. 2013ರ ಚುನಾವಣೆಯಲ್ಲಿ ಜಿಲ್ಲೆಯ 7 ಕ್ಷೇತ್ರಗಳನ್ನು ಗೆದ್ದಿದ್ದ ಕಾಂಗ್ರೆಸ್ ಮತ್ತೆ ಎಲ್ಲ ಕ್ಷೇತ್ರಗಳನ್ನು ವಶಪಡಿಸಿಕೊಳ್ಳಲು ಶತ ಪ್ರಯತ್ನ ನಡೆಸಿದೆ.

    ಮಂಗಳೂರು ಉತ್ತರದಲ್ಲಿ 10

    ಮಂಗಳೂರು ನಗರ ಉತ್ತರ 10 ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವ ಕಾರಣಕ್ಕೆ ಜಿಲ್ಲೆಯಲ್ಲೇ ಗರಿಷ್ಠ ಅಭ್ಯರ್ಥಿಗಳಿರುವ ಕ್ಷೇತ್ರ ಎನಿಸಿದೆ. ಪುತ್ತೂರು, ಬೆಳ್ತಂಗಡಿ, ಸುಳ್ಯ, ಮೂಡುಬಿದಿರೆ, ಮಂಗಳೂರು ದಕ್ಷಿಣದಲ್ಲಿ ತಲಾ 8 ಅಭ್ಯರ್ಥಿಗಳು ಹಾಗೂ ಬಂಟ್ವಾಳ ಮತ್ತು ಮಂಗಳೂರು ಕ್ಷೇತ್ರದಲ್ಲಿ ತಲಾ 5 ಅಭ್ಯರ್ಥಿಗಳಿದ್ದಾರೆ.

    ರಮಾನಾಥ ರೈ 9ನೇ ಬಾರಿ ಸ್ಪರ್ಧೆ

    2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಿ.ರಮಾನಾಥ ರೈ, ಯು.ಟಿ. ಖಾದರ್ (ಹಾಲಿ ಶಾಸಕ), ಜೆ.ಆರ್.ಲೋಬೊ ಮತ್ತೆ ಕಣದಲ್ಲಿದ್ದಾರೆ. ಬಂಟ್ವಾಳ ಕ್ಷೇತ್ರದಲ್ಲಿ ಬಿ.ರಮಾನಾಥ ರೈ 9ನೇ ಬಾರಿ ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ 6 ಬಾರಿ ಜಯ ಗಳಿಸಿರುವ ಅವರು 2 ಬಾರಿ ಪರಾಭವಗೊಂಡಿದ್ದರು. ಮಂಗಳೂರು ಕ್ಷೇತ್ರದಲ್ಲಿ ಸತತ 4 ಜಯ ದಾಖಲಿಸಿರುವ ಯು.ಟಿ.ಖಾದರ್ 5 ಬಾರಿಗೆ ಕಣದಲ್ಲಿದ್ದಾರೆ. ಜೆ.ಆರ್.ಲೋಬೊ ಅವರಿಗೆ ಇದು 3ನೇ ಬಾರಿಯ ಸ್ಪರ್ಧೆ.

    ಪುನರಾಯ್ಕೆ ಬಯಸಿದವರು

    ಬಿಜೆಪಿ ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಹರೀಶ್ ಪೂಂಜ, ರಾಜೇಶ್ ನಾಕ್ ಮತ್ತು ಉಮಾನಾಥ ಕೋಟ್ಯಾನ್ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಪೈಕಿ ರಾಜೇಶ್ ನಾಕ್ ಮತ್ತು ಉಮಾನಾಥ ಕೋಟ್ಯಾನ್ ಅವರಿಗೆ ಇದು 3ನೇ ಸ್ಪರ್ಧೆ.

    ಹೊಸಮುಖಗಳು

    ಕಾಂಗ್ರೆಸ್‌ನಿಂದ ಮಿಥುನ್ ರೈ, ರಕ್ಷಿತ್ ಶಿವರಾಂ, ಇನಾಯತ್ ಅಲಿ, ಬಿ.ಕೃಷ್ಣಪ್ಪ, ಅಶೋಕ್ ಕುಮಾರ್ ರೈ, ಬಿಜೆಪಿಯಿಂದ ಆಶಾ ತಿಮ್ಮಪ್ಪ, ಸತೀಶ್ ಕುಂಪಲ, ಭಾಗೀರಥಿ ಮುರುಳ್ಯ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವವರು. ಈ ಪೈಕಿ ಮಿಥುನ್ ರೈ 2019ರ ಲೋಕಸಭಾ ಚುನಾವಣೆಯಲ್ಲಿ ದ.ಕ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದವರು.

    ಮತ್ತೆ ಮುಖಾಮುಖಿ

    ಬಂಟ್ವಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಮಾನಾಥ ರೈ ಮತ್ತು ಬಿಜೆಪಿಯ ರಾಜೇಶ್ ನಾಕ್ ಸತತ ಮೂರನೇ ಬಾರಿಗೆ ಎದುರಾಳಿಗಳಾಗಿದ್ದರೆ, ಮಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್‌ನ ಜೆ.ಆರ್.ಲೋಬೊ ಮತ್ತು ಬಿಜೆಪಿಯ ವೇದವ್ಯಾಸ ಕಾಮತ್ 2ನೇ ಬಾರಿ ಮುಖಾಮುಖಿಯಾಗಿದ್ದಾರೆ. 2018ರ ಚುನಾವಣೆಯಲ್ಲಿ ಮಂಗಳೂರು ಉತ್ತರದಲ್ಲಿ ಬಿಜೆಪಿಯ ಡಾ.ವೈ.ಭರತ್ ಶೆಟ್ಟಿ ವಿರುದ್ಧ ಪರಾಭವಗೊಂಡಿದ್ದ ಕಾಂಗ್ರೆಸ್‌ನ ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts