ದೆಹಲಿ: ಮುಖೇಶ್ ಆಂಬಾನಿ ಒಡೆತನದ ರಿಲಯನ್ಸ್ ಜಿಯೋ ಕಂಪನಿಯೂ ದೇಶಾದ್ಯಂತ ವೇಗವಾದ 5G ನೆಟ್ವರ್ಕ್ ನೀಡುವ ಸಲುವಾಗಿ 1ಲಕ್ಷ ಮೊಬೈಲ್ ಟವರ್ಗಳನ್ನು ಸ್ಥಾಪಿಸಿರುವುದಾಗಿ ದೂರಸಂಪರ್ಕ ಇಲಾಖೆಯ ದತ್ತಾಂಶದಿಂದ ತಿಳಿದು ಬಂದಿದೆ.
ದೇಶಾದ್ಯಂತ ವೇಗದ 5G ನೆಟ್ವರ್ಕ್ ನೀಡುವ ಸಲುವಾಗಿ ದೊಡ್ಡ ಪ್ರಮಾಣದಲ್ಲಿ ಮೊಬೈಲ್ ಟವರ್ಗಳನ್ನು ಜಿಯೋ ಕಂಪನಿ ಸ್ಥಾಪಿಸಿದೆ. ಇದು ತನ್ನ ಹತ್ತಿರದ ಪ್ರತಿಸ್ಪರ್ಧಿಗಿಂತ 5ಪಟ್ಟು ಹೆಚ್ಚು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ತುಂಬಿದ ಮಾಲ್ನಲ್ಲಿ ಯುವಕನಿಂದ ಅಶ್ಲೀಲ ವರ್ತನೆ: ಕೊನೆಗೂ ಸತ್ಯಾಂಶ ತಿಳಿಸಿದ ನಟಿ ಸಾನಿಯಾ!
ದೂರಸಂಪರ್ಕ ಇಲಾಖೆ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ ಜಿಯೋ ಕಂಪನಿಯೂ 7,00MHZ ಹಾಗೂ 3,500MHZ ಸಾಮರ್ಥ್ಯದ 99,897 ಟವರ್ಗಳನ್ನು ಸ್ಥಾಪಿಸಿದೆ. ತನ್ನ ಹತ್ತಿರದ ಪ್ರತಿಸ್ಪರ್ಧಿ ಏರ್ಟೆಲ್ 22,219 ಟವರ್ಗಳನ್ನು ಸ್ಥಾಪಿಸಿದೆ.