ಬೆಂಗಳೂರು: ಓಯೊ ಮುಖ್ಯಸ್ಥ ರಿತೇಶ್ ಅಗರ್ವಾಲ್ ಮುಂದಿನ ತಿಂಗಳು ಮದುವೆಯಾಗಲು ಸಜ್ಜಾಗಿದ್ದು ಇಂದು (ಫೆ.18) ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ಅವರನ್ನು ಆಹ್ವಾನಿಸಿದ್ದಾರೆ.
ರಿತೇಶ್ ಅಗರ್ವಾಲ್, ಪ್ರಧಾನಿ ನಿವಾಸಕ್ಕೆ ತಮ್ಮ ತಾಯಿ ಮತ್ತು ಅವರ ಭಾವಿ ಪತ್ನಿಯೊಂದಿಗೆ ತೆರಳಿ ಆಮಂತ್ರಿಸಿದ್ದು ಭೇಟಿಯ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ರಿತೇಶ್ ಅಗರ್ವಾಲ್ ಹಂಚಿಕೊಂಡಿರುವ ಫೋಟೋಗಳಲ್ಲಿ ಭಾವಿ ದಂಪತಿ ಪ್ರಧಾನಿಯ ಪಾದಗಳನ್ನು ಸ್ಪರ್ಶಿಸುತ್ತಿರುವುದು ಕಂಡುಬಂದಿದೆ. ಈ ಸಂದರ್ಭ ಅಗರ್ವಾಲ್ ಕೂಡ ಪ್ರಧಾನಿಯವರ ಭುಜಕ್ಕೆ ಶಾಲು ಹೊದಿಸಿದರು.
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಓಯೊ ಮುಖ್ಯಸ್ಥ “ಪ್ರಧಾನ ಮಂತ್ರಿ ಅವರ ಆಶೀರ್ವಾದದೊಂದಿಗೆ, ನಾವು ಹೊಸ ಜೀವನಕ್ಕೆ ಸಿದ್ಧರಾಗಿದ್ದೇವೆ” ಎಂದು ಅವರು ಬರೆದಿದ್ದಾರೆ. “ಅವರು ನಮ್ಮನ್ನು ಸ್ವೀಕರಿಸಿದ ರೀತಿಯನ್ನು ಪದಗಳು ಬಣ್ಣಿಸಲು ಸಾಧ್ಯವಿಲ್ಲ” ಎಂದಿದ್ದಾರೆ.
ಇನ್ನು ಈ ಪೊಸ್ಟ್ನ ಕಾಮೆಂಟ್ ವಿಭಾಗದಲ್ಲಿ ಬಹುತೇಕ ಜನರು ಶುಭವನ್ನು ಹಾರೈಸಿದ್ದಾರೆ. ಇನ್ನೂ ಕೆಲವರು ಪ್ರೇಮಿಗಳನ್ನು ತಮ್ಮ ಹೋಟೇಲುಗಳ ಮೂಲಕ ಒಂದಾಗಿಸಿದ ಓಯೊವನ್ನು ಪ್ರಶಂಸಿದ್ದಾರೆ.
View this post on Instagram