ಬೆಂಗಳೂರು: ಕಿರುತೆರೆ ನಟಿ ತುನಿಷಾ ಶರ್ಮಾ(20) ಸೆಟ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಇದೀಗ ಹೊಸ ತಿರುವನ್ನು ಪಡೆದಿದೆ. ಅದರ ರಹಸ್ಯ ಇರೋದು ಆಕೆಯ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ! ಈಕೆ ತಾನು ನಟಿಸುತ್ತಿದ್ದ ಕಿರುತೆರೆಯ ಶೂಟಿಂಗ್ ಸೆಟ್ನಲ್ಲೇ ನೇಣು ಹಾಕಿಕೊಂಡಿದ್ದಳು. ಸ್ಥಳದಲ್ಲಿದ್ದವರು ಕೂಡಲೇ ಈಕೆಯನ್ನು ಆಸ್ಪತ್ರೆಗೆ ಕರೆದೊಯ್ದರು, ಅದಾಗಲೇ ಆಕೆ ಮೃತಪಟ್ಟಿದ್ದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಘಟನೆಯಿಂದ ಸೆಟ್ನಲ್ಲಿದ್ದವರು ತೀವ್ರ ಆಘಾತಕ್ಕೆ ಒಳಗಾಗಿದ್ದು, ನಟಿಯ ಶವವನ್ನು ನೋಡಿ ಬೆಚ್ಚಿಬಿದ್ದಿದ್ದರು. ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎಂಬಿತ್ಯಾದಿ ಸಂಗತಿಗಳು ಇನ್ನಷ್ಟೇ ಖಚಿತವಾಗಿ ತಿಳಿಯಬೇಕಿದೆ. ಇಂತಹ ಸಂದಭದಲ್ಲಿ ಆಕೆಯ ಇನ್ಸ್ಟಾ ಸ್ಟೋರಿ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ನಟಿ ತುನಿಷಾ, ಇನ್ಸ್ಟಾ ಸ್ಟೋರಿಯಲ್ಲಿ ಮೇಕಪ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದರು. ಇದು ಆತ್ಮಹತ್ಯೆ ಮಾಡಿಕೊಳ್ಳುವ 6 ಗಂಟೆ ಹಿಂದೆ ಅಷ್ಟೇ ನಡೆದದ್ದು. ಈ ವಿಡಿಯೋದಲ್ಲಿ ಆಕೆ ಮಣಿಗಂಟನ್ನು ಕಟ್ ಮಾಡಿಕೊಳ್ಳುವ ರೀತಿ ಮೇಕಪ್ ಮಾಡಿಸಿಕೊಳ್ಳುತ್ತಿದ್ದರು.
ಅಂದರೆ ಆಕೆಯ ಪಾತ್ರ ಸೂಸೈಡ್ ಮಾಡಿಕೊಳ್ಳಲಿತ್ತಾ ಎನ್ನುವ ಪ್ರಶ್ನೆ ಎದ್ದಿದೆ. ರೀಲ್ ಬದುಕಿನ ಕಥೆಯನ್ನೇ ರಿಯಲ್ ಎಂದು ನಂಬಿ ಜೀವನವನ್ನೇ ಕೊನೆಗೊಳಿಸಿದ್ರಾ ಎನ್ನುವಂತಹ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಆಕೆಯ ಆತ್ಮಹತ್ಯೆಯ ಹಿಂದಿನ ರಹಸ್ಯ ತನಿಖೆಯಿಂದಲೇ ಹೊರಬರಬೇಕಿದೆ.