ಬೆಂಗಳೂರು: ಪ್ರವೇಗ್ ಡೈನಾಮಿಕ್ ಕಂಪನಿಯು ತನ್ನ ಬಹುನೀರಿಕ್ಷಿತ ಡಿಫೈ ಎಸ್ಯುವಿ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಬೆಂಗಳೂರಿನ ಸ್ಟಾರ್ಟ್ಅಪ್ ಕಂಪನಿಯಾಗಿರುವ ಪ್ರವೇಗ್ ಡೈನಾಮಿಕ್ ಐಷಾರಾಮಿ ಮಾದರಿಯ ಎಸ್ಯುವಿ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಕಾರಿನ ಎಕ್ಸ್ ಶೋರೂಂ ಬೆಲೆ 39.50 ಲಕ್ಷ ರೂ.
ಎಲೆಕ್ಟ್ರಿಕ್ ಎಸ್ಯುವಿ ಕಾರು ಸುಧಾರಿತ ವ್ಯವಸ್ಥೆಗಳನ್ನು ಹೊಂದಿದ್ದು, ಈ ಕಾರು 90.9kWh ಬ್ಯಾಟರಿ ಪ್ಯಾಕ್ ಹೊಂದಿದೆ. ಒಂದು ಬಾರಿ ಚಾರ್ಚ್ ಮಾಡಿದರೆ 500 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಚಾರ್ಜ್ ಮಾಡಲು 7.22 ಕಿ.ವ್ಯಾ. ಚಾರ್ಜರ್ ನೀಡಲಿದ್ದು, 150 ಕಿ.ವ್ಯಾ. ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯಿದೆ. ಕೇವಲ 90 ನಿಮಿಷಯದಲ್ಲಿ ಫಾಸ್ಟ್ ಚಾರ್ಜಿಂಗ್ ಆಗಲಿದೆ.
ಡಿಫೈ ಎಸ್ಯುವಿ ಎಲೆಕ್ಟ್ರಿಕ್ ಕಾರು ಗಂಟೆಗೆ 200 ಕಿ.ಮೀ ಟಾಪ್ ಸ್ಪೀಡ್ನಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಕೇವಲ 5.4 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳಲಿದೆ. ವಿನ್ಯಾಸದಲ್ಲಿ ಇತರೆ ಎಲೆಕ್ಟ್ರಾಕ್ ಕಾರುಗಳಿಗಿಂತ ವಿಭಿನ್ನವಾಗಿದ್ದು, ಐಷಾರಾಮಿಯಾಗಿ ರೂಪುಗೊಂಡಿದೆ. ಸುರಕ್ಷತೆಯ ದೃಷ್ಠಿಯಿಂದ ಆರು ಏರ್ಬ್ಯಾಗ್ ಹೊಂದಿದೆ.