ದುಬೈ: ಅದೃಷ್ಟವೆನ್ನೋದು ಯಾರಿಗೆ ಯಾವಾಗ ಒಲಿದುಬರುತ್ತದೆ ಎನ್ನುವುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಕರೊನಾ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡು, ದುಬೈ ಬಿಟ್ಟು ಬರುವ ಯೋಚನೆ ಮಾಡುತ್ತಿದ್ದ ಭಾರತೀಯನೊಬ್ಬನಿಗೆ ಅದೃಷ್ಟ ಒಲಿದಿದ್ದು, ರಾತ್ರೋರಾತ್ರಿ ಆತ ಕೋಟ್ಯಧಿಪತಿಯಾಗಿ ಬದಲಾಗಿದ್ದಾನೆ.
ಇದನ್ನೂ ಓದಿ: ಮಲತಂದೆಯನ್ನು ಕೊಂದು, ಅಮ್ಮನನ್ನು ಆಸ್ಪತ್ರೆಗೆ ಸೇರುವಂತೆ ಮಾಡಿದ ಮಗ! ವಿಡಿಯೋ ಗೇಮ್ನಿಂದಾಗಿ ರಕ್ತದೋಕುಳಿಯೇ ಹರಿಯಿತು!
ಭಾರತದ ಕೇರಳ ಮೂಲದ ನವನೀತ್ ಸಜೀವನ್ (30) ತಮ್ಮ ಹೆಂಡತಿ ಮತ್ತು ಮಗುವೊಂದಿಗೆ ದುಬೈನಲ್ಲಿದ್ದಾರೆ. ಅವರು ಕಳೆದ ನಾಲ್ಕು ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಕರೊನಾ ಬಂದ ನಂತರ ಅವರ ಸಂಸ್ಥೆಯಲ್ಲಿ ಸಾಕಷ್ಟು ಜನರನ್ನು ಕೆಲಸದಿಂದ ತೆಗೆದುಹಾಕಿದ್ದು, ನವನೀತ್ ಕೂಡ ನಿರುದ್ಯೋಗಿಯಾಗಿದ್ದಾರೆ. ಇತ್ತೀಚೆಗೆ ಇಂಟರ್ವ್ಯೂ ಒಂದನ್ನು ಮುಗಿಸಿಕೊಂಡು ಮನೆಗೆ ಬರುವ ಸಮಯದಲ್ಲಿ ಅವರಿಗೆ ಅದೃಷ್ಟ ಒಲಿದುಬಂದಿದೆ.
ಇಂಟರ್ವ್ಯೂನಿಂದ ಮನೆಗೆ ಬರುವಾಗ ನವನೀತ್ಗೆ ಫೋನ್ ಕಾಲ್ ಒಂದು ಬಂದಿದೆ. ನೀವು ಲಾಟರಿಯಲ್ಲಿ 1 ಮಿಲಿಯನ್ ಡಾಲರ್ (7.3 ಕೋಟಿ ರೂಪಾಯಿ) ಗೆದ್ದಿದ್ದೀರಿ ಎಂದು ಕರೆಯಲ್ಲಿ ತಿಳಿಸಲಾಗಿದೆ. ವಿಚಾರ ತಿಳಿದ ನವನೀತ್ ಖುಷಿಯಲ್ಲಿ ತೇಲಾಡಿದ್ದಾರೆ. ಸುಮಾರು 20 ಲಕ್ಷ ರೂಪಾಯಿ ಸಾಲವಿದ್ದು, ಅದನ್ನು ಈ ಹಣದಲ್ಲಿ ತೀರಿಸಿಕೊಳ್ಳುವ ಯೋಚನೆ ಮಾಡಿದ್ದಾರೆ.
ಇದನ್ನೂ ಓದಿ: ಮಲತಾಯಿಯನ್ನೇ ರೇಪ್ ಮಾಡಿದ ಕಾಮುಕ ಮಗ! ವಿಚಾರ ಹೊರಬರದಿರುವಂತೆ ನೋಡಿಕೋ ಎಂದ ಕುಟುಂಬಸ್ಥರು!
ಕೆಲಸ ಕಳೆದುಕೊಂಡಾಗಿನಿಂದ ಜಿಗುಪ್ಸೆಯಲ್ಲಿದ್ದ ನವನೀತ್ ಇತ್ತೀಚೆಗೆ ದುಬೈ ಬಿಟ್ಟು ಕೇರಳಕ್ಕೆ ವಾಪಾಸಾಗುವ ಯೋಚನೆಯನ್ನೂ ಮಾಡಿದ್ದರಂತೆ. ಆದರೆ ನವೆಂಬರ್ 22ರಂದು ದುಬೈ ಡ್ಯೂಟಿ ಫ್ರೀ ಟಿಕೆಟ್ ಖರೀದಿಸಿದ್ದಾರೆ. ಅದೇ ಅವರಿಗೆ ಭಾಗ್ಯದ ಬಾಗಿಲನ್ನು ತೆರೆದುಕೊಟ್ಟಿದೆ.
ದುಬೈನಲ್ಲಿ ಅತಿ ಹೆಚ್ಚು ಲಾಟರಿ ಟಿಕೆಟ್ ಖರೀದಿಸುವವರು ಭಾರತೀಯರೇ ಆಗಿದ್ದಾರೆ. ಅಲ್ಲಿ 1 ಮಿಲಿಯನ್ ಡಾಲರ್ಲಾಟರಿ ಗೆದ್ದಿರುವ 171ನೇ ಭಾರತೀಯನಾಗಿ ನವನೀತ್ ಹೊರಹೊಮ್ಮಿದ್ದಾರೆ. (ಏಜೆನ್ಸೀಸ್)
ಮದುವೆಯಾಗಿ ಎರಡೇ ತಿಂಗಳಲ್ಲಿ ಗರ್ಭಿಣಿಯಾಗಿದ್ದು ಹೇಗೆ? ಹೊಟ್ಟೆ ಹಿಂದಿನ ಸತ್ಯ ಬಿಚ್ಚಿಟ್ಟ ಗಾಯಕಿ!
ಮಾರ್ಕ್ಸ್ ಬೇಕೆಂದರೆ ನನ್ನ ಜತೆ ಸೆಕ್ಸ್ ಮಾಡಿ! ಸರ್ಕಾರಿ ಶಾಲಾ ಶಿಕ್ಷಕನ ಬೇಡಿಕೆಗೆ ಬೆಚ್ಚಿದ ವಿದ್ಯಾರ್ಥಿನಿಯರು