More

    98 ಜನರಿಗೆ ಕರೊನಾ ಸೋಂಕು

    ಗದಗ: ಜಿಲ್ಲೆಯಲ್ಲಿ ಗುರುವಾರ 98 ಜನರಿಗೆ ಕರೊನಾ ಸೋಂಕು ತಗುಲಿದ್ದು, 50 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸೋಂಕಿನಿಂದ ಮೂವರು ಮೃತಪಟ್ಟಿದ್ದಾರೆ.

    ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2645ಕ್ಕೆ ಏರಿದೆ. ಇದರಲ್ಲಿ 1,446 ಜನ ಸೋಂಕಿನಿಂದ ಗುಣವಾಗಿ ಬಿಡುಗಡೆಗೊಂಡಿದ್ದಾರೆ. ಸದ್ಯ 1147 ಸಕ್ರಿಯ ಕೇಸ್​ಗಳಿವೆ. ಸೋಂಕಿನಿಂದ ಒಟ್ಟು 52 ಜನ ಮೃತಪಟ್ಟಿದ್ದಾರೆ.

    ಕೋವಿಡ್ ದೃಢಪಟ್ಟ ಪ್ರದೇಶಗಳು: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಬೆಟಗೇರಿ, ಅಂಬೇಡ್ಕರ್​ನಗರ, ಆದರ್ಶನಗರ, ಒಕ್ಕಲಗೇರಿ ಓಣಿ, ಮುಳಗುಂದ ನಾಕಾ, ಕಣಗಿನಹಾಳ ರಸ್ತೆ, ನಂದೀಶ್ವರನಗರ, ವಿವೇಕಾನಂದನಗರ, ಡೋರ ಗಲ್ಲಿ, ಪೊಲೀಸ್ ಕ್ವಾರ್ಟರ್ಸ್, ಬೆಟಗೇರಿ ಬಸ್ ನಿಲ್ದಾಣದ ಹತ್ತಿರ, ಜಲ್ಲಾ ಕ್ರೀಡಾಂಗಣದ ಹತ್ತಿರ, ಹುಡ್ಕೋ ಕಾಲನಿ, ಮಂಜುನಾಥನಗರ, ರಂಗಪ್ಪಜ್ಜನ ಮಠದ ಹತ್ತಿರ, ಹೊಸ ಬನಶಂಕರಿ ದೇವಸ್ಥಾನದ ಹತ್ತಿರ, ಎನ್.ಬಿ.ಪಾಟೀಲ ಆಸ್ಪತ್ರೆ ಹತ್ತಿರ, ನೇಕಾರ ಕಾಲನಿ, ನರಸಾಪುರ, ಟ್ಯಾಗೋರ್ ರಸ್ತೆ, ಅಬ್ಬಿಗೇರಿ ಕಾಂಪೌಂಡ್, ಹೆಲ್ತ್ ಕ್ಯಾಂಪ್. ಗದಗ ತಾಲೂಕಿನ ಮಲ್ಲಸಮುದ್ರ, ನಾಗಸಮುದ್ರ, ಲಕ್ಕುಂಡಿ, ನಾಗಾವಿ ತಾಂಡಾ, ಹೊಂಬಳ.

    ಮುಂಡರಗಿ ಪಟ್ಟಣದ ಹುಡೇದ ಓಣಿ, ಎ.ಡಿ.ನಗರ, ಮುನ್ಸಿಪಲ್ ಕಚೇರಿ ಹತ್ತಿರ, ತಾಲೂಕಿನ ಕೊರ್ಲಹಳ್ಳಿ, ಕಲಕೇರಿ, ಹಿರೇವಡ್ಡಟ್ಟಿ, ಜಂತ್ಲಿ ಶಿರೂರ, ಮಕ್ತುಂಪುರ.

    ನರಗುಂದ ಪಟ್ಟಣದ ಸಿದ್ದನಭಾವಿ, ಹಗೇದಕಟ್ಟಿ, ರಾಚಯ್ಯನಗರ, ತಾಲೂಕಿನ ಸೋಮಾಪುರ, ಚಿಕ್ಕ ನರಗುಂದ, ಹದ್ಲಿ, ಬನಹಟ್ಟಿ, ಕೊಣ್ಣೂರ, ದಂಡಾಪುರ, ಹೊಸೂರ, ಶಿರೋಳ. ಶಿರಹಟ್ಟಿ ಪಟ್ಟಣದ ಶೆಟ್ಟರ ಓಣಿ, ಅರಣ್ಯ ಇಲಾಖೆ ಕಚೇರಿ ಹತ್ತಿರ, ತಾಲೂಕಿನ ಶೀರನಹಳ್ಳಿ, ಕಡಕೋಳ, ವರವಿ, ನಾರಾಯಣಪುರ. ಲಕ್ಷ್ಮೇಶ್ವರ ಪಟ್ಟಣದ ಮ್ಯಾಗೇರಿ ಓಣಿ, ಲಕ್ಷ್ಮೀ ನಗರ. ರೋಣ ಪಟ್ಟಣದ ಶಿವಪೇಟೆ, ರೋಣ ತಾಲೂಕಿನ ಕುರಡಗಿ, ಯಾವಗಲ್, ಹೊಳೆ ಆಲೂರಿನಲ್ಲಿ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts