More

    ಹೆದರಿ ಓಡಿ ಹೋಗಿದ್ದವರೆಲ್ಲ ಈಕೆಯನ್ನು ನೋಡಿ ಲಸಿಕೆ ಪಡೆದ್ರು; ಊರಿಗೇ ಮಾದರಿ 96ರ ಈ ಆಧಾರ್ ಕುಮಾರಿ!

    ನವದೆಹಲಿ: ಯುವಕ-ಯುವತಿಯರೆಲ್ಲ ಲಸಿಕೆ ಹಾಕಿಸಿಕೊಳ್ಳಲು ಹೆದರಿ ಓಡಿಹೋಗಿ ಅಡಗಿ ಕುಳಿತರೆ ಅದೇ ಊರಿನ 96 ವರ್ಷದ ವೃದ್ಧೆಯೊಬ್ಬರು ಧೈರ್ಯದಿಂದ ಲಸಿಕೆ ಪಡೆದು ಉಳಿದವರಿಗೆ ಸ್ಫೂರ್ತಿಯಾಗಿದ್ದಾರೆ. ಮಾತ್ರವಲ್ಲ, ಲಸಿಕೆ ಎಂದರೆ ಬೆದರಿ ಪರಾರಿ ಆಗಿದ್ದವರೆಲ್ಲ ಈ ವೃದ್ಧೆಯನ್ನು ನೋಡಿ ಲಸಿಕೆ ಪಡೆದಿದ್ದಾರೆ.

    ಉತ್ತರಪ್ರದೇಶದ ಕಸಗಂಜ್​ ಜಿಲ್ಲೆಯ ನಗ್ಲಾ ಕಧೇರಿ ಗ್ರಾಮದಲ್ಲಿ ಸರ್ಕಾರಿ ಅಧಿಕಾರಿಗಳು ಲಸಿಕೆ ಅಭಿಯಾನ ನಡೆಸಿದ್ದು, ವ್ಯಾಕ್ಸಿನ್​ ಹಾಕಿಸಲು ಬಂದಿದ್ದಾಗ ಅಲ್ಲಿನ ಜನರು ಭಯಭೀತರಾಗಿದ್ದರು. ಮಾತ್ರವಲ್ಲ, ಲಸಿಕೆ ಚುಚ್ಚುತ್ತಾರೆ ಎಂದು ಹೆದರಿದ ಊರಿನ ಜನರು ಓಡಿಹೋಗಿ ಅಡಗಿ ಕುಳಿತಿದ್ದರು.

    ಊರಿನವರೆಲ್ಲ ಹೀಗೆ ಲಸಿಕೆ ಪಡೆಯಲು ಹೆದರಿ ಓಡಿ ಹೋಗಿರುವಾಗ ಅದೇ ಊರಿನ ಆಧಾರ್ ಕುಮಾರಿ ಎಂಬ 96ರ ವೃದ್ಧೆ ಯಾವುದೇ ಅಂಜಿಕೆ ಇಲ್ಲದೆ ಲಸಿಕೆ ಪಡೆದಿದ್ದಾರೆ. ಲಸಿಕೆ ಪಡೆದ ನಂತರ ಈಕೆ ತನ್ನೂರಿನವರನ್ನು ಕರೆದು, ನೋಡಿ ಏನೂ ಆಗಲ್ಲ ಎಂದು ಮನವರಿಕೆ ಮಾಡಿಸಿದ್ದಾರೆ.

    ಇದನ್ನೂ ಓದಿ: ಕರೊನಾ ಮೂರನೇ ಅಲೆಯನ್ನು ತಡೆಯಬಹುದಂತೆ!; ಅದಕ್ಕಾಗಿ ಏನು ಮಾಡಬೇಕು? ಇಲ್ಲಿದೆ ಮಾಹಿತಿ…

    ಇದಾದ ಕೆಲವೇ ಗಂಟೆಗಳಲ್ಲಿ ಪವಾಡ ಎಂಬಂತೆ ಲಸಿಕೆ ಅಭಿಯಾನ ಯಶಸ್ಸು ಪಡೆದಿದೆ. ವಯೋವೃದ್ಧೆ ಆಧಾರ್ ಕುಮಾರಿ ಲಸಿಕೆ ಪಡೆದಿದ್ದರಿಂದ ಸ್ಫೂರ್ತಿ ಪಡೆದ ಊರಿನ ಜನರೆಲ್ಲ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಂದರು. ಕೆಲವೇ ಗಂಟೆಗಳಲ್ಲಿ ಊರಿನ 18 ವರ್ಷ ಮೇಲ್ಪಟ್ಟ ಎಲ್ಲ 176 ನಿವಾಸಿಗರು ಲಸಿಕೆ ಪಡೆದಿದ್ದಾರೆ.

    ಲಸಿಕೆ ಅಭಿಯಾನ ಯಶಸ್ವಿಯಾಗಲು ನೆರವಾದ ಆಧಾರ್ ಕುಮಾರಿ ಅವರಿಗೆ ತಹಸೀಲ್ದಾರ್​ ಅಜಯ್​ ಕುಮಾರ್, ಆರೋಗ್ಯ ಇಲಾಖೆ ಅಧಿಕಾರಿ ಸೊರೊನ್ ಮುಂತಾದವರು ಧನ್ಯವಾದ ತಿಳಿಸಿದ್ದಾರೆ. ನಾನು ವಿದ್ಯಾವಂತೆ ಅಲ್ಲ, ಆದರೆ ಲಸಿಕೆಯಿಂದ ಪ್ರಯೋಜನ ಇದೆ ಎಂಬುದು ತಿಳಿದಿದೆ. ಹೀಗಾಗಿ ಧೈರ್ಯವಾಗಿ ಲಸಿಕೆ ಪಡೆದು ಇತರರಿಗೆ ಉದಾಹರಣೆ ಆಗೋಣ ಎಂದುಕೊಂಡು ಮುಂದೆ ಬಂದೆ ಎಂದು ಆಧಾರ್ ಕುಮಾರಿ ಹೇಳಿಕೊಂಡಿದ್ದಾರೆ. ಈಕೆ ಈ ಊರಿನಲ್ಲಿ ಒಬ್ಬಂಟಿಯಾಗಿ ಜೀವಿಸುತ್ತಿದ್ದಾರೆ. (ಏಜೆನ್ಸೀಸ್)

    ಇದನ್ನೂ ಓದಿ: ‘ನಾಯಿಗೆ ರಕ್ತ ಬೇಕಾಗಿದೆ!’; ಅಪಘಾತಕ್ಕೀಡಾಗಿ ಮೂಳೆ ಮುರಿದ ಶ್ವಾನಕ್ಕೆ ನಡೆಯಲಿದೆ ಸರ್ಜರಿ..

    ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

    43 ಸಲ ಪಾಸಿಟಿವ್​, 7 ಬಾರಿ ಆಸ್ಪತ್ರೆಗೆ ದಾಖಲು; ಈತ ಜಗತ್ತಲ್ಲೇ ಅತಿ ಹೆಚ್ಚು ದಿನ ಕೋವಿಡ್​ನಿಂದ ಬಳಲಿದ ವ್ಯಕ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts