More

    ಆರಕ್ಷಕ ಪಡೆಗಳಿಗೆ 926 ಪದಕಗಳ ಘೋಷಣೆ: ಗರಿಷ್ಠ ಪದಕ ಜಮ್ಮು-ಕಾಶ್ಮೀರ ಪೊಲೀಸರಿಗೆ

    ನವದೆಹಲಿ: ಅಸೀಮ ಶೌರ್ಯ, ಸಾಹಸ ತೋರಿದ ಕೇಂದ್ರ ಮತ್ತು ರಾಜ್ಯದ ಪೊಲೀಸ್ ಸಿಬ್ಬಂದಿಗೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಶೌರ್ಯ, ವಿಶೇಷ ಸೇವೆ ಮತ್ತು ಶ್ರೇಷ್ಠ ಸೇವಾ ಪದಕಗಳನ್ನು ಒಳಗೊಂಡಂತೆ 926 ಪದಕಗಳನ್ನು ಘೋಷಿಸಲಾಗಿದೆ.

    ಇದರಲ್ಲಿ 81 ಪದಕಗಳನ್ನು ಜಮ್ಮು -ಕಾಶ್ಮೀರ ಪೊಲೀಸರು ಪಡೆದಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ. 55 ಪದಕಗಳ ಮೂಲಕ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್) ಎರಡನೇ ಸ್ಥಾನದಲ್ಲಿದೆ. 55 ಪದಕಗಳಲ್ಲಿ 41 ಪದಕಗಳನ್ನು ಕಾಶ್ಮೀರ ಕಣಿವೆಯಲ್ಲಿನ ಕಾರ್ಯಾಚರಣೆಗೆಳಿಗೆ ಸಂಬಂಧ ಪಟ್ಟಂತೆ ನೀಡಲಾಗಿದ್ದು, ಉಳಿದ 14 ಪದಕಗಳನ್ನು ಛತ್ತೀಸ್​ಗಢದಲ್ಲಿನ ಮಾವೋವಾದಿಗಳ ವಿರುದ್ಧ ನಡೆಸಿದ ಕಾರ್ಯಾಚರಣೆಗಳಿಗಾಗಿ ಘೊಷಿಸಲಾಗಿದೆ.

    ಇದನ್ನೂ ಓದಿ: ಕರೊನಾ ಮುಂಜಾಗ್ರತೆ ನಡುವೆ ಸ್ವಾತಂತ್ರ್ಯ ಸಂಭ್ರಮ: ಸೀಮಿತ ಸಂಖ್ಯೆಯ ಗಣ್ಯರಿಗೆ ಆಹ್ವಾನ

    ಇಬ್ಬರಿಗೆ ಶೌರ್ಯ ಪದಕ: 2008ರಲ್ಲಿ ನಡೆದ ಬಟ್ಲಾ ಹೌಸ್ ಎನ್​ಕೌಂಟರ್​ನಲ್ಲಿ ಮೃತರಾದ ದೆಹಲಿ ಪೊಲೀಸ್ ಇನ್ಸ್​ಪೆಕ್ಟರ್ ಮೋಹನಚಂದ್ ಶರ್ವಗೆ ಸತತ 7ನೇ ಬಾರಿ ಮರಣೋತ್ತರವಾಗಿ ಶೌರ್ಯ ಪದಕ ನೀಡಲಾಗುತ್ತಿದೆ.

    ಸಿಆರ್​ಪಿಎಫ್​ನ ಸಹಾಯಕ ಕಮಾಂಡೆಂಟ್ ನರೇಶ್ ಕುಮಾರ್ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ತೋರಿದ ಸಾಹಸಕ್ಕಾಗಿ ಏಳನೇ ಬಾರಿ ಶೌರ್ಯ ಪದಕ ಘೋಷಣೆಯಾಗಿದೆ. ಉತ್ತರ ಪ್ರದೇಶ ಪೊಲೀಸರಿಗೆ 23 ಪದಕಗಳನ್ನು ನೀಡಲಾಗಿದ್ದು, ದೆಹಲಿ ಪೊಲೀಸರಿಗೆ 16, ಮಹಾರಾಷ್ಟ್ರಕ್ಕೆ 14 ಮತ್ತು ಜಾರ್ಖಂಡ್​ಗೆ 12 ಪದಕಗಳು ಘೋಷಣೆಯಾಗಿದೆ. (ಏಜೆನ್ಸೀಸ್)

    ಆರ್‌ಟಿಪಿಸಿಆರ್ ಪರೀಕ್ಷೆ ದರ ಕಡಿತ: ಕೋವಿಡ್ ಕಾರ್ಯಪಡೆ ಸಭೆ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts