More

    75 ವರ್ಷದ ಬಳಿಕ ಪಾಕಿಸ್ತಾನದಲ್ಲಿರುವ ಪೂರ್ವಜರ ಮನೆಗೆ ಭೇಟಿ ನೀಡಿದ 92ವರ್ಷದ ವೃದ್ಧೆ!

    ಇಸ್ಲಮಾಬಾದ್​: ಭಾರತದಲ್ಲೇ ನೆಲೆಸಿರುವ ವೃದ್ಧೆ ತಮ್ಮ ಇಳಿ ವಯಸ್ಸಿನಲ್ಲಿ ಪೂರ್ವಜನರ ಮನೆಗೆ ಭೇಟಿ ನೀಡಬೇಕೆಂಬ ಆಕೆಯ ಆಸೆ ಕೊನೆಗೂ ಈಡೇರಿದೆ. 92 ವರ್ಷದ ವೃದ್ಧೆ, ಬರೋಬ್ಬರಿ 75ವರ್ಷದ ಬಳಿಕ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿರುವುದು ಭಾರೀ ಕುತೂಹಲ ಮೂಡಿಸಿದೆ.

    ರೀನಾ ಚಿಬರ್​ ಎಂಬ 92 ವರ್ಷದ ವೃದ್ಧೆಗೆ ಪಾಕಿಸ್ತಾನದ ಹೈಕಮಿಷನ್​ನಿಂದ ವೀಸಾ ಅನುಮತಿ ನೀಡಿದೆ. ಆಕೆಯ ಪೂರ್ವಜರ ಮನೆಗೆ ಭೇಟಿ ನೀಡಲು ಅನುಮತಿ ಕೋರಿದ್ದಕ್ಕಾಗಿ ಸಮ್ಮತಿ ಸೂಚಿಸಿದ್ದೇವೆ ಎಂದು ಪಾಕ್​ ಅಧಿಕಾರಿಗಳು ತಿಳಿಸಿದ್ದಾರೆ.

    ಮೂರು ತಿಂಗಳುಗಳ ಕಾಲ ವೀಸಾ ಅನುಮತಿ ನೀಡಲಾಗಿದ್ದು, ಅಲ್ಲಿಯವರೆಗೆ ಆಕೆ ಅಲ್ಲೇ ಇರಬಹುದು. ಅನುಮತಿ ಸಿಕ್ಕ ಬೆನ್ನಲ್ಲೇ ಶನಿವಾರವೇ ವೃದ್ಧೆ ವಾಘಾ-ಅಟ್ಟಾರಿ ಗಡಿಯ ಮೂಲಕ ಪಾಕಿಸ್ತಾನಕ್ಕೆ ಹೋಗುತ್ತಿರುವ ವೇಳೆ ತೆಗೆಸಿದ ಫೋಟೋಗೆ  ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಈ ಫೋಟೋ ವೈರಲ್​ ಆಗುತ್ತಿದೆ.

    ಸದ್ಯ ವೃದ್ಧೆಯ ಪೂರ್ವಜರ ಮನೆ ಇರುವುದು ರಾವಲ್ಪಿಂಡಿಯ ಪ್ರೇಮ್​ ನಿವಾಸ್​ ಎಂಬಲ್ಲಿ, ತಮಗೆ ವೀಸಾ ಅನುಮತಿಗೆ ಸಹಕರಿಸಿದ ಭಾರತ ಹಾಗೂ ಪಾಕ್​ ಅಧಿಕಾರಿಗಳಿಗೆ ಅಭಿನಂದನೆಗಳು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಭಾರತ ವಿಭಜನೆ ವೇಳೆ ನಮ್ಮ ಕುಟುಂಬ ಇಬ್ಭಾಗವಾಯಿತು. ಆಗ ನಾನು 15 ವರ್ಷದವಳಾಗಿದ್ದೆ, ಆ ಸಮಯದಲ್ಲಿ ನಮ್ಮ ಮನೆಯಲ್ಲಿ ಹಿಂದೂ-ಮುಸ್ಲಿಂ ಸ್ನೇಹಿತರೆಲ್ಲರೂ ಬರುತ್ತಿದ್ದರು. ತುಂಬಾ ಒಳ್ಳೆಯ ವಾತಾವರಣವಾಗಿತ್ತು ಎಂದಿರುವ ಅವರು, ಆಗ ಕಂಡಿದ್ದ ನಮ್ಮ ಮನೆಗೆ ಈಗ ಭೇಟಿ ನೀಡುತ್ತಿರುವುದಕ್ಕೆ ಭಾರೀ ಉತ್ಸುಕಳಾಗಿದ್ದೇನೆ ಎಂದು ರೀನಾ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    VIDEO: ಇಲ್ಲಿದೆ ಚೆಸ್​​​ ಬೋರ್ಡ್​​ನಂತೆ ಚಿತ್ರಿಸಲಾದ ಆಕರ್ಷಕ ಸೇತುವೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts