More

    ಬಂದರು ಅಭಿವೃದ್ಧಿ ಕಾಮಗಾರಿಗೆ ಚಾಲನೆ

    ಗೋಕರ್ಣ: ಅಭಿವೃದ್ಧಿ ಹಂತದಲ್ಲಿರುವ ತದಡಿ ಬಂದರಿನಲ್ಲಿ ಅನೇಕ ಕೆಲಸಗಳು ಆಗಬೇಕಿದೆ. ಅವುಗಳಲ್ಲಿ ಒಂದೊಂದಾಗಿ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

    ಬಂದರಿನಲ್ಲಿ ನಿರ್ವಿುಸಲಾಗುವ ನೂತನ ಶೌಚಗೃಹ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿದ ಬಳಿಕ ಮೀನುಗಾರಿಕೆ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಈಗಾಗಲೇ ಒಂದೂವರೆ ಕೋ.ರೂ. ವೆಚ್ಚದಲ್ಲಿ ಬಂದರಿನ ಪ್ರಾಂಗಣ ನವೀಕರಣ ಮತ್ತು ಹೈಮಾಸ್ಟ್ ದೀಪ ಅಳವಡಿಸುವ ಕಾರ್ಯ ಆಗಿದೆ. ಶೌಚಗೃಹದ ಜತೆಗೆ ಬಂದರು ಧಕ್ಕೆಯಲ್ಲಿ 35 ಲಕ್ಷ ರೂ. ವೆಚ್ಚದಲ್ಲಿ ಬಲೆ ದುರಸ್ತಿಗೆ ವ್ಯವಸ್ಥೆ, ಬಂದರಿಗೆ ಅತಿ ಅಗತ್ಯವಿರುವ ಮೀನು ಒಣಗಿಸುವ ಪ್ರಾಂಗಣ ನಿರ್ಮಾಣ ಕುರಿತು 45 ಲಕ್ಷ ರೂ. ವೆಚ್ಚದ ಯೋಜನೆ ಸಿದ್ಧವಾಗಿದ್ದು, ಆದಷ್ಟು ಬೇಗ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

    ಸುಸಜ್ಜಿತ ಮೀನು ಮಾರುಕಟ್ಟೆ ನಿರ್ವಣದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಬೇಡಿಕೆ ಸಲ್ಲಿಸಲಾಗಿದೆ. ಮೀನುಗಾರಿಕೆ ಇಲಾಖೆ ಈ ಕುರಿತು ಪ್ರಯತ್ನಿಸಿದೆ. ಆದಷ್ಟು ಬೇಗ ಕಾಮಗಾರಿ ಮಂಜೂರಾತಿಗೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

    ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಸಂತ ಹೆಗಡೆ, ಬಂದರು ಅಧಿಕಾರಿ ರಾಮದಾಸ ಆಚಾರಿ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಲಿಂಗೇಶ್, ತಾಪಂ ಸದಸ್ಯ ಮಹೇಶ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ರಮೇಶ ಪ್ರಸಾದ, ಶೇಖರ ನಾಯ್ಕ, ರಾಮು ಕೆಂಚನ್, ಉಮಾಕಾಂತ ಹೊಸ್ಕಟ್ಟ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts