More

    ಒಂದೇ ಕುಟುಂಬದ 9 ಮಂದಿ ರಕ್ತದಾನ

    ಹೊಸನಗರ: ತಾಲೂಕಿನ ಮೂಡುಗೊಪ್ಪ ಗ್ರಾಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಒಂದೇ ಕುಟುಂಬ ಒಂಬತ್ತು ಮಂದಿ ರಕ್ತದಾನ ಮಾಡುವ ಮೂಲಕ ಗಮನಸೆಳೆದರು.

    ನಗರ ಪೊಲೀಸ್ ಠಾಣೆ, ಮೂಡುಗೊಪ್ಪ ಗ್ರಾಪಂ, ಮೆಗ್ಗಾನ್ ರಕ್ತನಿಧಿ ಕೇಂದ್ರ, ನಗರದ ಸಂಯುಕ್ತ ಚಿಕಿತ್ಸಾಲಯ ನೀರುಗಂಟಿ ತುಕಾರಾಮ ಸ್ಮರಣಾರ್ಥ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ 120 ಯೂನಿಟ್ ರಕ್ತ ಸಂಗ್ರಹಿಸಲಾಗಿದ್ದು ಹೊಸನಗರ ತಾಲೂಕಿನಲ್ಲಿ ಈವರೆಗಿನ ಗರಿಷ್ಠ ಸಾಧನೆಯಾಗಿದೆ.
    ಶಿಬಿರದಲ್ಲಿ ನಗರ ಗದ್ದೆಮನೆ ನಿವಾಸಿ ಮೊಯ್ದೀನ್ ಸಾಬ್ ಕುಟುಂಬದ ಒಂಬತ್ತು ಮಂದಿ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು. ಕುಟುಂಬಕ್ಕೆ ಅಭಿನಂದನ ಪತ್ರ ನೀಡಿ ಗೌರವಿಸಲಾಯಿತು. ಕುಂದಾಪುರದಿಂದ ಬಂದಿದ್ದ ಇಬ್ಬರು ಪ್ರವಾಸಿಗರೂ ರಕ್ತದಾನ ಮಾಡಿ ಜಾಗೃತಿ ಮೂಡಿಸಿದರು.
    ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಗ್ರಾಪಂ ಅಧ್ಯಕ್ಷ ಕರುಣಾಕರ ಶೆಟ್ಟಿ, ಸಂಘಟಿತವಾಗಿ ಕಾರ್ಯಕ್ರಮ ಮಾಡಿದರೆ ಯಶಸ್ಸು ಖಂಡಿತ ಎಂಬುದಕ್ಕೆ ಇಂದಿನ ಶಿಬಿರವೇ ಸಾಕ್ಷಿ ಎಂದರು. ತಾಲೂಕಿನಲ್ಲಿ ದಾಖಲೆ ಎನ್ನುವ ರೀತಿಯಲ್ಲಿ ರಕ್ತದಾನ ಮಾಡಿ ಸಹಕರಿಸಿದ ನಾಗರಿಕರಿಗೆ, ಎಲ್ಲ ಸಂಘ-ಸಂಸ್ಥೆಗಳಿಗೆ ಪಿಎಸ್‌ಐ ಟಿ.ಎಂ.ನಾಗರಾಜ್ ಕೃತಜ್ಞತೆ ಸಲ್ಲಿಸಿದರು.
    ಡಾ. ದೃಶ್ಯ, ಡಾ. ಚೈತನ್ಯ, ಡಾ. ಮುರಳೀಧರ್, ಆಪ್ತಸಮಾಲೋಚಕ ಎಸ್.ಎಚ್.ಹನುಮಂತಪ್ಪ, ಗ್ರಾಪಂ ಸದಸ್ಯರಾದ ವಿಶ್ವನಾಥ್ ಎಂ.ಪವನಕುಮಾರ್, ಅಂಡಗದೋದೂರು ಗ್ರಾಪಂ ಅಧ್ಯಕ್ಷ ಆದರ್ಶ ಹೆರಟೆ, ಪ್ರಮುಖರಾದ ಹಲಸಿನಹಳ್ಳಿ ರಮೇಶ್, ಸತೀಶ ಪಟೇಲ್, ನಿತಿನ್ ನಗರ, ಅಬೂಬಕರ್, ಎಸ್.ಕೆ.ನವೀನ್, ಪಿಡಿಒ ರಾಮಚಂದ್ರ, ಸಹಾಯಕ ಅಣ್ಣಪ್ಪ, ಆರೋಗ್ಯ ಸಿಬ್ಬಂದಿ ಅಶ್ವಿನಿ, ಉಮಾ, ಗೌತಮಿ, ಪೊಲೀಸ್ ಸಿಬ್ಬಂದಿ ಹೊಸನಗರ ಹಾಲೇಶ್, ಶ್ರೀಪಾದ್, ವೆಂಕಟೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts