More

    ಫೆ.1ರಿಂದ ಹಳೇಬೀಡಲ್ಲಿ ತರಳಬಾಳು ಹುಣ್ಣಿಮೆ

    ಚಿಕ್ಕಮಗಳೂರು: ಸಿರಿಗೆರೆ ಬೃಹನ್ಮಠದ ತರಳಬಾಳು ಹುಣ್ಣಿಮೆ ಮಹೋತ್ಸವ ಬೇಲೂರು ತಾಲೂಕು ಹಳೇಬೀಡಿನಲ್ಲಿ ಫೆ.1ರಿಂದ 9ರ ವರೆಗೆ ನಡೆಯಲಿದೆ. ಹಳೇಬೀಡಿನ ಹೊರ ಭಾಗದಲ್ಲಿ ಸುಮಾರು 120 ಎಕರೆ ಪ್ರದೇಶದಲ್ಲಿ ನಿರ್ವಿುಸಿರುವ ಹೊಯ್ಸಳೇಶ್ವರ ಮಹಾಮಂಟಪದಲ್ಲಿ ಸಾಂಸ್ಕೃತಿಕ ಮಹೋತ್ಸವ ನಡೆಯಲಿದೆ

    ತರಳಬಾಳು ಬೃಹನ್ಮಠದ ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಾಂಸ್ಕೃತಿಕ ಮಹೋತ್ಸವ ನಡೆಯಲಿದೆ. ಇದು ಕೇವಲ ಉತ್ಸವವಾಗದೆ ನೆಲ, ಜಲ, ಧರ್ಮ, ಸಾಹಿತ್ಯ, ಕಲೆ, ಸಂಸ್ಕೃತಿಗಳ ಸಂಗಮವೂ ಆಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಕೆ.ಎಸ್. ಲಿಂಗೇಶ್ ತಿಳಿಸಿದರು.

    ಫೆ.1ರಂದು ಸಂಜೆ 6.30ರ ಆದಿಚುಂಚನಗಿರಿ ಜಗದ್ಗುರು ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರವಣಬೆಳಗೊಳ ಸ್ವಸ್ತಿಶ್ರಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಚಿವರಾದ ಸಚಿವ ಆರ್.ಅಶೋಕ್, ಲಕ್ಷ್ಮಣ್ ಸವದಿ, ಉಪ ಸಭಾಪತಿ ಎಸ್.ಎಲ್.ಧಮೇಗೌಡ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ, ಶಾಸಕ ಎಚ್.ಕೆ.ಕುಮಾರಸ್ವಾಮಿ, ಸಾರಿಗೆ ಆಯುಕ್ತ ಎನ್.ಶಿವಕುಮಾರ್ ಭಾಗವಹಿಸುವರು. ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಅಶೋಕ ಹಾರನಹಳ್ಳಿ, ಸಿ.ಎಂ.ಇಬ್ರಾಹಿಂ, ಚಂದ್ರಶೇಖರ ಕಗ್ಗಲ ಗೌಡರು ಉಪನ್ಯಾಸ ನೀಡುವರು ಎಂದು ಮಾಹಿತಿ ನೀಡಿದರು.

    ಫೆ.2ರಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ, ಶ್ರೀ ಗುಣನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್, ಸಚಿವ ಕೆ.ಎಸ್.ಈಶ್ವರಪ್ಪ, ಸಂಸದರಾದ ಶೋಭಾ ಕರಂದ್ಲಾಜೆ, ಪ್ರಜ್ವಲ್ ರೇವಣ್ಣ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಭಾಗವಹಿಸುವರು. ಮಣಿಪುರ ಕೃಷಿ ವಿವಿ ಕುಲಪತಿ ಡಾ. ಎಸ್.ಅಯ್ಯಪ್ಪನ್, ಬೆಳಗಾವಿ ತಾಂತ್ರಿಕ ವಿವಿ ಕುಲಪತಿ ಡಾ. ಕರಿಸಿದ್ದಪ್ಪ, ಡಾ. ನಾ. ಸೋಮಶೇಖರ್, ಡಾ. ಜಿ.ಸುನಿಲ್, ನಾಗಶ್ರೀ ತ್ಯಾಗರಾಜ್ ಉಪನ್ಯಾಸ ನೀಡುವರು.

    ಫೆ.3ರಂದು ಸಂಜೆ 6.30ಕ್ಕೆ ಹಳೇಬೀಡು ಪುಷ್ಪಗಿರಿ ಮಠದ ಶ್ರೀ ಡಾ. ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಂಭುನಾಥ ಸ್ವಾಮೀಜಿ, ಅರಕಲಗೋಡಿನ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡುವರು. ಸಚಿವ ಸಿ.ಟಿ.ರವಿ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ, ಕೆ.ಎನ್.ಷಡಾಕ್ಷರಿ ಭಾಗವಹಿಸಲಿದ್ದಾರೆ. ಡಾ. ಬಿ.ವಿ. ವಸಂತಕುಮಾರ್, ಡಾ. ಬಿ.ಎಸ್. ಪ್ರಸಾದ್, ಪ್ರಗತಿಪರ ಕೃಷಿಕರಾದ ಕವಿತಾ ಮಿಶ್ರಾ ಉಪನ್ಯಾಸ ನೀಡುವರು ಎಂದರು.

    ಫೆ.4ರಂದು ಸಂಜೆ 6.30ಕ್ಕೆ ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಯಳನಾಡು ಮಠದ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡುವರು. ಸಚಿವ ವಿ.ಸೋಮಣ್ಣ, ಎಸ್ಪಿ ರವಿ ಡಿ. ಚನ್ನಣ್ಣನವರ್, ದಾವಣಗೆರೆ ವಿವಿ ಕುಲಪತಿ ಡಾ. ಶರಣಪ್ಪ ಹಲಸೆ, ಜಯಪ್ರಕಾಶ್ ಭಾಗವಹಿಸುವರು. ಡಾ. ಹಂಪ ನಾಗರಾಜಯ್ಯ, ಶಂಭು ವಿ. ಬಳಿಗಾರ್, ಡಾ. ಕೆ.ಎಸ್. ಸೋಮಶೇಖರ್, ಡಾ. ಶ್ರೀವತ್ಸ ಎಸ್. ವಟಿ ಉಪನ್ಯಾಸ ನೀಡುವರು ಎಂದು ವಿವರಿಸಿದರು.

    ಫೆ.5ರಂದು ಸಂಜೆ 6.30ಕ್ಕೆ ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀ ನಿರಂಜನ ಜಗದ್ಗುರು ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ, ಹಾಸನದ ಸಂತ ರೊನಾಲ್ಡ್ ಕಡೋಜಾ ಆಶೀರ್ವಚನ ನೀಡುವರು. ಸಚಿವ ಸಿ.ಸಿ.ಪಾಟೀಲ್, ಮೃತ್ಯುಂಜಯಸ್ವಾಮಿ, ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ಎಚ್.ಆಂಜನೇಯ, ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್, , ಜಿಲ್ಲಾಧಿಕಾರಿ ಆರ್.ಗಿರೀಶ್ ಭಾಗವಹಿಸುವರು. ಇಸ್ರೋ ವಿಜ್ಞಾನಿ ಡಾ. ಎ.ಎಸ್.ಕಿರಣ್​ಕುಮಾರ್, ಶ್ರೀನಿವಾಸ ಉಡುಪ, ಇಂದುಮತಿ ಸಾಲಿಮಠ, ಹೃದ್ರೋಗ ತಜ್ಞ ಡಾ. ಸಿ.ಎನ್.ಮಂಜುನಾಥ್, ಡಾ. ಎಂ. ಬಸಂತ್ ಉಪನ್ಯಾಸ ನೀಡುವರು .

    ಫೆ.6ರಂದು ಸಂಜೆ 6.30ಕ್ಕೆ ಶಿವಮೊಗ್ಗ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಹಾಸನದ ಮೌಲಾನ ಮಹಮದ್ ಅನ್ವರ್ ಅಸಾದಿ ಆಶೀರ್ವಚನ ನೀಡುವರು. ಸಚಿವರಾದ ಜೆ.ಸಿ.ಮಾಧುಸ್ವಾಮಿ, ಶ್ರೀರಾಮಲು, ಶಶಿಕಲಾ ಜೊಲ್ಲೆ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಭಾಗವಹಿಸುವರು. ಡಾ. ಗುರುರಾಜ ಕರ್ಜಗಿ, ಮಹೇಶ್ ಜೋಷಿ, ಮಹೇಶ್ ಚಟ್ನಹಳ್ಳಿ, ಅರುಣ್​ಕುಮಾರ್ ಉಪನ್ಯಾಸ ನೀಡುವರು ಎಂದರು.

    ಫೆ.7ರಂದು ಸಂಜೆ 6.30ಕ್ಕೆ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ, ಚಿತ್ರದುರ್ಗ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಸಚಿವ ಜಗದೀಶ್ ಶೆಟ್ಟರ್, ಕುವೆಂಪು ವಿವಿ ಕುಲಪತಿ ಡಾ. ಬಿ.ಪಿ. ವೀರಭದ್ರಪ್ಪ, ನೀರಾವರಿ ಸಚಿವ ಲಕ್ಷ್ಮಣರಾವ್ ಪೇಶ್ವೆ, ವಿಧಾನಪರಿಷತ್ ಸದಸ್ಯ ಬೋಜೇಗೌಡ ಭಾಗವಹಿಸುವರು. ಆರ್.ಟಿ.ಮಜ್ಜಗಿ, ಡಾ. ಸಿ.ಸೋಮಶೇಖರ್, ಡಾ. ಟಿ.ಕೆ.ಅನುರಾಧಾ, ಡಾ. ಸೋಮಶೇಖರ್ ಆಶೀರ್ವಚನ ನೀಡುವರು.

    ಫೆ.8ರಂದು ಸಂಜೆ 6.30ಕ್ಕೆ ಕಾಗಿನಲೆ ಪೀಠದ ಶ್ರೀ ನಿರಂಜನಾಂದಪುರಿ ಸ್ವಾಮೀಜಿ, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಬೇಲಿಮಠದ ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ ಆಶೀರ್ವಚನ ನೀಡುವರು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಡಿಸಿಎಂ ಗೋವಿಂದ ಕಾರಜೋಳ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ್, ಸಂಸದ ತೇಜಸ್ವಿ ಸೂರ್ಯ, ಮಾಜಿ ಸಚಿವ ಶಿವರಾಂ ಭಾಗವಹಿಸುವರು. ಹಿರೇಮಗಳೂರು ಕಣ್ಣನ್, ನಟ ದೊಡ್ಡಣ್ಣ, ಡಾ. ಶರಣ್ ಪಾಟೀಲ್, ಎಸ್. ಷಡಾಕ್ಷರಿ ಉಪನ್ಯಾಸ ನೀಡುವರು.

    ಫೆ. 9ಕ್ಕೆ ಸಿಂಹಾಸನಾರೋಹಣ: ಫೆ.9ರಂದು ಸಂಜೆ 6.30ಕ್ಕೆ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸದ್ಧರ್ಮ ಸಿಂಹಾಸನಾರೋಹಣ ಮಾಡುವರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಬಿ.ಸಿ.ಪಾಟೀಲ್, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಭಾಗವಹಿಸುವರು. ಡಾ. ಬಿ.ಎಲ್.ಶಂಕರ್, ಪ್ರೊ. ಎಂ.ಕೃಷ್ಣೇಗೌಡ ಉಪನ್ಯಾಸ ನೀಡುವರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

    ದ್ವಾರಸಮುದ್ರದತ್ತ ನಮ್ಮ ನಡಿಗೆ: ಕಳೆದ ವರ್ಷ ಬರಗಾಲದ ಕಾರಣ ತರಳಬಾಳು ಹುಣ್ಣಿಮೆ ಮಹೋತ್ಸವ ರದ್ದುಗೊಳಿಸಲಾಗಿತ್ತು. ಹಳೇಬೀಡು ದ್ವಾರಸಮುದ್ರದ ಕೆರೆಗೆ ನೀರು ಬಂದ ನಂತರವೇ ಹುಣ್ಣಿಮೆ ಆಚರಣೆ ನಿರ್ಧಾರ ಮಾಡಲಾಗಿದ್ದು, ಈಗ ಕೆರೆ ತುಂಬಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು. ಫೆ.8ರಂದು ಬೆಳಗ್ಗೆ 10ಕ್ಕೆ ಹಳೇಬೀಡಿನಿಂದ ದ್ವಾರಸಮುದ್ರದ ಕೆರೆವರೆಗೆ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕೆರೆ ತುಂಬಿಸುವ ರಣಘಟ್ಟ ನೀರಾವರಿ ಯೋಜನೆಗೆ ಸರ್ಕಾರದ ಮೇಲೆ ಸಿರಿಗೆರೆ ಜಗದ್ಗುರುಗಳು ಒತ್ತಡ ತಂದು ಮಂಜೂರಾತಿ ಕೊಡಿಸಿದ್ದಾರೆ ಎಂದು ಹೇಳಿದರು.

    ಸ್ವಾಗತ ಸಮಿತಿ ಕಾರ್ಯದರ್ಶಿ ರೇಣುಕುಮಾರ್, ಜಿಪಂ ಮಾಜಿ ಸದಸ್ಯ ಎಂ.ಎಸ್.ನಿರಂಜನ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ಡಿ. ತಮ್ಮಯ್ಯ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts