More

    ಗ್ರಾಮ ಪಂಚಾಯಿತಿ ಚುನಾವಣೆಗೆ 80 ಸಾವಿರ ಪೊಲೀಸರ ಕಾವಲು

    ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಶಾಂತಿಯುತವಾಗಿ ನಡೆಸಲು 80 ಸಾವಿರ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಪೊಲೀಸ್ ಇಲಾಖೆ ನಿಯೋಜನೆ ಮಾಡಿದೆ.ಡಿ.22ಕ್ಕೆ ಮೊದಲ ಹಂತದ ಮತದಾನಕ್ಕೆ 10,969 ಹೋಂ ಗಾರ್ಡ್, 5369 ಕಾನ್‌ಸ್ಟೇಬಲ್ ನಿಯೋಜಿಸಲಾಗಿದೆ. ಜತೆಗೆ 1746 ಗಸ್ತು ತಂಡಗಳನ್ನು ನೇಮಿಸಿದ್ದು, ಇದರಲ್ಲಿ ಎಎಸ್‌ಐ, ಪಿಎಸ್‌ಐ, ಇನ್‌ಸ್ಪೆಕ್ಟರ್‌ಗಳು, ಡಿವೈಎಸ್‌ಪಿಗಳು ಇರುತ್ತಾರೆ. 1044 ಹೆಚ್ಚುವರಿ ಗಸ್ತು ವಾಹನಗಳು ಹಾಗೂ 111 ಕೆಎಸ್‌ಆರ್‌ಪಿ, ಡಿಎಆರ್ ತುಕಡಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಡಿ.27ಕ್ಕೆ ನಡೆಯುವ 2ನೇ ಹಂತದ ಮತದಾನಕ್ಕೆ 9083 ಹೋಂ ಗಾರ್ಡ್, 5246 ಪೇದೆಗಳು, 1540 ಗಸ್ತು ತಂಡಗಳು, 97 ಕೆಎಸ್‌ಆರ್‌ಪಿ, ಡಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ. ರಾಜ್ಯ ಚುನಾವಣಾ ಆಯೋಗದ ಆಶಯದಂತೆ ಶಾಂತಿಯುತ ಮತದಾನಕ್ಕೆ ಅನುವು ಮಾಡಿಕೊಡಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಕೋವಿಡ್-19ರ ಮುಂಜಾಗೃತ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತದೆ ಎಂದು ರಾಜ್ಯ ಪೊಲೀಸ್ ಇಲಾಖೆ ತಿಳಿಸಿದೆ.

    ಜಗಳ ಮಾಡುವಾಗ ಮೆದುಳಿನಿಂದ ಶಬ್ದ ಬರುತ್ತಿದ್ದು, ಭಯವಾಗುತ್ತಿದೆ; ಪರಿಹಾರ ಏನು?

    ದುಬೈನಲ್ಲಿ ಕೆಲಸ ಕಳೆದುಕೊಂಡ ಭಾರತೀಯ ರಾತ್ರೋರಾತ್ರಿ ಕೋಟ್ಯಧಿಪತಿಯಾದ! ಅದೃಷ್ಟವೆಂದರೆ ಇದೇ ನೋಡಿ

    ಹೆದ್ದಾರಿಯಲ್ಲೇ ಅಡ್ಡಗಟ್ಟಿದರು.. ಗನ್​ ತೋರಿಸಿ ಬೆದರಿಸಿ ಕಾರನ್ನೇ ಕೊಂಡೊಯ್ದರು..!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts