More

    ಕರೊನಾ ಸೋಂಕಿತರ ಪೈಕಿ ಶೇ.80 ಜನರಲ್ಲಿ ಆರಂಭಿಕ ಲಕ್ಷಣಗಳು: ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿಕೆ

    ನವದೆಹಲಿ: ರಾಷ್ಟ್ರಾದ್ಯಂತ ದಿನೇದಿನೆ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ಅದು 8 ಸಾವಿರ ದಾಟಿದ್ದು, ಶೀಘ್ರದಲ್ಲೇ 10 ಸಾವಿರ ತಲುಪುವ ಲಕ್ಷಣಗಳು ಗೋಚರಿಸುತ್ತಿವೆ.

    ಹೀಗಿದ್ದೂ, ದೇಶದ ಒಟ್ಟಾರೆ ಕರೊನಾ ಸೋಂಕಿತರ ಪೈಕಿ ಶೇ.80 ಜನರಲ್ಲಿ ಸೋಂಕು ಆರಂಭಿಕ ಲಕ್ಷಣಗಳು ಇರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

    ಸೋಂಕಿನ ಆರಂಭಿಕ ಲಕ್ಷಣಗಳು ಇರುವವರಿಗೆ ಉಸಿರಾಟದ ವ್ಯವಸ್ಥೆ ಇರುವ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಸ್ಥಿತಿಯಲ್ಲಿ ಇರುವವರನ್ನು ಮಾತ್ರ ನಿರ್ದಿಷ್ಟ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅದು ವಿವರಿಸಿದೆ.

    ಮಾರ್ಚ್​ 29ರಂದು ದೇಶದಲ್ಲಿ 979 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಇದೀಗ ಈ ಸಂಖ್ಯೆ 8,356ಕ್ಕೆ ಏರಿಕೆಯಾಗಿದೆ. ಇವರಲ್ಲಿ ಶೇ.20 ಜನರಿಗೆ ಮಾತ್ರ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಯ ಅವಶ್ಯಕತೆ ಇದೆ. ಇದರರ್ಥದಲ್ಲಿ ಭಾನುವಾರದ ವೇಳೆಗೆ 1,671 ಜನರು ಮಾತ್ರ ಆಕ್ಸಿಜನ್​ ಸೌಲಭ್ಯದೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನು ಗಮನಿಸಿದಾಗ ಸೋಂಕಿತ ಸಂಖ್ಯೆ ಹೆಚ್ಚಾದರೂ ಅವರೆಲ್ಲರಿಗೂ ಸಮರ್ಪಕ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಸರ್ಕಾರ ಮಾಡಿಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್​ವಾಲ್​ ತಿಳಿಸಿದ್ದಾರೆ.

    ಸದ್ಯ ಭಾರತದಾದ್ಯಂತ 601 ಕೋವಿಡ್​ 19 ಆಸ್ಪತ್ರೆಗಳಲ್ಲಿ 1.05 ಲಕ್ಷ ಹಾಸಿಗೆಗಳ ಸೌಲಭ್ಯವಿದೆ. ಏಪ್ರಿಲ್​ 9ರ ಮಾಹಿತಿ ಪ್ರಕಾರ ನಮಗೆ 1,100 ಹಾಸಿಗೆಗಳು ಬಳಕೆಯಾಗುತ್ತಿದ್ದರೂ, ಹೆಚ್ಚುವರಿಯಾಗಿ 85 ಸಾವಿರ ಹಾಸಿಗೆಗಳು ಸಿದ್ಧವಾಗಿದ್ದವು. ಇದೀಗ 1,671 ಹಾಸಿಗೆಗಳು ಬಳಕೆಯಾಗುತ್ತಿರುವಾಗ ಹೆಚ್ಚುವರಿಯಾಗಿ 1.05 ಲಕ್ಷ ಹಾಸಿಗೆಗಳು ಸಿದ್ಧವಾಗಿವೆ ಎಂದು ಮಾಹಿತಿ ನೀಡಿದರು.

    ಕಿಡಿಗೇಡಿಗಳಿಗೆ ಹುಡುಗಾಟ, ಜನರಿಗೆ ಪ್ರಾಣಸಂಕಟ; ಕೋವಿಡ್​ ವೈರಾಣು ಹೊತ್ತು ತಂದಿರುವೆ ಎಂಬ ಸಂದೇಶದ ನೋಟುಗಳು ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts