More

    ನೇಪಾಳದ ಹೋಟೆಲ್​ನಲ್ಲಿ ಶವವಾಗಿ ಪತ್ತೆಯಾಗಿದ್ದ 8 ಕೇರಳ ಪ್ರವಾಸಿಗರ ಸಾವಿಗೆ ಕಾರಣವೇನು?: ಕುಟುಂಬದವರಿಗೆ ಮೃತದೇಹ ಹಸ್ತಾಂತರ

    ಕಾಠ್ಮಂಡು: ನೇಪಾಳದ ಹೋಟೆಲ್​ವೊಂದರಲ್ಲಿ ಕೇರಳ ಮೂಲದ 8 ಪ್ರವಾಸಿಗರು ಶವವಾಗಿ ಪತ್ತೆಯಾಗಿರುವ ಘಟನೆ ಮಂಗಳವಾರ ನಡೆದಿದೆ.

    ರೂಮಿನೊಳಗೆ ಇಡಲಾಗಿದ್ದ ಔಟ್​ಡೋರ್​ ಹೀಟರ್​ನ ವಿಷಕಾರಿ ಕಾರ್ಬನ್​ ಮಾನಾಕ್ಸೈಡ್​ ಪರಿಣಾಮದಿಂದ ದುರ್ಘಟನೆ ಸಂಭವಿಸಿರಬಹುದೆಂದು ಮೇಲ್ನೋಟಕ್ಕೆ ಕಂಡುಬಂದಿದೆ.

    ಕಾಠ್ಮಂಡುವಿನಲ್ಲಿರುವ ರೆಸಾರ್ಟ್​ವೊಂದರಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಪ್ರವಾಸೋದ್ಯಮ ಇಲಾಖೆಯು ಮಂಗಳವಾರ ಸಮಿತಿಯೊಂದನ್ನು ರಚನೆ ಮಾಡಿ ತನಿಖೆಗೆ ಸೂಚನೆ ನೀಡಿದೆ.

    ಮೃತಪಟ್ಟವರಲ್ಲಿ ನಾಲ್ವರು ವಯಸ್ಕರು ಮತ್ತು ನಾಲ್ವರು ಮಕ್ಕಳು ಎಂದು ತಿಳಿದುಬಂದಿದೆ. ಮೃತರೆಲ್ಲರೂ ಕೇರಳ ಮೂಲದವರು. ಮೃತರನ್ನು ಪ್ರವೀಣ್​ ಕೃಷ್ಣನ್​ ನಾಯರ್​, ಸರಣ್ಯ ಸಸಿ, ಶ್ರೀಭದ್ರ ಪ್ರವೀಣ್​, ಆರ್ಚ ಪ್ರವೀಣ್​, ಅಭಿನವ್​ ಸರಣ್ಯ ನಾಯರ್​, ರಂಜಿತ್​ ಕುಮಾರ್​ ಅದಾತೊಲತ್​ ಪುನಥಿಲ್​, ಇಂದು ಲಕ್ಷ್ಮಿ ಪೀತಾಂಬರಂ ರಗಲತಾ ಮತ್ತು ವೈಷ್ಣವ್​ ರಂಜಿತ್​ ಎಂದು ಗುರುತಿಸಲಾಗಿದೆ.

    ಘಟನೆ ಬಗ್ಗೆ ಮಾತನಾಡಿರುವ ಕೇರಳ ಪ್ರವಾಸೋದ್ಯಮ ಸಚಿವ ಕದಕಂಪಲ್ಲಿ ಸುರೇಂದ್ರನ್​, ಕಾಠ್ಮಂಡುವಿನಲ್ಲಿರುವ ಭಾರತ ಮಿಷನ್​ ಅನ್ನು ಸಂಪರ್ಕಿಸಿ, ಮಾಹಿತಿ ನೀಡಿದ್ದೇವೆ. ಶವಪರೀಕ್ಷೆ ನಂತರ ಇತರೆ ಕ್ರಮಕ್ಕೆ ಸೂಚಿಸಿ, ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts