More

    ಕೆಮಿಕಲ್​ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿ 8 ಮಂದಿ ಸಜೀವ ದಹನ: ಅನೇಕರಿಗೆ ಗಾಯ

    ಮುಂಬೈ: ಕೆಮಿಕಲ್​ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅಗ್ನಿ ದುರಂತದಿಂದಾಗಿ 8 ಮಂದಿ ಸಾವಿಗೀಡಾಗಿ, ಅನೇಕರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಪಲ್ಘಾರ್​ ಜಿಲ್ಲೆಯಲ್ಲಿನ ಬೋಯಿಸರ್​ ಪ್ರದೇಶದಲ್ಲಿ ಶನಿವಾರ ರಾತ್ರಿ ನಡೆದಿದೆ.

    ರಾಸಾಯನಿಕ ಕಾರ್ಖಾನೆಯು ಕೊಲ್ವಾಡೆ ಗ್ರಾಮದಲ್ಲಿದೆ. ನಿನ್ನೆ ರಾತ್ರಿ ಸುಮಾರು 7.20ರ ಸಮಯದಲ್ಲಿ ಸ್ಫೋಟ ಸಂಭವಿಸಿದ್ದು, ಸ್ಫೋಟದ ಸದ್ದು ಸುಮಾರು 15 ಕಿ.ಮೀ ವರೆಗೂ ಕೇಳಿದೆ ಎಂದು ಪೊಲೀಸ್​ ವಕ್ತಾರ ಹೇಮಂತ್​ ಕಟ್ಕರ್​ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಸಾಕಷ್ಟು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ತಹಬದಿಗೆ ತಂದಿದ್ದಾಗಿ ಪಲ್ಘಾರ್​ ಪೊಲೀಸ್​ ವರಿಷ್ಠಾಧಿಕಾರಿ ಗೌರವ್​ ಸಿಂಗ್​ ಕೂಡ ಖಚಿತಪಡಿಸಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ತಂಡವು ಕಾರ್ಯಾಚರಣೆಗೆ ಸಾಥ್​ ನೀಡಿದೆ.

    ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts