More

    ಇವರೆಷ್ಟು ಪ್ರಭಾವಿಗಳು…! ವಿಶೇಷ ವಿಮಾನದಲ್ಲಿ ಪರಾರಿಯಾಗುತ್ತಿದ್ದ ಮಲೇಷ್ಯಾದ 8 ತಬ್ಲಿಘಿಗಳು

    ಕೋವಿಡ್​-19 ಕಾಯಿಲೆಯ ಹಾಟ್​ಸ್ಪಾಟ್​ ಆಗಿರುವ ನವದೆಹಲಿಯ ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡಿದ್ದವರಿಗಾಗಿ ದೇಶದೆಲ್ಲೆಡೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ಪೊಲೀಸರ ಕಣ್ತಪ್ಪಿಸಿ ದೆಹಲಿಯಲ್ಲಿಯೇ ಅಡಗಿದ್ದು, ವಿಶೇಷ ವಿಮಾನದಲ್ಲಿ ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ ಎಂಟು ಜನರನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಇವರೆಷ್ಟು ಪ್ರಭಾವಿಗಳು ಎಂಬುದು ಗೊತ್ತಾಗುತ್ತದೆ.

    ಜಮಾತ್​ನಲ್ಲಿ ಪಾಲ್ಗೊಂಡವರು ಯಾರಾದರೂ ಇದ್ದಲ್ಲಿ, ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ತಪಾಸಣೆಗೆ ಒಳಗಾಗಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪದೆಪದೇ ಮನವಿ ಮಾಡಿಕೊಳ್ಳುತ್ತಿವೆ. ಹೀಗಿದ್ದರೂ ದೆಹಲಿಯಲ್ಲಿಯೇ ಇದ್ದು, ತಪಾಸಣೆಗೆ ಒಳಗಾಗದೆ ತಮ್ಮ ದೇಶಕ್ಕೆ ತೆರಳುತ್ತಿದ್ದ ಮಲೇಷ್ಯಾದ ಎಂಟು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಅವರನ್ನು ಆರೋಗ್ಯ ತಪಾಸಣೆಗಾಗಿ ವೈದ್ಯರಿಗೆ ಒಪ್ಪಿಸಿದ್ದಾರೆ.

    ಸದ್ಯ ವಿಮಾನ ಸಂಚಾರ, ಅದರಲ್ಲೂ ವಿದೇಶಿ ವಿಮಾನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ವಿದೇಶಗಳಲ್ಲಿ ಸಿಲುಕಿರುವ ತನ್ನ ಪ್ರಜೆಗಳನ್ನು ಕರೆದೊಯ್ಯಲು ಪರಿಹಾರ ಕೆಲ ದೇಶಗಳ ವಿಮಾನ ಸಂಚಾರಕ್ಕೆ ಅನುಮತಿ ಕಲ್ಪಿಸಲಾಗಿದೆ. ಇದಕ್ಕಾಗಿ ಆಗಮಿಸಿದ್ದ ಮಲೇಷ್ಯಾದ ಮಾಲಿಡೋ ಏರ್​ನ ವಿಮಾನದಲ್ಲಿ ಪ್ರಯಾಣಿಸಲು ಇವರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

    ಜಮಾತ್​ನ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದವರನ್ನು ಹುಡುಕಲು ದೂರವಾಣಿ ಮೂಲಕ ಅವರ ಜಾಡನ್ನು ಗುರುತಿಸಲಾಗಿತ್ತು. ದೆಹಲಿ ವಿವಿಧ ಭಾಗಗಳಲ್ಲಿ ಇವರು ಬೀಡುಬಿಟ್ಟಿದ್ದರು. ವಿಮಾನವೇರಲು ಬಂದಾಗ ಸಿಕ್ಕಿಬಿದ್ದಿದ್ದಾರೆ.

    ಜಮಾತ್​ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದೇಶಿಯರು ಪಾಲ್ಗೊಂಡಿದ್ದದರು. ವಿದೇಶಿಯರು ಸೇರಿ ಜಮಾತ್​ ನಂಟು ಹೊಂದಿದ್ದ ಸಾವಿರಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದೆ. ಹೀಗಾಗಿ ಜಮಾತ್​ನಲ್ಲಿ ಪಾಲ್ಗೊಂಡ ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಬೇಕಾಗಿದೆ.

    ಪ್ರವಾಸಿ ವೀಸಾ ಮೇಲೆ ಬಂದು ತಬ್ಲೀಘ್​ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರ ವೀಸಾವನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತಿದೆ. ಮಾತ್ರವಲ್ಲ ಅಂಥ ವಿದೇಶಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ 960 ವೀಸಾಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್​​)

    ನನಗೆ ಕೋವಿಡ್​-19 ಬಂದಿದೆ ಎಂದು ಹಾಡು ಹೇಳುತ್ತಾ ಆಸ್ಪತ್ರೆಯ ವಾರ್​ರೂಂನಲ್ಲಿ ನರ್ತಿಸಿದ ಸೋಂಕಿತ ವ್ಯಕ್ತಿ

    ತಬ್ಲಿಘಿ ಜಮಾತ್​ ಮುಖ್ಯಸ್ಥ ಮೌಲಾನಾ ಸಾದ್ ಎಲ್ಲಿ? ಮನೆಯಲ್ಲೂ ಇಲ್ಲ…ಸುಳಿವೂ ಸಿಗುತ್ತಿಲ್ಲ..; ಸಾದ್​ ಬಂಧನ ದೆಹಲಿ ಪೊಲೀಸರ ಸದ್ಯದ ಆದ್ಯತೆಯಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts