More

    ವಂಚಕ ಕಂಪನಿ ಅಜ್ಮೀರ್ ಗ್ರೂಪ್‌ನ 8.41 ಕೋಟಿ ರೂ. ಮೊತ್ತದ ಆಸ್ತಿ ಜಪ್ತಿ

    ಬೆಂಗಳೂರು: ಅಧಿಕ ಬಡ್ಡಿ ಆಮಿಷವೊಡ್ಡಿ ಜನರಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಪಡೆದು ವಂಚಿಸಿದ್ದ ಅಜ್ಮೀರ್ ಗ್ರೂಪ್‌ಗೆ ಸೇರಿದ 8.41 ಕೋಟಿ ರೂಪಾಯಿಯನ್ನು ಜಾರಿ ನಿರ್ದೇಶನಾಲಯದ (ಇಡಿ) ಜಪ್ತಿ ಮಾಡಿದೆ. ಜಯನಗರದಲ್ಲಿ ತಬ್ರೇಜ್ ಎಂಬಾತ ‘ಅಜ್ಮೀರ್ ಗ್ರೂಪ್ ಕಂಪನಿ’ ತೆರೆದಿದ್ದ. ಅಮಾಯಕ ಜನರಿಗೆ ಅಧಿಕ ಬಡ್ಡಿ ಕೊಡುವುದಾಗಿ ಆಮಿಷ ಒಡ್ಡಿ ಲಕ್ಷಾಂತರ ರೂಪಾಯಿಯನ್ನು ಹೂಡಿಕೆ ಮಾಡಿಸಿಕೊಂಡು ಆರಂಭದಲ್ಲಿ ಹಣ ಕೊಟ್ಟು ಆನಂತರ ವಂಚನೆ ಮಾಡಿದ್ದ. ಅಂದಾಜು 500 ಕೋಟಿ ರೂಪಾಯಿ ವಂಚನೆ ಮಾಡಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

    ಅಜ್ಮೀರ್ ವಂಚನೆ ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳು, ರಾಜ್ಯ ಸರ್ಕಾರದ ಮೂಲಕ ಇಡಿ ಅಧಿಕಾರಿಗಳಿಗೆ ಅಜ್ಮೀರ್ ಗ್ರೂಪ್ ಮಾಲೀಕ ಮತ್ತು ಅದರ ನಿರ್ದೇಶಕರ ಆಸ್ತಿಯನ್ನು ಪತ್ತೆ ಹಚ್ಚಿ ವರದಿ ಸಲ್ಲಿಸಿದ್ದರು. ಈ ಕುರಿತು ಅಜ್ಮೀರ್ ಗ್ರೂಪ್ ವಿರುದ್ಧ ಅಕ್ರಮ ಹಣಕಾಸಿನ ವ್ಯವಹಾರ ಆರೋಪದಡಿ ಪ್ರಕರಣ ದಾಖಲಿಸಿಕೊಂಡ ಇಡಿ ಅಧಿಕಾರಿಗಳು ಕಾನೂನು ಪ್ರಕ್ರಿಯೆ ಮುಗಿಸಿ ಅಜ್ಮೀರ್ ಗ್ರೂಪ್‌ಗೆ ಸೇರಿದ ಕೃಷಿ ಭೂಮಿ, ಪ್ಲ್ಯಾಟ್‌ಗಳು ಮತ್ತು ಬ್ಯಾಂಕ್ ಖಾತೆ ಜಪ್ತಿ ಸೇರಿ 8.41 ಕೋಟಿ ರೂಪಾಯಿ ಮೌಲ್ಯ ಆಸ್ತಿಯನ್ನು ಜಪ್ತಿ ಮಾಡಿರುವುದಾಗಿ ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಹೂಡಿಕೆದಾರರಿಗೆ ಹಣ ಹಿಂದಿರುಗಿಸಲು ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ.

    400 ವರ್ಷಗಳ ಬಳಿಕದ ಕೌತುಕದ ಫೋಟೋ ಶೇರ್​ ಮಾಡಿದ ನಾಸಾ: ಶುರುವಾಗಿದೆ ಗುರು-ಶನಿ ಟ್ರೆಂಡ್​

    ಬಸ್ ಒಳಗೆ ಆಡುತ್ತಿದ್ದ ಬಾಲಕಿಯ ರೇಪ್​ ಮಾಡಿ ಗೋಣಿ ಚೀಲದಲ್ಲಿ ತುಂಬಿಟ್ಟ ಚಾಲಕ!

    ನೀನು ದಪ್ಪ ಇದ್ದಿ, ಡಿವೋರ್ಸ್​ ಕೊಡುತ್ತೇನೆ ಎನ್ನುತ್ತಿದ್ದಾರೆ ಪತಿ- ಅವರಿಗೆ ವಿಚ್ಛೇದನ ಸಿಗುತ್ತಾ?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts