More

    8 ಅಡಿ ನೀರು ಬಂದರೆ ಲಿಂಗನಮಕ್ಕಿ ಡ್ಯಾಂ ಗೇಟ್ ಓಪನ್

    ಕಾರ್ಗಲ್: ಪ್ರಸ್ತುತ ಲಿಂಗನಮಕ್ಕಿ ಜಲಾಶಯದ ಮಟ್ಟ 1808 ಅಡಿಗಳಿಗೆ ತಲುಪಿದ್ದು ಶೇ. 77 ನೀರು ಸಂಗ್ರಹವಾಗಿದೆ. ಪ್ರಸ್ತುತ ಜಲಾಶಯಕ್ಕೆ 50 ಸಾವಿರ ಕ್ಯೂಸೆಕ್‌ಗೂ ಅಧಿಕ ಪ್ರಮಾಣದಲ್ಲಿ ಒಳಹರಿವು ಇದೆ. 1819 ಅಡಿಗಳ ಗರಿಷ್ಠ ಮಟ್ಟವನ್ನು ಹೊಂದಿರುವ ಲಿಂಗನಮಕ್ಕಿ ಜಲಾಶಯದ ಮಟ್ಟ 1,816 ಅಡಿಗಳಿಗೆ ತಲುಪುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರೇಡಿಯಲ್ ಗೇಟ್ ತೆರೆದು ಹೆಚ್ಚುವರಿ ನೀರನ್ನು ನದಿಗೆ ಹೊರಹರಿಸಲಾಗುವುದು ಎಂದು ಕೆಪಿಸಿ ಕಾಮಗಾರಿ ವಿಭಾಗದ ಮುಖ್ಯ ಅಭಿಯಂತ ಜಿ.ಇ.ಮೋಹನ್ ತಿಳಿಸಿದರು.
    ಲಿಂಗನಮಕ್ಕಿ ಜಲಾಶಯ ಕ್ರಸ್ಟ್ ಮಟ್ಟವನ್ನು(ಬೆಡ್ ಲೆವೆಲ್) ತಲುಪಿದ ಹಿನ್ನೆಲೆಯಲ್ಲಿ ವಾಡಿಕೆಯಂತೆ ಕೆಪಿಸಿಯಿಂದ ಬುಧವಾರ ತಾಯಿ ಶರಾವತಿಗೆ ಮೊದಲ ಪೂಜೆಯನ್ನು ನೆರವೇರಿಸಿ, ಬಾಗಿನವನ್ನು ಸಮರ್ಪಿಸಿ ಮಾತನಾಡಿದರು.
    ಶರಾವತಿ ಜಲಾನಯನ ಪ್ರದೇಶ ಹಾಗೂ ಅಣೆಕಟ್ಟು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈ ಬಾರಿಯೂ ಅಣೆಕಟ್ಟು ಭರ್ತಿಯಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts