More

    8ರಿಂದ ತ್ಯಾವರೆಕೊಪ್ಪ, ಸಕ್ರೆಬೈಲು ಓಪನ್

    ಶಿವಮೊಗ್ಗ: ಸತತ ಎರಡೂವರೆ ತಿಂಗಳಿಂದ ಬಂದ್ ಆಗಿದ್ದ ಜಿಲ್ಲೆಯ ಪ್ರವಾಸಿ ತಾಣಗಳಾದ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮ ಹಾಗೂ ಸಕ್ರೆಬೈಲಿನ ಆನೆ ಬಿಡಾರ ಜೂ.8ರಿಂದ ಪುನರಾರಂಭಗೊಳ್ಳಲಿದ್ದು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಈಗಾಗಲೇ ಅಲ್ಲಿನ ಸಿಬ್ಬಂದಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

    ಹುಲಿ-ಸಿಂಹಧಾಮಕ್ಕೆ ತೆರಳುವ ಪ್ರವಾಸಿಗಳು ಸಫಾರಿ ವಾಹನ ಹತ್ತುವ ಮುನ್ನವೇ ಸ್ಯಾನಿಟೈಸ್ ಮಾಡಿಕೊಳ್ಳಬೇಕು. ಮಾಸ್ಕ್ ಧರಿಸುವುದರ ಜತೆಗೆ ಪ್ರವಾಸಿಗರು ಕಡ್ಡಾಯವಾಗಿ ಪರಸ್ಪರ ಅಂತರ ಕಾಯ್ದುಕೊಳ್ಳಬೇಕಿದೆ. ಸಫಾರಿ ಬಳಿಕ ಪ್ರತಿ ಬಾರಿಯೂ ವಾಹನವನ್ನು ಸ್ಯಾನಿಟೈಜ್ ಮಾಡಲಾಗುತ್ತದೆ. ಶೇ.50 ಸೀಟು ಮಾತ್ರ ತುಂಬಬೇಕಿದೆ. ವಾಹನ ಚಾಲಕ ಮತ್ತು ಸಿಬ್ಬಂದಿ ಮಾಸ್ಕ್ ಧರಿಸಬೇಕಿದೆ.

    ಹಾಗೆಯೇ ಸಕ್ರೆಬೈಲು ಆನೆ ಬಿಡಾರದಲ್ಲೂ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಲಾಕ್​ಡೌನ್​ಗೂ ಮೊದಲಿನಂತೆ ಎಲ್ಲರಿಗೂ ಪ್ರವೇಶವಿದೆ. ಕಾರಿನಲ್ಲಿ ಚಾಲಕ ಹೊರತುಪಡಿಸಿ ಮೂವರು ಮಾತ್ರ ಬರಬೇಕಾಗುತ್ತದೆ. ಬಸ್​ಗಳಲ್ಲಿ ಬರುವವರು ಸ್ವಂತ ಜವಾಬ್ದಾರಿ ಹೊಂದಿರಬೇಕಾಗುತ್ತದೆ ಎನ್ನುತ್ತಾರೆ ಡಿಸಿಎಫ್ ಐ.ಎಂ.ನಾಗರಾಜ್.

    ಕರೊನಾ ಹಿನ್ನೆಲೆಯಲ್ಲಿ ಲಯನ್ ಸಫಾರಿಯನ್ನು ಬಂದ್ ಮಾಡಲಾಗಿತ್ತು. ಎರಡೂವರೆ ತಿಂಗಳ ಬಳಿಕ ಪ್ರವಾಸಿಗರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಅದಕ್ಕಾಗಿ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಹುಲಿ-ಸಿಂಹಧಾಮದ ಕಾರ್ಯಕಾರಿ ನಿರ್ವಾಹಕ ಮುಕುಂದ್​ಚಂದ್ರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts