More

    ದೊಡ್ಡ ಮರ ಬಿದ್ದಾಗ ಭೂಮಿ ನಡುಗುತ್ತದೆ ಎಂದು ನಿಮ್ಮಂತೆ ಹೇಳಲಿಲ್ಲ: ಹಳೇ ಘಟನೆ ಕೆದಕಿ ಕಾಂಗ್ರೆಸ್​ಗೆ ಅಮಿತ್​ ಷಾ ತಿರುಗೇಟು

    ನವದೆಹಲಿ: ಕಳೆದ ತಿಂಗಳಾಂತ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಸಿದಂತೆ ಸಂಸತ್ತಿನಲ್ಲಿಂದು ನಡೆದ ಚರ್ಚಾ ವೇಳೆ ಕಾಂಗ್ರೆಸ್​ ವಿರುದ್ಧ ಗೃಹ ಸಚಿವ ಅಮಿತ್​ ಷಾ ಹರಿಹಾಯ್ದರು. ಇತರೆ ಪಕ್ಷಗಳ ವಿರುದ್ಧ ಬೊಟ್ಟು ಮಾಡಲು ಕಾಂಗ್ರೆಸ್​ಗೆ ಯಾವುದೇ ಹಕ್ಕಿಲ್ಲ. ಅದರ ಸಾಧನೆಯ ಹಾದಿಯನೊಮ್ಮೆ ನೋಡಿಕೊಳ್ಳಲಿ ಎಂದು ಕುಟುಕಿದರು.

    ಭಾರತದಲ್ಲಿ ಈವರೆಗೂ ನಡೆದಿರುವ ಗಲಭೆಯಲ್ಲಿ ಶೇ. 76 ರಷ್ಟು ಮಂದಿ ಕಾಂಗ್ರೆಸ್​ ಆಡಳಿತಾವಧಿಯಲ್ಲೇ ಹತ್ಯೆಯಾಗಿದ್ದಾರೆ. ನಮ್ಮ ಪ್ರಶ್ನಿಸಲು ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಲೋಕಸಭೆಯಲ್ಲಿ ಅಮಿತ್​ ಷಾ ಗುಡುಗಿದರು. ಈಶಾನ್ಯ ದೆಹಲಿ ಗಲಭೆ ಉಲ್ಲೇಖಿಸಿ ಅಮಿತ್​ ಷಾ ರಾಜೀನಾಮೆಗೆ ಆಗ್ರಹಿಸಿದ ಕಾಂಗ್ರೆಸ್​ ನಾಯಕರಿಗೆ ಷಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

    ಶಾಂತಿಗಾಗಿ ಗೃಹ ಸಚಿವರು ಮನವಿಯನ್ನೇ ಮಾಡಲಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ನಾನು ಮನವಿ ಮಾಡಿದ್ದೇನೆ. ನಾನು ಮಾಡದೇ ಇದಿದ್ದರೆ, “ದೊಡ್ಡ ಮರ ಬಿದ್ದಾಗ ಭೂಮಿ ನಡಗುತ್ತದೆ ಎಂದು ನಾನು ಹೇಳುತ್ತಿರಲಿಲ್ಲ” ಎಂದು ರಾಜೀವ್​ ಗಾಂಧಿ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್​ಗೆ ತಿರುಗೇಟು ನೀಡಿದರು.

    ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಸಿಖ್​ ಬಾಡಿಗಾರ್ಡ್​ಗಳು ಹತ್ಯೆ ಮಾಡಿದ ಬಳಿಕ 1984ರಲ್ಲಿ ನಡೆದಿದ್ದ ಸಿಕ್​ ವಿರೋಧಿ ಗಲಭೆ ವೇಳೆ ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಅವರು ನೀಡಿದ್ದ ಕುಖ್ಯಾತ ಹೇಳಿಕೆಯನ್ನು ಅಮಿತ್​ ಷಾ ಕಾಂಗ್ರೆಸ್​ಗೆ ಮರು ನೆನಪಿಸಿದರು.

    ಸಿಖ್​ ವಿರೋಧಿ ಗಲಭೆಯಲ್ಲಿ 3000 ಸಿಖ್​ ಸಹೋದರ-ಸಹೋದರಿಯರನ್ನು ಕೊಲ್ಲಲಾಗಿತ್ತು. ಈ ವೇಳೆ ದೊಡ್ಡ ಮರಬಿದ್ದಾಗ ಭೂಮಿ ನಡುಗುತ್ತದೆ ಎಂದು ನಿಮ್ಮ ರೀತಿ ನಾವು ಹೇಳಲಿಲ್ಲ ಎಂದು ಷಾ ಹೇಳಿದರು. ಇತ್ತ ಅಮಿತ್​ ಷಾ ಅವರು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಂತೆ ಕಾಂಗ್ರೆಸ್​ ನಾಯಕರು ಮಧ್ಯದಲ್ಲೇ ಎದ್ದು ಸದನದಿಂದ ಹೊರನಡೆದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts