More

    ಕಾಯ್ದೆ ವಿರುದ್ಧ 75 ಸಾವಿರ ಮಂದಿ ಸಹಿ

    ಉಡುಪಿ: ಕೇಂದ್ರ ಹಾಗೂ ರಾಜ್ಯಸರ್ಕಾರದ ಭೂ ಮಸೂದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತರ ಹಾಗೂ ಕಾರ್ಮಿಕರ ಪಾಲಿಗೆ ಮರಣ ಶಾಸನವಾಗಿದೆ. ರೈತ ವಿರೋಧಿ ನೀತಿ ಕಾಯ್ದೆಗಳನ್ನು ವಿರೋಧಿಸಿ ಜಿಲ್ಲೆಯಲ್ಲಿ 75 ಸಾವಿರ ಮಂದಿ ರೈತರು ಸಹಿ ಚಳವಳಿಯಲ್ಲಿ ಭಾಗವಹಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದರು.

    ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ನಗರದ ನರ್ಮ್ ಬಸ್ ನಿಲ್ದಾಣದ ಸಮೀಪ ಕೇಂದ್ರ, ರಾಜ್ಯ ಸರ್ಕಾರದ ಭೂ ಮಸೂದೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಜಿಲ್ಲೆಯ 1,111 ಬೂತ್‌ಗಳಲ್ಲಿ ರೈತರಿಂದ ಸಂಗ್ರಹಿಸಲಾದ ಸಹಿಯ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

    ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಸರ್ಕಾರಗಳ ನಿಲುವನ್ನು ಟೀಕಿಸಿದರು. ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಪ್ರಶಾಂತ್ ಜತ್ತನ್ನ, ಶಶಿಧರ್ ಶೆಟ್ಟಿ, ರೋಶನಿ ಒಲಿವೆರಾ, ನವೀನ್‌ಚಂದ್ರ ಸುವರ್ಣ, ಪ್ರವೀಣ್ ಶೆಟ್ಟಿ, ಮಂಜನಾಥ್ ಪೂಜಾರಿ, ಸದಾಶಿವ ದೇವಾಡಿಗ, ಶಂಕರ್ ಕುಂದರ್, ಹರಿಪ್ರಸಾದ್ ಕುಂದಾಪುರ, ಮದನ್ ಕುಮಾರ್, ಪ್ರದೀಪ್ ಶೆಟ್ಟಿ, ನರಸಿಂಹ ಮೂರ್ತಿ, ಪ್ರಖ್ಯಾತ್ ಶೆಟ್ಟಿ, ರಾಜು ಪೂಜಾರಿ, ಭಾಸ್ಕರ್ ರಾವ್ ಕಿದಿಯೂರು, ಕೃಷ್ಣಮೂರ್ತಿ ಆಚಾರ್ಯ, ರಮೇಶ್ ಕಾಂಚನ್, ದಿನಕರ್ ಹೇರೂರು, ಉದ್ಯಾವರ ನಾಗೇಶ್ ಕುಮಾರ್, ಗೀತಾ ವಾಗ್ಳೆ, ಜ್ಯೋತಿ ಹೆಬ್ಬಾರ್, ಡಾ. ಸುನೀತಾ, ಚಂದ್ರಿಕಾ ಶೆಟ್ಟಿ, ಮಹಾಬಲ ಕುಂದರ್, ಶಶಿಧರ್ ಶೆಟ್ಟಿ ಭಾಗವಹಿಸಿದರು. ಹರೀಶ್ ಕಿಣಿ ನಿರೂಪಿಸಿ, ವೆರೋನಿಕಾ ಕರ್ನೇಲಿಯೋ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts