More

    72 ವಿದ್ಯಾರ್ಥಿಗಳಿಗೆ ಪರೀಕ್ಷಾ ನಿಷೇಧ, ದಲಿತ ಮುಖಂಡರ ಪ್ರತಿಭಟನೆ

    ಸವದತ್ತಿ: ಇಲ್ಲಿನ ಜಿ.ಜಿ. ಚೋಪ್ರಾ ಕಾಲೇಜಿನಲ್ಲಿ ಹಾಜರಾತಿ ನೆಪವೊಡ್ಡಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಮತಿ ನಿರಾಕರಿಸಿದ್ದನ್ನು ಖಂಡಿಸಿ ವಿವಿಧ ದಲಿತ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು, ಪಾಲಕರು ಮಂಗಳವಾರ ಕಾಲೇಜಿನಲ್ಲಿ ಪ್ರತಿಭಟಿಸಿದರು. ಪ್ರಾಚಾರ್ಯ ಹಾಗೂ ಸಿಬ್ಬಂದಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಕಾಲೇಜಿನ ಪ್ರಾಚಾರ್ಯ ಹಾಗೂ ಸಿಬ್ಬಂದಿಯು ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಹಾಜರಾತಿ ನೆಪವೊಡ್ಡಿ ಪಿಯುಸಿ ಪ್ರಥಮ ವರ್ಷದ 72ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ನಿಷೇಧಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮಕ್ಕಳು ಹಾಜರಾಗದಿದ್ದಲ್ಲಿ ಪಾಲಕರಿಗೆ ಮಾಹಿತಿ ನೀಡಬೇಕಿತ್ತು. ಪಾಲಕರನ್ನು ಸಂಪರ್ಕಿಸದೆ ಏಕಾಏಕಿ ಪರೀಕ್ಷೆಗಳಿಂದ ಬಹಿಷ್ಕರಿಸಿದ್ದಾರೆ. ಇದೀಗ ವಿದ್ಯಾರ್ಥಿಗಳ ಭವಿಷ್ಯದ ಗತಿ ಏನು ಎಂದು ಪ್ರಶ್ನಿಸಿದ್ದಾರೆ. ಮಾನವೀಯ ದೃಷ್ಟಿಯಿಂದಾದರೂ ಅವಕಾಶ ನೀಡಬೇಕಿತ್ತು ಎಂದು ಒತ್ತಾಯಿಸಿದ್ದಾರೆ.

    ಕಾಲೇಜು ಆರಂಭದಿಂದ ನಮಗೆ ಪುಸ್ತಕ ನೀಡಿಲ್ಲ. ನೀಡಿದರೂ 200 ರೂ. ವಸೂಲಿ ಮಾಡಿದ್ದಾರೆ. ಬಡಮಕ್ಕಳ ಅಭ್ಯಾಸ ಕಷ್ಟಕರವಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಮಕ್ಕಳ ಹಾಜರಾತಿಯಲ್ಲಿ ಕೊರತೆಯಿದೆ. ಕಾಲೇಜು ಅವಧಿಯಲ್ಲಿ ಹೊರಗೆ ಸುತ್ತಾಡುತ್ತಾರೆ. ಪಾಠದ ಮೊದಲ ಅಧ್ಯಾಯವೇ ಇವರಿಗೆ ಗೊತ್ತಿಲ್ಲ.

    ನಿಯಮಾನುಸಾರ ಪರೀಕ್ಷೆಗೆ ಅನುಮತಿ ನಿರಾಕರಿಸಿದೆ ಎಂದು ಪ್ರಾಂಶುಪಾಲ ವಿ.ವಿ.ಕೋಳೆಕರ ತಿಳಿಸಿದ್ದಾರೆ. ನಾಗಪ್ಪ ಬಡೆಪ್ಪನವರ, ಗದಿಗೆಪ್ಪ ದೊಡಮನಿ, ಶಿವಾನಂದ ಮಾದರ, ಭರಮಪ್ಪ ಈಟಿ, ಸುರೇಶ ಹಾಸಟ್ಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts